ರೈತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿ ಆಡಳಿತ ನಡೆಸಲು ಮುಂದಾದ ಬಿಜೆಪಿ ಸರ್ಕಾರ ರಾಜ್ಯದ ರೈತರ ಹಿತವನ್ನು ಕಾಪಾಡುವುದನ್ನು ಮರೆತು ತಮ್ಮದೇ ಆದ ಆಡಳಿತವನ್ನು ನಡೆಸುತ್ತಾ ಹಲವಾರು ಹಗರಣಗಳನ್ನು ಮಾಡುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯುವ ಕಾರ್ಯದಲ್ಲಿ ತೊಡಗಿದ್ದಾರೆ,ಈಗ ಇದಕ್ಕೆಲ್ಲಾ ಕಡಿವಾಣ ಹಾಕಿ ರಾಜ್ಯದಲ್ಲಿ ಬದಲಾವಣೇ ತರುವ ನಿಟ್ಟಿನಲ್ಲಿ ಈಗಿನ ಚುನಾವಣೆಯಲ್ಲಿ ಮತದಾರ ಎಚ್ಚೆತ್ತು ಕೊಂಡು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಹುಮತದಿಂದ ಆಯ್ಕೆ ಮಾಡಿದಲ್ಲಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮೊದಲ ದಿನವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾಜಿ ಸಿಎಂ ಹಾಗೂ ರಾಜ್ಯ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
|
ಹುಳಿಯಾರಿನಲ್ಲಿ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಚುನಾವಣಾ ಪ್ರಚಾರ ಮಾಡುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ. |
ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ,ಅಲ್ಲಲ್ಲೆ ಗ್ರಾಮವಾಸ್ತವ್ಯ ಮಾಡುವ ಮೂಲಕ ಹರಿಜನ,ದಲಿತ ಎಂದು ಜಾತಿತಾರತಮ್ಯ ಮಾಡದೇ ಎಲ್ಲಾ ಜನಾಂಗದವರು ಒಂದೇ ಎಂದು ಭಾವಿಸಿ ಅವರ ಸಂಕಷ್ಟವನ್ನು ತಿಳಿದಿದ್ದೇನೆ. ಆಗ ನನ್ನ ಗ್ರಾಮವಾಸ್ತವ್ಯದ ಬಗ್ಗೆ ಲೇವಡಿ ಮಾಡಿದ ಕಾಂಗ್ರೇಸಿಗರು ಇದೇ ಕಾರ್ಯವನ್ನೇ ರಾಹುಲ್ ಗಾಂಧಿಯವರ ಮೂಲಕ ಮಾಡಿಸಿ ನಾಟಕೀಯವಾಗಿ ಜನರಲ್ಲಿ ಮತಯಾಚಿಸುತ್ತಿದ್ದಾರೆ. ಅಲ್ಲದೆ ಕೇಂದ್ರದ ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿಸುವ ಮೂಲಕ ತಮಿಳುನಾಡಿಗೆ ಮಾರುಹೋಗಿದ್ದು,ಕರ್ನಾಟಕ ರಾಜ್ಯವನ್ನು ಕಡೆಗಣಿಸಿದೆ.ಇಂತಹ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ರಾಜ್ಯದ ಮುಂದಿನ ಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೈಯುತ್ತಾರೆ ಎಂಬುದನ್ನು ಮತದಾರರು ಪರಾಮರ್ಷಿಸಬೇಕಿದೆ ಎಂದರು.
ಜೆಡಿಎಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ನೆಪ ಮಾತ್ರಕ್ಕೆ ಬಿಡುಗಡೆ ಮಾಡಿಲ್ಲ,ರಾಜ್ಯದ ಹಿತವನ್ನು ಮನಗಂಡು ಹತ್ತಾರು ಯೋಜನೆಗಳನ್ನು ಒಳಗೊಂಡಂತೆ,ಅದರಲ್ಲೂ ಹೆಚ್ಚಾಗಿ ರೈತರಿಗೆ ನೆರವಾಗುವಂತಹ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದ್ದು,ಅಂಗವಿಕಲರಿಗೆ,ವಿಧವೆಯರಿಗೆ,ವಯೋವೃದ್ದರಿಗೆ ಎರಡು ಸಾವಿರದವರೆಗೆ ಮಾಸಾಶನ ನೀಡುವುದಾಗಿದ್ದು,ಎಪ್ಪತ್ತುವರ್ಷ ಮೇಲ್ಪಟ್ಟವರಿಗೆ ತಿಂಗಳಿಗೆ ಐದುಸಾವಿರ ನೀಡುವ ಮೂಲಕ ಅವರುಗಳು ತಮ್ಮ ವೃದ್ದಾಪ್ಯದಲ್ಲಿ ಯಾರ ಹಂಗಿಲ್ಲದೆ ಜೀವನ ನಡೆಸುವಂತೆ ಮಾಡುವ ಗುರಿ ಹೊಂದಿದೆ.ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಮುಗಿಸಿ ಕೆಲಸವಿಲ್ಲದೆ ಇರುವವರಿಗೆ ತಿಂಗಳಿಗೆ ಹತ್ತುಸಾವಿರ ಸಂಬಳ ದೊರೆಯುವಂತಹ ಉದ್ಯೋಗಗಳನ್ನು ಕಲ್ಪಿಸಿ ಕೊಡುವ ನಿಲುವು ಹೊಂದಿರುವುದಾಗಿ ತಿಳಿಸಿದ ಅವರು ಪ್ರಸ್ತುತ ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರೆಯದೆ , ಬೆಳೆ ಬೆಳೆಯಲು ಮಾಡಿದ್ದ ಸಾಲವನ್ನು ತೀರಿಸಲಾಗದೇ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಮುಂದಿದ್ದು ರೈತರು ಬೆಳೆದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಧನ ನೀಡುವ ಮೂಲಕ ಅವರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.
ಸಿ.ಬಿ.ಸುರೇಶ್ ಬಾಬು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು.ಬಡವ ಬಲ್ಲಿದರಿಗೆ ಸದಾ ಸ್ಪಂದಿಸುತ್ತಾ ಬಂದಿದ್ದು,ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದವರಾಗಿದ್ದಾರೆ.ಇವರ ತಂದೆ ಬಸವಯ್ಯ ಸಚಿವರಾಗಿದ್ದು ಹೊರತು ಪಡಿಸಿದರೆ ಇತ್ತೀಚಿನವರೆಗೆ ಚಿ.ನಾ.ಹಳ್ಳಿಯವರಿಗೆ ಸಚಿವ ಸ್ಥಾನ ದೊರೆಯದಿರುವುದು ದುರಂತ.ಈ ಬಾರಿ ಚುನಾವಣೆಯಲ್ಲಿ ಸುರೇಶ್ ಬಾಬು ಗೆಲ್ಲಿಸಿದಲ್ಲಿ ಜೆಡಿಎಸ್ ನಿಂದ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ತಿಳಿಸಿದರು.
ಚಿ.ನಾ.ಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಶಾಸಕ ಸಿ.ಬಿ.ಸುರೇಶ್ ಬಾಬು ತಮ್ಮ ಸಾಧನೆಯ ಬಗ್ಗೆ ವಿವರಿಸಿ ಕ್ಷೇತ್ರದ ಅಭಿವೃದ್ದಿಗಾಗಿ ಮತ್ತೊಂದು ಬಾರಿ ಚುನಾಯಿಸಬೇಕೆಂದು ಕೋರಿದರು. ಸಮಾರಂಭದಲ್ಲಿ ಹಿರಿಯೂರು ಕ್ಷೇತ್ರದ ಅಭ್ಯರ್ಥಿ ಎ.ಕೃಷ್ಣಪ್ಪ ಮಾತನಾಡಿದರು,ಜೆಡಿಎಸ್ ಜಿಲ್ಲಾಧ್ಯಕ್ಷ ಹುಲಿನಾಯ್ಕರ್,ಜಿ.ಪಂ.ಸದಸ್ಯೆಯರಾದ ಮಂಜುಳಾ,ಜಾನಮ್ಮ,ಮುಖಂಡರಾದ ಮಹದೇವಪ್ಪ,ರಾಮಹಾಲ್ ನ ಬಾಲೇಶ್,ತಿಮ್ಮಯ್ಯ, ನಂದಿಹಳ್ಳಿ ಶಿವಣ್ಣ,ವಕೀಲ ಸದಾಶಿವಯ್ಯ,ಮೋಹನ್, ಬುಕ್ಕಾಪಟ್ಟಣ ಜಯಪ್ರಕಾಶ್,ರೇವಣ್ಣಓಡೆಯರ್ ಸೇರಿದಂತೆ ಅಪಾರ ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
|
ಹುಳಿಯಾರಿನಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಬಿ.ಸುರೇಶ್ ಬಾಬು ಪರ ಮಾಜಿ ಸಿಎಂ ಕುಮಾರಸ್ವಾಮಿ ಮತಯಾಚಿಸಿದರು.ಎ.ಕೃಷ್ಣಪ್ಪ ಇದ್ದಾರೆ. |
|
ಗ್ರೂಪ್ ಫೋಟೊ;ಶಾಸಕರೊಂದಿಗೆ ಅಭಿಮಾನಿಗಳು |
|
ಕುಮಾರಣ್ಣನ ನಿರೀಕ್ಷೆಯಲ್ಲಿ...... |
|
ಅಂತೂ ಬಂತು... |
|
ಇಳಿಸ್ಕೊಳಕ್ಕೆ ರೆಡಿ. |
|
ಎಲ್ರಿಗೂ ನಮಸ್ಕಾರ |
|
ಆಯ್ತಪ್ಪ...ಬಂದೆ ತಡಿರೀ...ಮಾತಾಡ್ತೀನಿ |
|
ಅಬ್ಬಬ್ಬಾ ಅಂತೂ ಕುಮಾರಣ್ಣ ನನ್ನ ಪರ ಮತಯಾಚನೆ ಮಾಡಿದರು
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ