ಪಟ್ಟಣದ ಶ್ರೀಬನಶಂಕರಿ ದೇವಾಲಯದಲ್ಲಿ ದೇವಾಂಗ ಮಂಡಳಿ,ಬನಶಂಕರಿ ದೇವಾಸ್ಥಾನ ಸಮಿತಿ ಹಾಗೂ ದಾಸಿಮಯ್ಯ ಸಮಿತಿವತಿಯಿಂದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ನೂರಾರು ಭಕ್ತರು ಸೇರಿ ಶ್ರದ್ದಾಭಕ್ತಿಯಿಂದ ಆಚರಿಸಿದರು.
ದಾಸಿಮಯ್ಯ ಸಮಿತಿಯವರು |
ಕಾರ್ಯಕ್ರಮದಲ್ಲಿ ಹೋಬಳಿ ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್,ಕೆ,ರಾಮಯ್ಯ ಮಾತನಾಡಿ ವಚನಕಾರ ದಾಸಿಮಯ್ಯನವರ ವಚನಗಳ ಮಹತ್ವ ಹಾಗೂ ಆತ ನಡೆದು ಬಂದ ದಾರಿಯ ಬಗ್ಗೆ ಪರಿಚಯ ಮಾಡಿಕೊಟ್ಟರು. ಭಕ್ತಿಯ ಬಗ್ಗೆ ದಾಸಿಮಯ್ಯ ಹೊಂದಿದ್ದ ನಿಲುವು, ದೇವರು ಎಂತಹ ಭಕ್ತಿಗೆ ಒಲಿಯುತ್ತಾನೆ ಎಂಬುದನ್ನು ವಿವರಿಸಿದರು. ತೋರುವಿಕೆಯ ಭಕ್ತಿಯಿಂದ ದೇವರನ್ನು ನೆಪ ಮಾತ್ರಕ್ಕೆ ಆರಾಧಿಸಿದಂತಾಗುತ್ತದೆ ಹೊರತು ದೈವಕೃಪೆಗೆ ಪಾತ್ರರಾಗಲು ಸಾಧ್ಯವಿಲ್ಲ ಎಂದರು. ಬಂಗಾರ,ಬೆಳ್ಳಿ,ಕಂಚು,ಒಡವೆ ಸೇರಿದಂತೆ ಧನ ಕನಕಾಧಿಗಳನ್ನು ಭಗವಂತ ಮೆಚ್ಚುವುದಿಲ್ಲ ಬದಲಿಗೆ ಶ್ರದ್ದೆಯಿಂದ ಯಾರು ಆತನ ದ್ಯಾನ ಮಾಡುತ್ತಾರೆ ಅಂತಹವರ ಮೇಲೆ ತನ್ನ ಕೃಪೆ ತೋರುತ್ತಾನೆ ಎಂದು ದಾಸಿಮಯ್ಯ ನಂಬಿಕೆ ಹೊಂದಿದವನಾದಿದ್ದನು. ಎತ್ತಿನ ಗಾಡಿ ಸಾರಾಗವಾಗಿ ಚಲಿಸಲು ಕಡಕೀಲು ಎಷ್ಟು ಮುಖ್ಯ ಅಂತೆಯೇ ಶಿವಶರಣರ ಮಾತುಗಳು,ನುಡಿಮುತ್ತುಗಳು ಇಂದಿನ ಸಮಾಜಕ್ಕೆ ಮುಖ್ಯವಾಗಿದೆ ಎಂದರು. ಜಯಂತಿ ಅಂಗವಾಗಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಿತಿಯ ಅನಂತಕುಮಾರ್, ದಾಸಪ್ಪ,ಸೀನಣ್ಣ,ಗೌಡಿ,ಬಿಟಿಆರ್ ರಾಜಣ್ಣ,ಶಶಿ,ವರದರಾಜು,ಕನ್ನಡ ಸಾಹಿತ್ಯ ಪರಿಷತ್ ನ ತ.ಶಿ.ಬಸವಮೂರ್ತಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ