ಯಾವುದೇ ಒಂದು ಕಾರ್ಯದಲ್ಲಿ ಸಂಪೂರ್ಣ ಯಶಸ್ಸು ಲಭಿಸಬೇಕಾದರೇ ಆ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲರೂ ಶ್ರದ್ದೆ ಹಾಗೂ ಒಂದೇ ಮನೋಭಾವದಿಂದ ದುಡಿದಾಗ ಮಾತ್ರ ಸಾಧ್ಯವಿದ್ದು, ಪೋಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳ ನಡುವೆ ಕೋ-ಆರ್ಡಿನೇಷನ್ ಇದ್ದಾಗ ಯಾರೊಬ್ಬರಲ್ಲಿಯೂ ಭಿನ್ನಾಭಿಪ್ರಾಯಗಳು ಮೂಡದೆ ತಮ್ಮ ತಮ್ಮ ಕಾರ್ಯಗಳನ್ನು ಮಾಡಬಹುದಾಗಿದೆ ಎಂದು ಪಿಎಸೈ ಟಿ.ವಿ.ರಾಜು ತಿಳಿಸಿದರು.
ಹುಳಿಯಾರು ಪೋಲೀಸ್ ಠಾಣೆಯಲ್ಲಿ ಏಳು ತಿಂಗಳ ಕಾಲ ಕಾರ್ಯ ನಿರ್ವಹಿಸಿ ಚುನಾವಣ ಆಯೋಗದ ನಿಯಮದಂತೆ ವರ್ಗಾವಣೆಯಾದ ಅವರು ಸಿಬ್ಬಂದಿ ವರ್ಗದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸರ್ಕಾರಿ ಕೆಲಸ ನಿಂತ ನೀರಲ್ಲ ಸದಾ ಹರಿಯುವ ಸ್ವಚ್ಚ ನೀರಿನಂತಿದ್ದು, ಸರ್ಕಾರಿ ನೌಕರರಿಗೆ ವರ್ಗಾವಣೆ ಎಂಬುದು ಕಟ್ಟಿಟ್ಟ ಬುತ್ತಿಯಾಗಿದೆ. ಅದರ ನಿಯಮದಂತೆ ವರ್ಗಾವಣೆಯಾಗಿದೆ ಇದಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದರು.ಪೋಲೀಸ್ ಕೆಲಸವು ನೀರಮೇಲಿನ ಗುಳ್ಳೆಯಂತಿದ್ದು,ದಿನದ ಇಪ್ಪತ್ನಾಲು ಗಂಟೆಗಳ ಕಾಲ ಎಚ್ಚೆತ್ತು ಕರ್ತವ್ಯ ನಿರ್ವಹಿಸಬೇಕಿದೆ ಎಂದ ಅವರು ತಾವು ಕಾರ್ಯ ನಿರ್ವಹಿಸಿದ ಹುಳಿಯಾರು ಹಾಗೂ ಹಂದನಕೆರೆ ಠಾಣಾ ವ್ಯಾಪ್ತಿಯಲ್ಲಿನ ಜನರು ತಮ್ಮೊಂದಿಗೆ ಉತ್ತಮ ಸಹಕಾರ ಮನೋಭಾವ ಹೊಂದಿದ್ದರು,ಅಲ್ಲದೆ ಠಾಣ ಸಿಬ್ಬಂದಿ ವರ್ಗದವರು ತಮಗೆ ವಹಿಸಿದ ಕೆಲಸವನ್ನು ಚಾಚು ತಪ್ಪದೆ ಮಾಡುತ್ತಿದ್ದರು ಎಂದು ಶ್ಲಾಘಿಸಿದರು.
ಸಿಪಿಐ ಪ್ರಭಾಕರ್ ಮಾತನಾಡಿ.ಪೋಲೀಸರಿಗೆ ಸಾರ್ವಜನಿಕರೊಂದಿಗೆ ಸಹಕಾರ ಅಗತ್ಯವಿದ್ದು,ಹಾಗಿದ್ದಾಗ ಮಾತ್ರವೇ ತಾವು ನಡೆಸುವ ತನಿಖೆಗೆ ಸೂಕ್ತ ಮಾಹಿತಿಗಳು ದೊರೆಯುತ್ತವೆ ಎಂದರು. ರಾಜು ಅವರು ತಮ್ಮ ವೃತ್ತದಲ್ಲಿ ಅನುಭವಿ ಹಾಗೂ ಹಿರಿಯ ಪಿಎಸೈ ಆಗಿದ್ದು,ತಮ್ಮ ಠಾಣಾ ವ್ಯಾಪ್ತಿಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಸುಲಲಿತವಾಗಿ ಬಗೆ ಹರಿಸುವ ಚಾಣಾಕ್ಷತೆಯನ್ನು ಹೊಂದಿದ್ದ ಇವರು ಹುಳಿಯಾರು ಠಾಣೆಗೆ ಬಂದಾಗಿನಿಂದ ಸಾಕಸ್ಟು ಕ್ರೈಂಗಳು ಕಡಿಮೆಯಾಗಿತ್ತು ಎಂದರು.
ಬೀಳ್ಕೊಡಿಗೆ ಸಮಾರಂಭದಲ್ಲಿ ಚಿ.ನಾ.ಹಳ್ಳಿ ಪಿಎಸೈ ಗೋವಿಂದಯ್ಯ,ಹಂದನಕೆರೆ ಪಿಎಸೈ ಮಂಜು,ಎಎಸೈ ಗಂಗಾಧರ್,ಕೃಷ್ಣಮೂರ್ತಾಚಾರ್, ಹಿರಿಯ ಪೇದೆಗಳಾದ ಬಸವರಾಜು, ಸಿದ್ದರಾಮಣ್ಣ, ಸಿಬ್ಬಂದಿ ವರ್ಗದ ಕುಮಾರ್, ನಾಗಭೂಷಣ್, ಮಹೇಶ್, ರಂಗಸ್ವಾಮಿ, ಕಾಂತರಾಜು, ಮಹಿಳಾ ಪೇದೆ ಕುಮುದಾ,ಸ್ಥಳೀಯರಾದ ನಾಗರಾಜು,ಮಹೇವಪ್ಪ,ಕೆಂಕೆರೆ ಸತೀಶ್, ಮಲ್ಲಿಕಣ್ಣ,ನಂದಿಹಳ್ಳಿ ಶಿವಣ್ಣ,ಏಜೆಂಟ್ ಕುಮಾರ್,ಬೀರಪ್ಪ ಹಾಗೂ ಇತರರು.
ಪಿಎಸೈ ಟಿ.ವಿ.ರಾಜು ಅವರನ್ನು ತಾಲ್ಲೂಕು ಒಕ್ಕಲಿಗ ನೌಕರ ವೇದಿಕೆವತಿಯಿಂದ ಸನ್ಮಾನಿಸಿ ಬಿಳ್ಕೊಟ್ಟರು. ಅಧ್ಯಕ್ಷ ಹೆಚ್.ಎಸ್.ಪ್ರಕಾಶ್,ಗೌರವಾಧ್ಯಕ್ಷ ಗಂಗಾಧರಪ್ಪ,ಜಿ.ಸಿ.ಲೋಕೇಶ್,ವೆಂಕಟೇಶ್,ವಕೀಲ ಸದಾಶಿವಯ್ಯ,ಮೋಹನ್ ಹಾಗೂ ಇತರರು.
|
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ