ಹುಳಿಯಾರಿನ ಸೀತಾರಾಮ ಕಲ್ಯಾಣಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಗ್ರಾಮಾಭಿವೃದ್ದಿ ಯೋಜನೆಯಡಿ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ,ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ,ವಿಪ್ರಪ್ರತಿಷ್ಠಾನ,ಮದ್ಯವರ್ಜನ ವ್ಯವಸ್ಥಾಪನ ಸಮಿತಿಯ ಸಹಯೋಗದಲ್ಲಿ ಆಯೋಜಿಸಿರುವ ಒಂದುವಾರಗಳ ಕಾಲದ 577ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರವೇರಿಸಿ, ಅವರು ಆಶೀರ್ವಚನ ನೀಡಿದರು.
ಮಾನವ ಜನ್ಮವೆಂಬುದು ಶ್ರೇಷ್ಥವಾದ್ದು,ನಾವು ನಮ್ಮ ಮನಸ್ಸಿನ ಚೆಂಚಲತೆಗೆ ಬಲಿಯಾಗಿ ಹತ್ತು ಹಲವು ಕಾರ್ಯಗಳನ್ನು ಕಾರಣವಿಲ್ಲದೆ ಮಾಡುತ್ತೇವೆ ಅಂತಹ ಕಾರ್ಯಗಳಗಳಲ್ಲಿ ಮದ್ಯಪಾನ ಮಾಡುವುದನ್ನು ಕಲಿಯುತ್ತಾರೆ. ಆದರೆ ಕುಡಿಯುವರಿಗೆ ತಾವು ಮಾಡುತ್ತಿರುವುದು ತಪ್ಪು,ಅದರಿಂದ ಆಗುವಂತ ನಷ್ಟ,ತೊಂದರೆ,ಸಮಸ್ಯೆಗಳು ಎಂತಹವು ಎಂಬುದನ್ನು ಮನವರಿಕೆ ಮಾಡಿಕೊಡುವ ಕಾರ್ಯ ಆಗಬೇಕಿದ್ದು,ಆ ಕಾರ್ಯಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮುಂದಾಗಿದೆ. ಜೀವನದಲ್ಲಿ ನಮ್ಮ ನಡೆ,ನುಡಿ,ದಿನನಿತ್ಯದ ಕಾರ್ಯಚಟುವಟಿಕೆಗಳು ಉತ್ತವಾಗಿದ್ದಾಗ ನಮ್ಮನ್ನು ಸಮಾಜ ಗೌರವಿಸುತ್ತದೆ ಎಂದರು.
ಚುನಾವಣೆ ಸಂಧರ್ಭಗಳಲ್ಲಿ ಕುಡಿತದ ತೀವ್ರತೆ ಹೆಚ್ಚಾಗುವುದು ಸರ್ವೆ ಸಾಮಾನ್ಯವಾಗಿದ್ದು,ಸಾಕಷ್ಟು ಜನ ಕುಡಿತಕ್ಕೆ ದಾಸರಾಗುತ್ತಾ ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡುವಲ್ಲಿ ವಿಫಲರಾಗುತ್ತಿದ್ದು,ಬಾಟಲಿಯ ಆಸೆಗೆ ಬಾಯೊಡ್ಡದೇ ಯಾರು ತಮ್ಮ ಸಮಾಜಕ್ಕೆ ಉತ್ತಮ ಕಾರ್ಯ ಮಾಡುತ್ತಾರೆ ಎಂಬುದನ್ನು ಅರಿತುಕೊಂಡು ಮತಚಲಾಯಿಸಿ ಎಂದರು.ಮಾನವನ ಜೀವನದಲ್ಲಿ ಬದಲಾವಣೆಯಾದರೆ ಸಮಾಜವೇ ಬದಲಾಣೆಯಾಗುತ್ತದೆ ಇದಕ್ಕೆಲ್ಲಾ ನಮ್ಮ ನಾಗರೀಕತೆಗಳು ಬೆಳೆದು ಬಂದ ಮಾರ್ಗ ನಮಗೆಲ್ಲ ತಿಳಿದಿರುವ ವಿಷಯವಾಗಿದೆ ಎಂದರು.ಮದ್ಯವರ್ಜನ ಶಿಭಿರದಲ್ಲಿ ಪಾಲ್ಗೊಂಡಿರುವ ಮದ್ಯವ್ಯಸನಿಗಳು ಮುಂದಿನ ಒಂದು ವಾರದ ನಂತರ ಪಾನಮುಕ್ತರಾಗಿ ದೇಶ,ತಮ್ಮ ಸಂಸಾರಕ್ಕೆ ಉತ್ತಮ ಪ್ರಜೆಯಾಗಿ ಎಂದು ಹಾರೈಸಿದರು.
ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಿರುವುದು |
ಸಮಾರಂಭದಲ್ಲಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ್,ಮದ್ಯವರ್ಜನ ಶಿಬಿರದ ಅಧ್ಯಕ್ಷ ನಟರಾಜ್ ಗುಪ್ತ,ನಿವೃತ್ತ ಶಿಕ್ಷಕ ಹೆಚ್.ಎಸ್.ಲಕ್ಷ್ಮಿನರ್ಸಿಂಹಯ್ಯ,ಮುಖಂಡರಾದ ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಧರ್ಮಸ್ಥಳ ಸಂಘದ ಶಿಭಿರಾಧಿಕಾರಿ ನಾಗೇಶ್,ಆರೋಗ್ಯಾಧಿಕಾರಿ ಜಯಲಕ್ಷ್ಮಿ, ರೋಹಿತಾಕ್ಷ,ಕಮಾಲಕರ್,ಕೆಂಕೆರೆ ಲೋಕೇಶ್,ಹೇಮಲತ ಸೇರಿದಂತೆ ಹೋಬಳಿಯ ಎಲ್ಲಾ ಧರ್ಮಸ್ಥಳ ಸಂಘದ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ