ಹುಳಿಯಾರು ಸಮೀಪದ ಚಿಕ್ಕಬಿದರೆ ಚಂದ್ರಣ್ಣನವರ ತೋಟದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಧುಸ್ವಾಮಿ ಮಾತನಾಡಿದರು.
|
ರಾಜ್ಯ ಹಾಗೂ ತಮ್ಮ ಕ್ಷೇತ್ರದ ಅಭಿವೃದ್ದಿಯಲ್ಲಿನ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಸಕರಾದವರು ಎಂತಹುದ್ದೇ ಹೋರಾಟಕ್ಕಾದರೂ ಸಿದ್ದರಿರಬೇಕು, ಆದರೆ ಕ್ಷೇತ್ರದ ಹಾಲಿ ಶಾಸಕರು ಇಂತಹ ಯಾವುದೇ ಗೂಜಿಗೆ ಹೋಗದೆ ತಮಗೂ ಹೋರಾಟಗಳಿಗೂ ಸಂಬಂಧವಿಲ್ಲ ಎಂಬಂತೆ ಇರುವುದನ್ನು ತಾವೆಲ್ಲಾ ಕಂಡಿದ್ದು, ನನಗೆ ಹೋರಾಟ ಮಾಡುವ ಶಕ್ತಿಯಿದೆ.ನನ್ನನ್ನು ಈ ಬಾರಿ ಗೆಲ್ಲಿಸುವ ಮೂಲಕ ಸದನದಲ್ಲಿ ನಿಮ್ಮಗಳ ಧ್ವನಿಯಾಗಲು, ಹೋರಾಟ ಮಾಡುಲು ಅವಕಾಶ ಮಾಡಿಕೊಡಿ ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಮಾಧುಸ್ವಾಮಿ ನುಡಿದರು.
ಹುಳಿಯಾರು ಸಮೀಪದ ಚಿಕ್ಕಬಿದರೆ ಚಂದ್ರಣ್ಣನವರ ತೋಟದಲ್ಲಿ ಆಯೋಜಿಸಿದ್ದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎಂಎಲ್ ಎ ಸ್ಥಾನವನ್ನು ಯಾವುದೊ ಒಂದು ಊರು, ಹೋಬಳಿ,ಕ್ಷೇತ್ರಕ್ಕೆ ಮಾತ್ರ ಸೀಮಿತ ಮಾಡಬೇಡಿ,ನಮಗೆಲ್ಲಾ ಗೆಲ್ಲುವುದಕ್ಕೆ ಒಂದು ಕ್ಷೇತ್ರ ಗೆದ್ದ ನಂತರ ಈಡಿ ರಾಜ್ಯಕ್ಕೆ ನಾವು ಶಾಸಕರಾಗುತ್ತೇವೆ. ರಾಜ್ಯಕ್ಕೆ ಮಾರಕವಾಗುವಂತ ಕಾರ್ಯಗಳ ವಿರುದ್ದ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು. ಸದನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ, ಚರ್ಚೆ ಮಾಡ ಬೇಕೇ ಹೊರತು ಮೂಕ ಪ್ರೇಕ್ಷಕರಂತೆ ಕೂರುವುದು ಎಷ್ಟರಮಟ್ಟಿಗೆ ಸರಿ ಎಂದರು.
ತಾವು ಸದನದಲ್ಲಿದ್ದಾಗ ಪ್ರತಿಯೊಂದು ಬಿಲ್ ಪಾವತಿಸಲು ತಮ್ಮ ಕಡೆ ನೋಡಿ ನಂತರ ಅದನ್ನು ಪಾಸ್ ಮಾಡುತ್ತಿದ್ದರು, ಯಾವುದೇ ಒಂದು ಕಾನೂನು,ಬಿಲ್ ಗಳನ್ನು ಪಾಸ್ ಮಾಡುವಲ್ಲಿ ಅದರ ಸಮಗ್ರ ಮಾಹಿತಿ ಪಡೆಯಲು ಗಂಟೆಗಟ್ಟಲೇ ಚರ್ಚೆ ನಡೆಸುತ್ತಿದ್ದೇವು. ಆದರೆ ಈಗ ಪ್ರಶ್ನೆ ಮಾಡುವವರೇ ಇದಂತಾಗಿದ್ದು,ನಿಮಿಷಗಳಲ್ಲೇ ಬಿಲ್ ಗಳು ಪಾಸ್ ಆಗುತ್ತಿದ್ದು,ಕಾನೂನುಗಳ ರಚನೆಯಾಗುತ್ತಿವೆ ಇದರಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಸಂಭವಿಸುತ್ತಿದೆ ಎಂದು ವಿಷಾದಿಸಿದರು.
ಇಂದು ಸರ್ಕಾರಿ ಅಧಿಕಾರಿಗಳು ಮಾಡುವ ತಪ್ಪಿಗೆ ಸಾಮನ್ಯ ಜನ ಸರ್ಕಾರಿ ಕಛೇರಿಗಳ ಬಾಗಿಲಿಗೆ ಅಲೆಯುವಂತಾಗಿದೆ,ಪಹಣಿ ಬರೆಯುವಾಗ ತಪ್ಪು ಮಾಡುವ ಅಧಿಕಾರಿಗಳು ಅದನ್ನು ಸರಿ ಪಡಿಸಲು ನಿಮಿಷದ ಕೆಲಸವಾಗಿದ್ದರೂ ಸಹ ತಿದ್ದುಪಡಿ ಮಾಡಿಸಲು ದಂಡಕಟ್ಟಿ ತಿರುಗುವುದು ಸಾಮಾನ್ಯ ಜನರ ಪಾಡಗಿದೆ,ಇದನ್ನು ಕೇಳುವವರು ಯಾರು ಇಲ್ಲ,ರೈತರಿಗಾಗುವ ಅನ್ಯಾಯವನ್ನು ತಡೆಯಲು ಸಮರ್ಥರು ಬೇಕಿದೆ.ತಾವು ಯಾರಿಗೆ ಮತ ನೀಡಿದರೆ ತಮಗೆ ಉತ್ತಮ ಆಡಳಿತ ದೊರೆಯುತ್ತದೆ ಎಂಬುದನ್ನು ಇಂದು ಮತದಾರರು ಆಲೋಚನೆ ಮಾಡಬೇಕಿದ್ದು ಇದರ ಬದಲು, ಹಣ,ಮದ್ಯ ನೀಡುವವರಿಗೆ ತಾವು ಮತಹಾಕುತ್ತೇವೆಂದರೆ ನನ್ನದೇನು ಅಭ್ಯಂತರವಿಲ್ಲ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್ ಕುಮಾರ್,ಜಿ.ಪಂ.ಸದಸ್ಯೆ ಲೋಹಿತಾ ಬಾಯಿ,ತಿರುಮಲಾಪುರ ಗ್ರಾ.ಪಂ.ಅಧ್ಯಕ್ಷೆ ರಾಜಮ್ಮ,ಜಿ.ಪಂ.ಮಾಜಿ ಸದಸ್ಯೆ ಲಕ್ಷ್ಮಿಅಂದಾನಪ್ಪ, ಮುಖಂಡರಾದ ಚಿಕ್ಕಬಿದರೆ ಚಂದ್ರಣ್ಣ, ಕೆಂಕೆರೆಶಿವಕುಮಾರ್,ಬಡ್ಡಿಪುಟ್ಟಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ