ಯಾಂತ್ರಿಕತೆಗೆ ಮಾರು ಹೋಗಿರುವ ಮಾನವ ತನ್ನ ತನವನ್ನು ಮರೆತು ಯಂತ್ರಗಳೊಂದಿಗೆ ಬೆರೆತು ಜೀವನ ಸಾಗಿಸುತ್ತಾ ಜೀವನದ ಉತ್ತಮ ಆರೋಗ್ಯ ಸ್ಥಿತಿಯನ್ನು ಕಳೆದುಕೊಳ್ಳುತ್ತಿರುವ ಹಿನ್ನಲೆಯಲ್ಲಿ ಸಾಕಷ್ಟು ಹಣವ್ಯಯಿಸಿ ಉತ್ತಮ ಆರೋಗ್ಯ ಪಡೆಯಲು ಮುಂದಾಗುತ್ತಿರುವ ಜನ ದಿನನಿತ್ಯ ಕನಿಷ್ಠ ಒಂದುವರೆ ತಾಸು ನಡಿಯುವುದರಿಂದ ದೇಹದಲ್ಲಿನ ಕಲ್ಮಶ ತೊಲಗಿ ಉತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಮೈಸೂರಿನ ಆಯುರ್ವೇದ ಡಾ||ಖಾದರ್ ತಿಳಿಸಿದ್ದಾರೆ.
ಡಾ||ಖಾದರ್ ಮಹಿಳೆಯರು ಯಾವ ರೀತಿ ಉತ್ತಮ ಆರೋಗ್ಯ ಪಾಡಿಕೊಳ್ಳ ಬಹುದೆಂದು ಮಾಹಿತಿ ನೀಡುತ್ತಿರುವುದು. |
ಹುಳಿಯಾರಿನ ಬಸವೇಶ್ವರನಗರ ಬಡಾವಣೆಯಲ್ಲಿ ಸೃಜನ ಮಹಿಳಾ ವೇದಿಕೆಯವರ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರು ತಮ್ಮ ಹಾಗೂ ಸಂಸಾರದ ಸ್ವಾಸ್ಥ್ಯವನ್ನು ಯಾವರೀತಿ ಕಾಪಾಡಿಕೊಳ್ಳಬೇಕೆಂಬ ವಿಚಾರಗಳನ್ನು ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯರಾದ ತಾವು ಆರೋಗ್ಯದಿಂದಿರ ಬೇಕೆಂದು ಬಯಸುವುದು ಎಷ್ಟು ಮುಖ್ಯವೋ, ಉತ್ತಮ ಆರೋಗ್ಯವನ್ನು ಯಾವ ರೀತಿ ಪಡೆಯಬೇಕು, ದೇಹಕ್ಕೆ ಆಗತ್ಯವಾದ ಪೋಷಕಾಂಶ,ದೇಹದ ಸ್ವಚ್ಚತೆ,ರೋಗಗಳು ತಮ್ಮ ದೇಹವನ್ನು ಬಾದಿಸದೆಂತೆ ವಹಿಸ ಬೇಕಾದ ಎಚ್ಚರಿಕಾ ಕ್ರಮಗಳನ್ನು ಅನುಸರಿಸುವುದು ಅಷ್ಟೇ ಮುಖ್ಯವಾಗಿದೆ ಎಂದರು.ಆರೋಗ್ಯವನ್ನು ಕಾಡುವ ಮೂಕ್ಕಾಲು ಪಾಲು ಜವಬ್ದಾರಿ ಮಹಿಳೆಯರದ್ದು,ಪುರುಷರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅದನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳುವ ಕಾರ್ಯವನ್ನು ಮನೆಯ ಮಡಿದಿ ಮಾಡಬೇಕಿದ್ದು,ಮಹಿಳೆಯರು ಯಾವ ಆಹಾರ ಕ್ರಮವನ್ನು ಅನುಸರಿಸಬೇಕು,ಯಾವ ತರಕಾರಿ,ಸೊಪ್ಪು,ಕಾಳು,ಕಡ್ಡಿಗಳನ್ನು ಬಳಸಬೇಕು, ಯಾವುದನ್ನು ತ್ಯೆಜಿಸಬೇಕು ಎಂಬುದನ್ನು ಮನಗಂಡು ಸಂಸಾರ ನಡೆಸಬೇಕು ಎಂದು ತಿಳಿಸಿದರು.
ನಮ್ಮ ಅಕ್ಕಪಕ್ಕ ಸಿಗುವಂತಹ,ಔಷಧಿ ಗುಣವುಳ್ಳ ಗರಿಕೆ, ಅಮೃತಬಳ್ಳಿ, ಬೇವು, ಅರಳಿ,ಬಿಲ್ವ,ಹೊಂಗೆ,ತುಳಸಿ ಎಲೆಗಳನ್ನು ದಿನನಿತ್ಯ ಉಪಯೋಗಿಸುವುದರಿಂದ ದೇಹಕ್ಕೆ ಬರುವ ಅನೇಕ ಕಾಯಿಲೆಗಳಿಂದ ದೂರವಿರಬಹುದಾಗಿದ್ದು, ಆಸ್ಪತ್ರೆಗಳಿಗೆ ಅಲೆಯುತ್ತಾ,ಹಣವ್ಯಯ ಮಾಡುವುದು ತಪ್ಪುತ್ತದೆ ಎಂದರು.ದೇಹ ಅಗುರಾದಷ್ಟು ನಮ್ಮ ಆರೋಗ್ಯದಲ್ಲಿ ಚೇತರಿಕೆಯುಂಟಾಗುವುದಲ್ಲದೆ,ದೇಹದ ರೋಗ ನಿರೋಧಕ ಶಕ್ತಿ ದ್ವಿಗುಣಗೊಳ್ಳುತ್ತದೆ. ದಿನನಿತ್ಯದ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳದೆ ಒಂದೇ ಸ್ಥಳದಲ್ಲಿ ಕೂತರೆ ನಮ್ಮ ದೇಹ ಮೊಲೆಯಲ್ಲಿ ಬಿದ್ದ ಕಬ್ಬಿಣದಂತೆ ತುಕ್ಕು ಹಿಡಿಯುತ್ತದೆ.
ಆಸ್ಪತ್ರೆಗಳಲ್ಲಿ ಆರೋಗ್ಯವಿಲ್ಲ: ಇಂದು ನಾವೆಲ್ಲ ನೋಡಿರುವಂತೆ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮೂಲಸೌಕರ್ಯಗಳಿಲ್ಲದೆ ಗ್ರಾಮೀಣ ಭಾಗದ ಜನರಿಗೆ ಉತ್ತಮ ಜೌಷಧಿಗಳಾಗಲಿ.ಚಿಕಿತ್ಸೆಯಾಗಲಿ ಲಭಿಸುತ್ತಿಲ್ಲ. ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳಲ್ಲಿ ಹಣದ ವ್ಯಾಮೋಹದಿಂದ ಸಣ್ಣ ಕಾಯಿಲೆಗೆ ಅಗತ್ಯಕ್ಕಿಂತ ಹೆಚ್ಚಿನ ಚಿಕಿತ್ಸೆ ಮಾಡುತ್ತಾ,ಕಾಯಿಲೆ ತಕ್ಕ ಲಸಿಕೆ ನೀಡದೆ ಜನರಲ್ಲಿ ಆಸ್ಪತ್ರೆಗಳೆಂದರೆ ಭಯಪಡುವಂತಹ ಮನೋಭಾವ ಮೂಡುತ್ತಿರುವುದು ವಿಷಾದನೀಯ ಎಂದರು.
ಈ ಸಂಧರ್ಭದಲ್ಲಿ ಕೃಷಿ ಭಾರತ್ ಪತ್ರಿಕೆಯ ಸಂಪಾದಕ ಚಂದ್ರಶೇಖರ್ ಬಾಲೆ,ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ರಾಮಕೃಷ್ಣಪ್ಪ, ರವೀಂದ್ರ ದೇಸಾಯಿ,ಪ್ರಗತಿಪರ ರೈತ ಕೋರಗೆರೆ ರಾಜಶೇಖರ್,ಸಿದ್ದಬಸಪ್ಪ,ಕೆಂಕೆರೆ ಬಸವರಾಜು ಸೇರಿದಂತೆ ಸೃಜನಾ ಮಹಿಳಾ ವೇದಿಕೆಯ ನೂರಾರು ಮಹಿಳೆಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ