ಪ್ರಸ್ತುತ ನಡೆಯಲಿರುವ ವಿಧಾನಸಭಾ ಚುನಾವಣೆಯು ಅಭ್ಯರ್ಥಿ ಹಾಗೂ ಪಕ್ಷಗಳ ಪಾಲಿನ ಪ್ರತಿಷ್ಠೆಯ ಕಣವಾಗಿರುವುದರಿಂದ ನಮ್ಮ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ಹಾಕಿ ಮತದಾರರ ಮನಸ್ಸಲ್ಲಿ ಬಿಜೆಪಿಗೆ ತಮ್ಮ ಮತ ಎಂಬ ಮನೋಭಾವ ಮೂಡಿಸಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯದಲ್ಲಿ ಸಕ್ರೀಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕರೆ ನೀಡಿದರು.
ಹುಳಿಯಾರಿನ ವಸಂತನಗರ ಬಡಾವಣೆಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಒಂದು ರಾಜಕೀಯ ಪಕ್ಷ ಚುನಾವಣೆಯಲ್ಲಿ ವಿಜಯಿಶಾಲಿಯಾಗಿ ಅಧಿಕಾರದ ಗದ್ದುಗೆ ಏರಬೇಕಾದರೆ ಪಕ್ಷದ ಅಭಿವೃದಿ ಕಾರ್ಯಗಳು ಮತ್ತು ಪಕ್ಷದ ಕಾರ್ಯಕರ್ತರ ಉತ್ತಮ ಚಟುವಟಿಕೆಗಳೇ ಅದಕ್ಕೆ ಪ್ರಮುಖ ಕಾರಣವಾಗಲಿದ್ದು, ಬಿಜೆಪಿಯ ಎಲ್ಲಾ ಕಾರ್ಯಕರ್ತರು ಬಿಜೆಪಿಯ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಮುಂದಾಗಿ ಬಿಜೆಪಿಗೆ ಮತ ಹಾಕುವಂತೆ ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಕೇಂದ್ರದ ಬಿಜೆಪಿ ಸರ್ಕಾರದ ಆಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ದೇಶಾದ್ಯಂತ ಉತ್ತಮ ರಸ್ತೆಗಳು,ಬಡವರಿಗಾಗಿ ಆರೋಗ್ಯಶ್ರೀ ಯೋಜನೆಯಂಹ ಹತ್ತು ಹಲವು ಅಭಿವೃದ್ದಿ ಕಾರ್ಯಗಳಾಗಿದ್ದವು.ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವ್ಯವಸ್ಥಿತ ಆರ್ಥಿಕ ನೀತಿಯಿಂದಾಗಿ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ.ಅಲ್ಲದೆ ಕಾಂಗ್ರೆಸ್ ಸರ್ಕಾರವು ಕೈಗೊಳ್ಳುವ ಯೋಜನೆಗಳಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಅಭಿವೃದ್ದಿಯ ನೆಪದಲ್ಲಿ ಜನಸಾಮಾನ್ಯರ ಮೇಲೆ ಬಾರ ಹೇರುವಂತಹ ಹಾಗೂ ಕರ್ನಾಟಕದ ನೆರೆಹೊರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ನಮ್ಮ ರಾಜ್ಯಕ್ಕೆ ಅನುದಾನಗಳನ್ನು ನೀಡದಿರುವ ಕಾಂಗ್ರೆಸ್ ಪಕ್ಷದ ಆಡಳಿತ ತಮಗೆ ಬೇಕೆ ಎಂದು ಕಿಡಿಕಾರಿದರು.
ಮಾನ್ಯ ಯಡಿಯೊರಪ್ಪನವರು ರೈತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ರೈತರ ಸಾಲಮನ್ನಾ,ಶಾಲಾಮಕ್ಕಳಿಗೆ ಉಚಿತ ಸೈಕಲ್ ವಿತರಣೆ,ಮಹಿಳೆಯರಿಗಾಗಿ ಮಡಿಲು,ಭಾಗ್ಯಲಕ್ಶ್ಮಿ ಯೋಜನೆ,ವೈದ್ಯಕೀಯ ಕ್ಷೇತ್ರದಲ್ಲಿ ಬಡವರಿಗಾಗಿ 108ಎಂಬ ತುರ್ತುವಾಹನಗಳನ್ನು ಪ್ರತಿಯೊಂದು ಹೋಬಳಿ ಮಟ್ಟದ ಅಸ್ಪತ್ರೆಗಳಿಗೆ ನೀಡಿದ್ದಾರೆ.ಇಂದು ಅವರು ಬಿಜೆಪಿಯನ್ನು ತೊರೆದು ಬೇರೆ ಪಕ್ಷ ಕಟ್ಟಿದ್ದರೂ ಸಹ ಅವರು ಕೈಗೊಂಡಿದ್ದ ಕಾರ್ಯಗಳು ಬಿಜೆಪಿಯ ಪಕ್ಷದ ಸಾಧನೆ ಎಂದರು.
ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ತಾವು ಹೆಚ್ಚಿನ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವುದಾಗಿ ಬೀಗುವ ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಗೆ ಕ್ಷೇತ್ರದ ಅಭಿವೃದ್ದಿಗಾಗಿ ಅನುದಾನಗಳನ್ನು ಬಿಡುಗಡೆದ್ದು ಬಿಜೆಪಿ ಸರ್ಕಾರ ಎಂಬುದನ್ನು ಅವರು ಮನದಟ್ಟು ಮಾಡಿಕೊಳ್ಳಬೇಕಿದೆ ಎಂದರು. ಚುನಾವಣೆ ಸಮಯದಲ್ಲಿ ಮಾತ್ರ ಪಕ್ಷಗಳ ನಡುವೆ ಪೈಪೋಟಿ ಇರುವುದು ಸಹಜ ಆದರೆ ಅಭಿವೃದ್ದಿ ವಿಷಯಗಳಲ್ಲಿ ಯಾವುದೇ ರೀತಿಯ ಪಕ್ಷಪಾತ ಮಾಡಬಾರದು ಎಂಬ ಧ್ಯೇಯದಿಂದ ರಾಜ್ಯದ ಅಭಿವೃದ್ದಿಯೊಂದೆ ತಮ್ಮ ಗುರಿಯಾಗಿಸಿಕೊಂಡಿರುವುದು ಬಿಜೆಪಿ ಪಕ್ಷವಾಗಿದೆ ಎಂದರು.
ತಾಲ್ಲೂಕಿಗೆ ಹೇಮಾವತಿ ನೀರು: ರಾಜ್ಯ ಬಿಜೆಪಿ ಸರ್ಕಾರವು ಚಿ.ನಾ.ಹಳ್ಳಿ ತಾಲ್ಲೂಕು ಭಾಗದ ಜನ ನೀರಿನ ಭವಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ಹಾಗೂ ಜನರ ಸಂಕಷ್ಟವನ್ನು ಅರಿತು ಈ ಭಾಗಕ್ಕೆ 102ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಹೇಮಾವತಿ ನದಿ ನೀರು ಹರಿಸಲು ಶಂಕು ಸ್ಥಾಪನೆ ಮಾಡಿರುವುದು ಬಿಜೆಪಿಯ ಸಾಧನೆಯ ಮೈಲುಗಲ್ಲಾಗಿದ್ದು,ಮುಂದಿನ ದಿನಗಳಲ್ಲಿ ಇಂತಹ ಹತ್ತು ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿರುವಂತ ತಮ್ಮ ಪಕ್ಷಕ್ಕೆ ಹೆಚ್ಚಿನ ಮತ ನೀಡುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆಯನ್ನು ನೀಡುವಂತೆ ಭಿನ್ನಹಿಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಪ್ರಸಾದ್,ತಾ.ಪಂ.ಅಧ್ಯಕ್ಷ ಜಗದೀಶ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜನಜಾಗೃತಿ ವೇದಿಕೆಯ ಅಧ್ಯಕ್ಷೆ ಕವಿತಾಕಿರಣ್ ಮಾತನಾಡಿದರು. ತಾ.ಪಂ.ಮಾಜಿ ಅಧ್ಯಕ್ಷ ಸೀತಾರಾಂ,ಜಿ.ಪಂಸದಸ್ಯೆ ನಿಂಗಮ್ಮ,ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್,ವಸಂತಯ್ಯ,ಪಂಚಾಕ್ಷರಿ,ಕೆಂಕೆರೆ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮ,ಮುಖಂಡರಾಡ ಬೊಮ್ಮಣ್ಣ,ವಕೀಲ ರಮೇಶ್ ಬಾಬು,ದಯಾನಂದ್,ಶ್ರೀನಿವಾಸ್, ಕಾಯಿಕುಮಾರ್ ಸೆರಿದಂತೆ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ