ರಾಜ್ಯದಲ್ಲಿ ತಮ್ಮದು ಬಲಿಷ್ಠ ಪಕ್ಷ ಎಂದು ಬೀಗುತ್ತಿರುವ ಬಿಜೆಪಿ ಪಕ್ಷದ ನಾಯಕರು ರಾಜ್ಯದ ಅಭಿವೃದ್ದಿಗಾಗಿ ತಾನು ಕೈಗೊಂಡ ಕಾರ್ಯಗಳನ್ನು ಸಹಿಸದೆ ಹಲವರು ಸಂಚು ಮಾಡಿ ತಮ್ಮ ಅಭಿವೃದ್ದಿ ಕಾರ್ಯಗಳಿಗೆ ತಡೆಯೊಡ್ಡುವ ಕೃತ್ಯ ಮಾಡಿದರು. ಇದಕ್ಕೆಲ್ಲಾ ಪ್ರತ್ಯುತ್ತರವಾಗಿ ಈ ಬಾರಿಯ ಚುನಾವಣೆ ತಕ್ಕ ಪಾಠ ಕಲಿಸಲಿದೆ.ಪ್ರಸ್ತುತ ರಾಜಕೀಯ ಎಂಬ ಸಮುದ್ರದಲ್ಲಿ ಬಿಜೆಪಿ ಎಂಬ ಹಡಗು,ಪ್ರಾದೇಶಿಕ ಪಕ್ಷಗಳ ಎದುರು ಮುಳುಗುವುದು ಶತಸಿದ್ದ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ ಪರ ಪ್ರಚಾರಕ್ಕಾಗಿ ಹುಳಿಯಾರಿಗೆ ಆಗಮಿಸಿದ್ದ ಅವರು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಭಾಗಕ್ಕೆ ನೀರು ತರಲು ಭಗೀರಥ ಪ್ರಯತ್ನ ಮಾಡಿದ್ದು ತಾವೆಂದು ಹೇಳುತ್ತಿರುವ ಕೆ.ಎಸ್.ಕಿರಣ್ ಕುಮಾರ್, ಈ ಭಾಗಕ್ಕೆ ಹೇವಾವತಿ ನೀರು ಹರಿಸುವ ಬೃಹತ್ ಯೋಜನೆಯನ್ನು ಮಂಜೂರು ಮಾಡಿದವರು ಯಾರೆಂಬುದನ್ನು ಮರೆತು ಜನರ ಕಣ್ ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ,ತಮ್ಮೊಂದಿಗೆ ಆಪ್ತರಾಗಿದ್ದು ಕೊಂಡು ಈರೀತಿ ಮಾಡುತ್ತಿರುವ ಕಿರಣ್ ಕುಮಾರ್ ಅವರನ್ನು ಮನೆಗೆ ಕಳುಹಿಸಿ, ಮಾಧುಸ್ವಾಮಿ ಅವರನ್ನು ವಿಧಾಸಭೆಗೆ ಕಳುಹಿಸುವ ಮೂಲಕ ಚಿ.ನಾ.ಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕಾರ್ಯಕ್ಕೆ ತಾವೆಲ್ಲ ಕೈಜೊಡಿಸಿ ಎಂದು ಕರೆ ನೀಡಿದರು. ಇಂದು ಜನಕ್ಕೆ ಪರಾಮರ್ಷಿಸುವ ತಿಳುವಳಿಕೆಯಿದ್ದು ಯಾರು ಸರಿಯಾಗಿ ನಡೆಯುತ್ತಿದ್ದಾರೆ,ಯಾರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂಬುದನ್ನು ತುಲಾಭಾರ ಮಾಡುವ ಮೂಲಕ ಮತ ನೀಡುವಂತೆ ಕೋರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಯಜಮಾನ ಗುಲಾಮ ಸಂಬಂದವಿದ್ದು,ಕೇಂದ್ರ ಕೈಗೊಂಬೆಯಾಗಿದ್ದು, ರಾಜ್ಯಕ್ಕೆ ದೊರೆಯಬೇಕಾದ ಸೌಲಭ್ಯಗಳು ದೂರ ಉಳಿವೆ. ಇಂತಹ ತಾರತಮ್ಯ ಮನೋಭಾವವನ್ನು ಕಿತ್ತೊಗೆಯುವ ಬದಲು ಕಂಡು ಕಾಣದಂತೆ ಬಿಜೆಪಿ ಸರ್ಕಾರ ತನ್ನ ಆಡಳಿತ ನಡೆಸುತ್ತಿದ್ದು, ರಾಜ್ಯವನ್ನು ಎಷ್ಟರ ಮಟ್ಟಿಗೆ ಅಭಿವೃದ್ದಿಯತ್ತ ಕೊಂಡೈಯುತ್ತದೆ ಎಂದು ಪ್ರಶ್ನಿಸಿದರು.ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಹುಟ್ಟಿ ಬೆಳೆದು,ರಾಜ್ಯವನ್ನು ಅಭಿವೃದ್ದಿಪತದತ್ತ ಕೊಂಡೈಯುವ ಕಾರ್ಯವಾಗಬೇಕಿದೆ ಎಂದರು. ತಾವು ಭರವಸೆ ನೀಡುವ ವ್ಯಕ್ತಿಯಲ್ಲು ನುಡಿದಂತೆ ನಡೆಯುವನಾಗಿದ್ದು,ತಾನು ಹೇಳಿದಂತೆ ನಡೆಯದಿದ್ದ ಮತದಾರರೇ ನೀವೆ ನನ್ನನ್ನು ಪ್ರಶ್ನಿಸಿ ಎಂದರು.
ಜಾತಿ ಹೆಸರಿನಲ್ಲಿ ರಾಜ್ಯದ್ಯಾಂತ ವಿಷಬೀಜ ಬಿತ್ತಲು ಅನೇಕರು ಮುಂದಾಗಿದ್ದು,ಜಾತಿ ಜಾತಿಗಳ ನಡುವೆ, ಅಲ್ಪಸಂಖ್ಯಾತರ ನಡುವೆ ಕಲಹಗಳುಂಟಾಗುವಂತೆ ಮಾಡುತ್ತಾ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುವ ಬದಲು ದೊಂಬರಾಟ ನಡೆಸುತ್ತಿದ್ದು,ಇದಕ್ಕೆಲ್ಲಾ ಕಡಿವಾಣ ಹಾಕಬೇದಾರೆ ಸದನದಲ್ಲಿ ಸದ್ದು ಮಾಡುವವರು ಬೇಕು, ಆ ಧೈರ್ಯ ಮಾಧುಸ್ವಾಮಿಯವರಲಿದ್ದು ಅವರಿಗೆ ತಮ್ಮ ಮತನೀಡುವ ಮೂಲಕ ವಿಧಾನ ಸಭೆಗೆ ಕಳುಹಿಸಿ ಎಂದು ತಿಳಿಸಿದರು. ಸಭೆಗೂ ಮುನ್ನಾ ಪಟ್ಟಣದ ಬಿ.ಎಚ್.ರಸ್ತೆಯಲ್ಲಿ ಮೆರವಣಿಗೆ ನಡೆಯಲಾಯಿತು.
ಸಭೆಯಲ್ಲಿ ಚಿ.ನಾ.ಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜೆ.ಸಿ.ಮಾಧುಸ್ವಾಮಿ, ಸಿಂಗದಳ್ಳಿ ರಾಜ್ ಕುಮಾರ್, ಜಿ.ಎಸ್.ಬಸವರಾಜು, ಹಳೆಮನೆ ಶಿವನಂಜಪ್ಪ,ಜಿ.ಪಂ.ಸದಸ್ಯೆ ಲೋಹಿತಾ ಬಾಯಿ,ಮುಖಂಡರಾದ ಚಿಕ್ಕಬಿದರೆ ಚಂದ್ರಣ್ಣ,ಮೈಲಾರಪ್ಪ,ಯಳನಡು ಮಲ್ಲಿಕಣ್ಣ, ಜಹೀರ್ ಸಾಬ್, ಬ್ಯಾಂಕ್ ಮರುಳಯ್ಯ,ಬಡ್ಡಿಪುಟ್ಟರಾಜು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ