ಸದಾಕಾಲ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುತ್ತಾ, ಜನಪರ ಹೋರಾಟಗಳನ್ನು ಮಾಡಿಕೊಂಡು ತಾಲ್ಲೂಕಿನಾದ್ಯಂತ ಗಮನ ಸೆಳೆದಿರುವ ಕೆಂಕೆರೆ ಸತೀಶ್ ತಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಚುನಾವಣೆಯಲ್ಲಿ ಗೆಲ್ಲಲಿ,ಸೋಲಲ್ಲಿ ತನ್ನ ಹೋರಾಟವನ್ನು ಕೈಬಿಡದೆ ಮುಂದುವರಿಸಿಕೊಂಡು ರೈತರಿಗಾಗಿ ಅವಿರತ ದುಡಿಯುವುದಾಗಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಹುಳಿಯಾರಿನಲ್ಲಿ ಪತ್ರಿಕೆಯೊಂದಿಗೆ ತಮ್ಮ ಅನುಭವವನ್ನು ಅವರು ಹಂಚಿಕೊಂಡರು ದೇಶಾದ್ಯಂತ ರೈತ ಹಾಗೂ ಕೃಷಿ ಕ್ಷೇತ್ರಕ್ಕೆ ಆಗುತ್ತಿರುವಷ್ಟು ಅನ್ಯಾಯ,ತೊಂದರೆಗಳು ಬೇರಾವುದೇ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುತ್ತಿಲ್ಲ, ಚುನಾವಣೆಯಲ್ಲಿ ಗೆಲ್ಲುವವರೆಗೆ ರೈತರ ಬಗ್ಗೆ ಮಾತಾಡುವ ರಾಜಕೀಯ ವ್ಯಕ್ತಿಗಳು ತಾವು ಗೆದ್ದ ನಂತರ ಅನೇಕ ಕಂಟುನೆಪಗಳನ್ನು ಹೇಳುತ್ತಾ ರೈತರಿಂದ ದೂರ ಉಳಿಯುವ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ.ಅಲ್ಲದೆ ರೈತರ ಸಮಸ್ಯೆಗಳನ್ನು ಅಲಿಸದಿರುವ ವ್ಯಕ್ತಿಗಳಿಗೆ ಮತ ಹಾಕಿ ರಾಜ್ಯದ ಆಡಳಿತ ನಡೆಸಲು ಕಳುಹಿಸಬೇಕೆ ಎಂಬ ಪ್ರಶ್ನೆ ಮತದಾರರಲ್ಲಿ ಮೂಡಬೇಕಿದೆ ಎಂದರು.
ಆಡಳಿತದ ಚುಕ್ಕಾಣಿ ಹಿಡಿಯುವಾಗ ಮಾತ್ರ ರೈತರ ವೇಷ ತೊಡುವ ರಾಜಕಾರಣಿಗಳಿಗಿಂತ ಒಬ್ಬ ರೈತನಾಗಿ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನಾಗಿರುವ ನನಗೆ ರೈತರ ಕಷ್ಟದ ಅರಿವಿದ್ದು ಬಗೆಹರಿಸಲು ಶಕ್ತನಾಗಿದ್ದೇನೆ. ಸೇವಾ ಮನೋಭಾವದಿಂದ ಚನಾವಣೆಯಲ್ಲಿ ಸ್ಪರ್ಥಿಸುತ್ತಿರುವ ನನಗೆ ರೈತರು ಸೇರಿದಂತೆ ಎಲ್ಲಾ ವರ್ಗದವರ ಅತ್ಯಮೂಲ್ಯ ಮತ ಬೇಕಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಚುನಾವಣೆಯೆಂದರೆ ಕೋಟಿಗಟ್ಟಲೆ ಹಣದ ಹೊಳೆ ಹರಿಸ ಬೇಕು ಎಂಬುದು ಎಲ್ಲರ ಮನೋಭಾವ ಆದರೆ ತಾವು ಮೂರರಿಂದ ನಾಲ್ಕು ಲಕ್ಷ ರೂಗಳ ವೆಚ್ಚದ್ದ ಲೆಖ್ಖಹಾಕಿದ್ದು,ಆ ವೆಚ್ಚದ ಹಣವನ್ನು ರೈತರೇ ಬರಿಸಲಿದ್ದಾರೆ,ಚುನಾವಣಾ ಪ್ರಚಾರದಲ್ಲಿ ತಾವು ಯಾರನ್ನೂ ಬನ್ನಿ ಎಂದು ಕರೆಯುವುದಿಲ್ಲ ಕಾರಣ ತಮ್ಮ ಹೋರಾಟಗಳನ್ನು ಗಮನಿಸಿ ಎಲ್ಲರೂ ತಮ್ಮೊಂದಿಗೆ ಕೈಜೋಡಿಸಿ ಬರುತ್ತಾರೆಂಬ ವಿಶ್ವಾಸವಿದ್ದು,ರೈತರ ಮನೆಯಲ್ಲೇ ಊಟ,ತಿಂಡಿ ಮಾಡುತ್ತಾ ತಮ್ಮ ಪ್ರಚಾರ ಮಾಡುತ್ತಿದ್ದು,ತಮ್ಮಲ್ಲಿ ಯಾವುದೇ ಜಾತಿ,ಬಡವ,ಬಲ್ಲಿದ,ಮೇಲುಕೀಳು ಎಂಬ ಯಾವುದೇ ತಾರತಮ್ಯ ಮನೋಭಾವವಿಲ್ಲ ಎಲ್ಲರೂ ತಮ್ಮಂತೆಯೇ ಎಂದು ನಂಬಿ ನಡೆಯುತ್ತಿದ್ದೇವೆ ಎಂದರು.
ತಾಲ್ಲೂಕಿಗೆ ನೀರು ಹರಿಸುವ ನಿಟ್ಟಿನಲ್ಲಿ ನಡೆದ ಸುಮಾರು ಎರಡೂ ತಿಂಗಳುಗಳ ಕಾಲದ ನೀರಾವರಿ ಹೋರಾಟದಲ್ಲಿ ಎಲ್ಲಾ ಸಂಘ ಸಂಸ್ಥೆಗಳ ಜೊತೆ ಬೆರತು ಹೋರಾಟ ಮಾಡಿರುವುದು,ತಾಲ್ಲೂಕಿನಲ್ಲಿ ಯಾವುದೇ ರೈತರಿಗೆ ಅನ್ಯಾಯವಾಗಿದ್ದರೂ ಅವರಿಗೆ ನ್ಯಾಯ ದೊರಕಿಸಿಕೊಟ್ಟಿರುವ ಹತ್ತಾರು ನಿದರ್ಶನಗಳು ಜನರ ಕಣ್ಮುಂದಿದ್ದು ತಮಗೆ ಮತದಾರ ಗೆಲ್ಲಿಸುತ್ತಾರೆಂಬ ನಂಬಿಕೆ ಹೊಂದಿರುವುದಾಗಿ ತಿಳಿಸಿದರು.
ಚುನಾವಣೆ ಬಂತೆಂದೆ ಸಾಕು ಓಟು ಗಿಟ್ಟಿಸಿಕೊಳ್ಳಲು ಐದು ವರ್ಷಗಳಲ್ಲಿ ಆಗದಿರುವಂತಹ ಹತ್ತಾರು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಮುಂದಾಗುವಂತರ ರಾಜಕೀಯ ವ್ಯಕ್ತಿಗಳಂತೆ ಬಣ್ಣ ಬದಲಾಯಿಸುವ ಪ್ರವೃತ್ತಿಹೊಂದಿಲ್ಲ, ಚುನಾವಣೆಯಲ್ಲಿ ಗೆಲ್ಲಲ್ಲಿ,ಸೋಲಲ್ಲಿ ರಾಜ್ಯ ಹಾಗೂ ತಮ್ಮ ಕ್ಷೇತ್ರಕ್ಕೆ ನ್ಯಾಯವಾಗಿ ದೊರೆಯಬೇಕಾದ ಸವಲತ್ತುಗಳನ್ನು ಪಡೆಯುವ ನಿಟ್ಟಿನಲ್ಲಿ ನಿರಂತರ ಹೋರಾಡುತ್ತಾ ಜನ ಸೇವೆ ಮಾಡುವುದಾಗಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾದ ಕೆಂಕೆರೆ ಸತೀಶ್ ಚುನಾವಣಾಧಿಕಾರಿ ಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಿದರು.
ರೈತ ಪರ ಅಭ್ಯರ್ಥಿಯ ಸ್ವ ಮಾಹಿತಿ: ಕೆಂಕೆರೆ ಗ್ರಾಮದ ಇವರ ಹೆಸರಲ್ಲಿ ಸರ್ವೆ ನಂ.190 ಮತ್ತು 193ರಲ್ಲಿ ಒಟ್ಟು 1.31 ಗುಂಟೆ ಬಾಗಾಯ್ತು ,ಮಡದಿಯ ಹೆಸರಲ್ಲಿ 190/1ರಲ್ಲಿ 1.16ಗುಂಟೆ ಜಮೀನಿದೆ.ಇವರ ವಿದ್ಯಾಭ್ಯಾಸಕ್ಕೆ ಬಂದರೆ ಕನಕದಾಸ ಶಾಲೆಯಲ್ಲಿ 9ನೇತರಗತಿ ಮುಗಿಸಿ ನಂತರ ರೈತರ ಸಂಕಷ್ಟಗಳನ್ನು ಕಂಡು ರೈತರಿಗಾಗಿ ಹೋರಾಟಗಳಲ್ಲಿ ಮುಂದಾಗಿ ಇದುವರೆವಿಗೂ ಹತ್ತಾರು ಹೋರಾಟಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ