ಹುಳಿಯಾರು ಸುತ್ತಾ ಎರಡು ದುರ್ಘಟನೆ ಸಂಭವಿಸಿದೆ.ಈ ಬಗ್ಗೆ ಮಾಹಿತಿ ಇಲ್ಲಿದೆ
1) ಹುಳಿಯಾರು: ಕಳೆದ ಕೆಲ ದಿನಗಳಿಂದ ಬಾದಿಸುತ್ತಿದ್ದ ಹೊಟ್ಟೆ ನೋವನ್ನು ತಾಳಲಾರದೆ ವಿಷ ಸೇವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹೋಬಳಿಯ ಹೆಚ್.ಮೇಲನಹಳ್ಳಿಯಲ್ಲಿ ಬುಧವಾರ ಸಂಭವಿಸಿದೆ. ಹರೀಶ್(26) ಎಂಬಾತನೇ ಸಾವನಪ್ಪಿದ್ದ ದುರ್ದೈವಿಯಾಗಿದ್ದು , ಈತ ಆಗಾಗ ಬರುತ್ತಿದ್ದ ಹೊಟ್ಟೆನೋವನ್ನು ತಡೆದುಕೊಳ್ಳಲಾರದೆ ಮಂಗಳರಾತ್ರಿ ವಿಷ ಸೇವಿಸಿದ್ದಾನೆ,ವಿಷಯ ತಿಳಿದ ಪೋಷಕರು ಹುಳಿಯಾರು ಆಸ್ಪತ್ರೆಗೆ ಕರೆತಂದು ತೊರಿಸಿ ನಂತರ ತುಮಕೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದು ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

2)ಹೋಬಳಿ ದಬ್ಬಗುಂಟೆ ಗ್ರಾಮದ ಕರಿಕಲ್ಲು ಬಯಲು ಹತ್ತಿರದ ಹೊಲದಲ್ಲಿ ಮಂಗಳವಾರ ಅಪರಿಚಿತ ಹೆಂಗಸಿನ ಶವ ಪತ್ತೆಯಾಗಿದ್ದು, ಸುಮಾರು 45 ರಿಂದ 50ವರ್ಷದ ಈಕೆ ಕಳೆದ ಎರಡು ಮೂರು ದಿನಗಳಿಂದ ಈ ಭಾಗದಲ್ಲಿ ಓಡಾಡುತ್ತಿದ್ದು, ಮಾನಸಿಕ ಅಸ್ವಸ್ಥಳಾಗಿದ್ದಳು ಎಂದು ದಬ್ಬಗುಂಟ್ಟೆ ಗ್ರಾಮದ ಹೆಂಜಪ್ಪ ತಿಳಿಸಿದ್ದಾರೆ. ಶವದ ಮೈ ಮೇಲೆ ಬಿಳಿಬಣ್ಣದ ತುಂಬು ತೋಳಿನ ಅಂಗಿ,ಕೆಂಪು ಬಣ್ಣದ ಲಂಗ,ತಲೆ ಭಾಗದಲ್ಲಿ ಕಪ್ಪು ಬಿಳಿ ಮಿಶ್ರಿತ ಕೊದಲಿದ್ದು,ದೇಹ ಕೊಳೆತ ಸ್ಥಿಯದ್ದು,ಶವವನ್ನು ಹುಳಿಯಾರು ಸರ್ಕಾರಿ ಅಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು,ಗುರುತು ಬಲ್ಲವರು ಹುಳಿಯಾರು ಪೋಲೀಸ್ ಠಾಣೆ(08133-256150) ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ