ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ನಡೆದ ಶ್ರೀ ಕಾಳಿಕಾಂಬದೇವಿಯ ಸಿಡಿ ಉತ್ಸವದ ಒಂದು ನೋಟ. |
ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀ ಕಾಳಿಕಾಂಬದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ನೂರಾರು ಸಂಖ್ಯೆಯ ಭಕ್ತಾಧಿಗಳ ಹರ್ಷೋದ್ಘಾರದೊಂದಿಗೆ ಸಿಡಿ ಉತ್ಸವ ವೈಭವಯುತವಾಗಿ ಜರುಗಿತು.
ತಾ.13 ರಿಂದ ತಾ.20ರವರೆಗೆ ನಡೆಯುವ ಒಂದು ವಾರದ ಜಾತ್ರಾ ಮಹೋತ್ಸವದಲ್ಲಿ ಮೂರುದಿನ ಅಗ್ನಿಕೊಂಡಸೇವೆ,ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ,ಆರತಿಬಾನ ಕಾರ್ಯ, ಮಡಲಕ್ಕಿಸೇವೆ, ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಅಮ್ಮನವರ ಉಯ್ಯಾಲೆ ಉತ್ಸವ ನಡೆದಿದ್ದು, ಕಲಶ ಮಹೋತ್ಸವ ಕಾರ್ಯಗಳು ನಡೆದಿದ್ದು, ಶುಕ್ರವಾರ ಬೆಳಗಿನ ಜಾವ ಅಮ್ಮನವರನ್ನು ಉತ್ಸದಲ್ಲಿ ಕರೆತಂದು ನಂತರ ಸಿಡಿ ಮರವನ್ನು ಶೃಂಗರಿಸಿ,ಮರದ ಒಂದು ತುದಿಗೆ ಅರಕೆ ಮಾಡಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ಜೋತು ಹಾಕಿ ಮರದ ಇನ್ನೊಂದು ತುದಿಯಲ್ಲಿ ದೇವರುಗಳನ್ನು ಕುಳ್ಳಿರಿಸಿ ಗೌಡಗೆರೆ ಶ್ರೀದುರ್ಗಮ್ಮದೇವಿ, ದಮ್ಮಡಿಹಟ್ಟಿ ಈರ ಬೊಮ್ಮಕ್ಕದೇವಿ,ಬರದಲೇ ಪಾಳ್ಯದ ಅಂಬಿಕಾದೇವಿಯ ನೇತೃತ್ವದಲ್ಲಿ ಸಿಡಿಮರವನ್ನು ಮೂರು ಸುತ್ತು ಸುತ್ತಿಸುವ ಮೂಲಕ ಸಿಡಿ ಉತ್ಸವ ನಡೆಯಿತು.ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ