ವಿಧಾನಸಭಾ ಚುನಾವಣಾ ದಿನ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ಎಲ್ಲಾ ಪಕ್ಷಗಳ ನಾಯಕರುಗಳು ಪೈಪೂಟಿಯುತ ಚುನಾವಣಾ ಪ್ರಚಾರ ನಡೆಸುತ್ತಿದ್ದು,ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ತಮ್ಮ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ಪ್ರಚಾರದಲ್ಲಿ ಧುಮುಕಿದ್ದು,ಸೋಮವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ಕೆಜೆಪಿ ಪ್ರಚಾರ ಗರಿಗೆದರಿತ್ತು.
ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿಯವರು ಬಸ್ ನಿಲ್ದಾಣದ ಪ್ರತಿ ಅಂಗಡಿಗಳಿಗೆ ತೆರಳಿ ತಮ್ಮ ಪಕ್ಷದ ಗುರುತಾದ ತೆಂಗಿನಕಾಯಿ ಗುರುತಿಗೆ ಓಟು ಕೊಡಿ ಎಂದು ಮತಯಾಚಿಸಿದರೆ, ಕೆಜೆಪಿ ಕಾರ್ಯಕರ್ತರು ತಮ್ಮ ನಾಯಕ ಮಾಧುಸ್ವಾಮಿ ಅವರಿಗೆ ತಮ್ಮ ಮತ ನೀಡಿ ಅವರನ್ನು ಗೆಲ್ಲಿಸುವ ಮೂಲಕ ಚಿ.ನಾ.ಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಕಾರ್ಯಕ್ಕೆ ಮುಂದಾಗಿ ಎಂದು ಮತಯಾಚಿಸುತ್ತಿದ್ದರು.ಚುನಾವಣಾ ಪ್ರಚಾರದಲ್ಲಿ ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಜಹೀರ್ ಸಾಬ್,ಗೀತಾ,ಗ್ರಾ.ಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಕೆಂಕೆರೆ ಶಿವಕುಮಾರ್,ಎಟಿಎನ್ ಮಂಜು, ಸ್ಟುಡಿಯೋ ದುರ್ಗರಾಜು, ಬಡ್ಡಿಪುಟ್ಟಣ್ಣ,ಕಾರ್ಗಿಲ್ ಸತೀಶ್,ಮುರುಳಿ,ವಕೀಲರಾದ ಗುರುರಾಜ್, ರಾಜಶೇಖರ್ ಸೇರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ