ರಾಮನವಮಿ ಅಂಗವಾಗಿ ಪಟ್ಟಣದ ಮನೆಮನೆಗಳಲ್ಲಿ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ,ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರೀರಾಮನ ಭಜನೆ ಪಠಿಸುತ್ತಾ ಶ್ರೀರಾಮನನ್ನು ಆರಾಧಸಿ, ನಂತರ ಕೋಸಂಬರಿ, ಬೇಲವತೇ ಹಣ್ಣಿನ ಪಾನಕ,ಮಜ್ಜಿಗೆ,ಕಡಲೆಕಾಲು ಹುಸಲಿಯ ನೈವೇದ್ಯವನ್ನು ಸಂತರ್ಪಣೆ ಮಾಡಿ,ಸಾರ್ವಜನಿಕರಿಗೆ ವಿತರಿಸುವ ಮೂಲಕ ಶ್ರೀರಾಮಚಂದ್ರ ಸ್ವಾಮಿಯ ಜನ್ಮ ದಿನವಾದ ರಾಮನವಮಿಯನ್ನು ಶ್ರದ್ದಾಭಕ್ತಿಯಿಂದ ಶುಕ್ರವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಮಾರುತಿನಗರದ ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮನವಮಿ ಅಂಗವಾಗಿ ಶ್ರೀಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ.ಕಡಳೆಕಾಲು ಹುಸಲಿ ವಿತರಿಸಿದರು. |
ಪಟ್ಟಣದ ಶ್ರೀಅಂಜನೇಯಸ್ವಾಮಿ ಸನ್ನಿಧಿ,ಶ್ರೀಅನಂತಶಯನ ರಂಗನಾಥಸ್ವಾಮಿ ಸನ್ನಿಧಿ,ಗಾಂಧಿಪೇಟೆಯ ಶನೇಶ್ವರಸ್ವಾಮಿ ದೇವಾಲಯ,ಕಾಳಿಕಾಂಭ ದೇವಾಲಯ,ಗ್ರಾಮದೇವತೆ ಹುಳಿಯಾರಮ್ಮನ ದೇವಾಲಯದಲ್ಲಿ ಶ್ರೀರಾಮಚಂದ್ರ ಹುಟ್ಟಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನದ ಅಂಗವಾಗಿ ಶುಕ್ರವಾರ ಬೆಳಗಿನಿಂದಲೇ ವಿಶೇಷ ಅರ್ಚನೆ, ಪೂಜೆ ಕೈಂಕರ್ಯಗಳು ವಿಜೃಂಭಣೆಯಿಂದ ನಡೆದಿದ್ದವು.ಅಲ್ಲದೆ ಅನೇಕ ಮನೆಗಳಲ್ಲಿ ಶ್ರೀರಾಮ ಹಾಗೂ ರಾಮಭಂಟ ಆಂಜನೇಯನಿಗೆ ಪೂಜೆ ಸಲ್ಲಿಸುತ್ತಿರುವುದು ಕಂಡುಬಂದಿತ್ತು.
ಹುಳಿಯಾರಿನ ಶ್ರೀದುರ್ಗಮ್ಮ ದೇವಿ,ಹುಳಿಯಾರಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರುಗಳನ್ನು ರಾಮನವಮಿಗೆ ಅಂಗವಾಗಿ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. |
ಬೇಸಿಗೆಯ ಧಗೆಯನ್ನು ಲೆಕ್ಕಿಸದ ನೂರಾರು ಭಕ್ತರು ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದರು, ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಪಾನಕ, ಕಡಲೆಕಾಳು ಕೋಸಂಬರಿ, ಮಜ್ಜಿಗೆ ಸಂತರ್ಪಣೆ ಸಾಮಾನ್ಯವಾಗಿದ್ದು, ಗ್ರಾಮದೇವತೆಗಳಾದ ಹುಳಿಯಾರಮ್ಮ,
ದುರ್ಗಮ್ಮ ಮತ್ತು ಲಿಂಗಪ್ಪನಪಾಳ್ಯದ ಶ್ರೀರಾಮ ದೇವರುಗಳನ್ನು ಮೆರವಣಿಗೆ ಮೂಲಕ ಆಂಜನೇಯಸ್ವಾಮಿ ದೇವಾಲಯಕ್ಕೆ ಕರೆತಂದು ಪೂಜೆ ಸಲ್ಲಿಸಿ, ಆಗಮಿಸಿದ್ದ ನೂರಾರು ಭಕ್ತಾಧಿಗಳಿಗೆ ಪಾನಕ ಪನಿವಾರ ವಿತರಿಸಲಾಯಿತು. ಭಕ್ತಾಧಿಗಳು ಬೇಸಿಗೆಯ ಧಗೆಯನ್ನು ಲೆಕ್ಕಿಸದೆ ಆಗಮಿಸಿ ಪೂಜೆ ಜಪಗಳ ಕಾರ್ಯಗಳಲ್ಲಿ ಭಾಗವಹಿಸಿದ್ದರಲ್ಲದೆ, ರಾಮ ಅಷ್ಟೋತ್ತರ,ರಾಮ ರಕ್ಷಾ ಸ್ತೋತ್ರ,ರಾಮ ಅಷ್ಟಕ ,
ರಾಮ ಸಹಸ್ರನಾಮ ಜಪಿಸುತ್ತಾ, ರಾಮಕೀರ್ತನೆಯನ್ನು ಪಠಿಸುತ್ತಾ ಶ್ರೀರಾಮನನ್ನು ಧ್ಯಾನಿಸುತ್ತಿದ್ದರು.
ಶ್ರೀಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ನ ಯುವಕರು ಪೆಂಡಾಲನ್ನು ಹಾಕಿ ಮಜ್ಜಿಗೆ ಕಡಳೆಕಾಲು ಉಸಲಿ ವಿತರಿಸಿದರು. ಸಂಘದ ಅಧ್ಯಕ್ಷ ಚನ್ನಬಸವಯ್ಯ,ಗೌರವಾಧ್ಯಕ್ಷ ಆಶೊಕ್ ಬಾಬು,ಹರೀಶ್,ಮಂಜುನಾಥ,ರಾಜು,ಮನು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ