ವಿಷಯಕ್ಕೆ ಹೋಗಿ

ಗುಲಗಂಜಿ - "ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ"

ಗುಲಗಂಜಿ : ಈ ಪದ ಬಹಳ ಹಿಂದೆ ಕಿವಿಗೆ ಬಿದ್ದಿತ್ತೆ ವಿನಃ ಅದು ಏನೂ ಅಂತ ತಿಳಿದಿರಲ್ಲಿಲ್ಲಾ.ಇತ್ತೀಚೆಗೆ ನಮ್ಮ ಮೈನ್ಸ್ ನಲ್ಲಿ ಗಿಡದ ಸಂದಿಯಲ್ಲಿ ಲ್ಲಿ ಓಡಾಡಿಕೊಂಡು ಬರ್ತಿದ್ದಾಗ ಹಳ್ಳದ ಪಕ್ಕ ಇದ್ದ ಗಿಡದ ಬಳಿ
ಒಂದಷ್ಟು ಕಾಯಿ ಸುರಿದು ಬಿದ್ದಿದ್ದು ಇದೇನೆಂದು ಕೇಳಿದಾಗ ಗುಲಗಂಜಿ ಅನ್ನುವ ಉತ್ತರ ಬಂತು.ಅರೆರೇ ಇದೇನಾ ಗುಲಗಂಜಿ ಅಂತ ಆಶ್ಚರ್ಯ ಆಯ್ತು.ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪ ಬಂಗಾರದ ವಿಚಾರ ಮಾತಾಡ್ತಿದ್ದಾಗ ಆ ಪದ ಕಿವಿಗೆ ಬಿದಿತ್ತೆ ಹೊರತು ಅದರ ಬಗ್ಗೆ ಸ್ಪಷ್ಟ ಕಲ್ಪನೆ ಇರ್ಲಿಲ್ಲಾ.ಹಿಂದಿನ ದಿನಗಳಲ್ಲಿ ಆಚಾರಿಗಳು ಬಂಗಾರವನ್ನು ಗುಲಗಂಜಿ ತೂಕದಲ್ಲಿಯೇ ತೂಗುತ್ತಿದ್ದರಂತೆ.
ಆಗೆಲ್ಲಾ ಹಳ್ಳಿಗಳಲ್ಲಿನ ಅಕ್ಕಸಾಲಿಗರ ಮನೆಯಲ್ಲಿ ಚಿನ್ನ ತೂಕ ಮಾಡಲು ಗುಲಗಂಜಿ ಬಳಕೆ ಆಗ್ತಿತ್ತು.ಈಗೆಲ್ಲಾ ಬಂಗಾರದ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಮಿಶಿನ್ ಗಳು ಬಂದಿದ್ದು ಹಿಂದಿನ ರೀತಿ ಇದರ ಬಳಕೆ ಇಲ್ವೇಇಲ್ಲಾ ಅನ್ನಬಹುದು. ಈಗಿನವರಿಗೆ ಈ ಪದನೇ ಅಪರಿಚಿತ.ಇಂತಹ ಗುಲಗಂಜಿ ಗಿಡದಲ್ಲಿ ಬಿಡುವ ಕಾಯಿ ಅಂತ ತಿಳಿದಿರಲಿಲ್ಲಾ.
           ಗುಲಗಂಜಿ ಗಿಡದಲ್ಲಿ ಬಿಡುವ ಆಕರ್ಷಕವಾದ ಕೆಂಪು ಮತ್ತು ಕಡು ಕಪ್ಪು ಬಣ್ಣದ ಒಂದು ಬೀಜ.ಗುಲಗಂಜಿಯ ಗಿಡ ಹಳದಿ ಬಣ್ಣದ್ದಾಗಿದ್ದು ಕೆಂಪು ಹೂವುಗಳನ್ನು ಬಿಡುತ್ತದೆ. ಕಡು ಕೆಂಪಗಿರುವ ತುದಿಯಲ್ಲಿ ಕಪ್ಪು ಟೋಪಿಹೊಂದಿರುವಂತೆ ಕಾಣುವ ಇದು ಸಣ್ಣ ಮೊಟ್ಟೆಯ ಆಕಾರದಲ್ಲಿತ್ತದೆ.ಇವುಗಳಲ್ಲಿ ಮೂರು ವಿಧ.ಹಾಲಿನಕೆನೆ ಬಣ್ಣದ ಗುಲಗಂಜಿ, ಕೆಂಪು ಬಣ್ಣದ ಗುಲಗಂಜಿ,ಮತ್ತು ಕಪ್ಪು ಬಣ್ಣದ ಗುಲಗಂಜಿ.ಗುಲಗಂಜಿ ಕಾಡಿನಲ್ಲಿ ಬೆಳೆಯುವ ಸಾಮಾನ್ಯ ಕಳೆ ಸಸ್ಯ.ಕುರುಚಲು ಗಿಡಗಳ ಮುಳ್ಳು ಪೊದೆಗಳ ಮಧ್ಯೆ ಈ ಗಿಡ ಬೆಳೆಯುತ್ತೆ. ಏಬ್ರಸ್ ಪ್ರಿಕಟೋರಿಯಸ್`- ಗುಲಗಂಜಿಯ ಸಸ್ಯಶಾಸ್ತ್ರೀಯ ಹೆಸರು `ಏಬ್ರಸ್ ಪ್ರಿಕಟೋರಿಯಸ್'. ಇಂಗ್ಲೀಷ್‌ನಲ್ಲಿ `ಇಂಡಿಯನ್ ಲಿಕೋರಿಸ್' ಅಥವಾ `ಕ್ರಾಬ್ಸ್ ಐ, ಕನ್ನಡದಲ್ಲಿ `ಗುಲಗಂಜಿ' , ಮಲೆಯಾಳಂನಲ್ಲಿ ಕುನ್ನಿ-ಕುರು, ಸಂಸ್ಕೃತದಲ್ಲಿ `ಗುಂಜ, ತಮಿಳಿನಲ್ಲಿ `ಗುಂಡು ಮಣಿ' ಮತ್ತು `ಕುಂತಮಣಿ', ತೆಲುಗಿನಲ್ಲಿ `ಗುರಿವಿಂದ',  ಪಂಜಾಬಿಯಲ್ಲಿ `ಮುಲಟಿ', ಬೆಂಗಾಲಿಯಲ್ಲಿ ಕುಂಚ್ ಅಥವಾ ಕೂಂಚ್, ಕಾಶ್ಮೀರಿ ಭಾಷೆಯಲ್ಲಿ `ಶಂಗಿರ್' ಹೀಗೆ ನಾನಾ  ಹೆಸರುಗಳಿಂದ ಕರೆಯುತ್ತಾರೆ.ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳು ಗುಲಗಂಜಿಯ ತವರು.ಔಷಧೀಯ ಗುಣವಿರುವ ಬಿಳಿ ಗುಲಗಂಜಿಯನ್ನು ನಾಟಿ ವೈದ್ಯದಲ್ಲಿ ಬಳಸುತ್ತಾರೆ.ಗುಲಗಂಜಿ ಬೀಜಗಳಲ್ಲಿ ಅಬ್ರಿನ್ ಎಂಬ ವಿಷವಸ್ತು ಇದ್ದು ನಾಗರ ಹಾವಿನ ವಿಷಕ್ಕಿಂತಲೂ ತೀಕ್ಷ್ಣ ವಿಷಕಾರಿಎನ್ನಲಾಗುತ್ತದೆ.ಗುಲಗಂಜಿ ಬೀಜದ ಹೊರ ಪದರವು ತುಂಬಾ ಗಟ್ಟಿಯಾಗಿದ್ದು ಬೀಜದ ತಿರುಳಿನಲ್ಲಿ ವಿಷ ಇರುತ್ತದೆ. ಬೀಜಗಳನ್ನು ಅರೆದಾಗ ಅದರಲ್ಲಿನ ವಿಷ ಹೊರಬರುತ್ತದೆ. ಆದರೆ ಗುಲಗಂಜಿ ಗಿಡದ ಉಳಿದ ಭಾಗಗಳಾದ ಕಾಂಡ, ಸೊಪ್ಪು, ಎಲೆ ಇತ್ಯಾದಿಗಳು ವಿಷ ಬಾಧೆಯನ್ನುಂಟು ಮಾಡುವುದಿಲ್ಲ.ಗುಲಗಂಜಿಯನ್ನು ಕಡಿಯದೆ ಹಾಗೇ ನುಂಗಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವಂತೆ. ಮಲ ವಿಸರ್ಜನೆಯ ಮೂಲಕ ಅದು ದೇಹದಿಂದ ಹೊರ ಹೋಗುತ್ತದೆ. ಅದನ್ನೇನಾದ್ರು ಅಗಿದು ಇಲ್ಲ ಪುಡಿ ಮಾಡಿ ತಿಂದರೆ ಪ್ರಾಣಾಪಾಯ ತಪ್ಪಿದ್ದಲ್ಲ.ಹಿಂದೆ ಈ ಬೀಜಗಳನ್ನು   ಜಾನುವಾರುಗಳು ಮತ್ತು ಮನುಷ್ಯರನ್ನು ಸಾಯಿಸಲು ಬಳಸಲಾಗುತಿತ್ತಂತೆ.ರಾಜರುಗಳು ಯುದ್ಧದಲ್ಲಿ ಇದೇ ಗುಲಗಂಜಿಯಿಂದ ಶತ್ರು ಗಳನ್ನು ಕೊಲ್ಲುಸ್ತಿದ್ದರಂತೆ.ಚೀನಾ ದೇಶದಲ್ಲಿ ಪ್ರೀತಿಯ ಸಂಕೇತ ಆಗಿರುವ ಗುಲಗಂಜಿಯನ್ನು ಮ್ಯೂಚುಯಲ್ ಲವ್ ಬೀನ್ ಎನ್ನುತ್ತಾರೆ. ಟ್ರಿನಿಡ್ಯಾಡ್, ವೆಸ್ಟ್ ಇಂಡೀಸಿನಲ್ಲಿ "ದೃಷ್ಟಿ ನಿವಾರಕ" ಎಂದು ತೋಳ್ಬಂದಿಯಾಗಿ ಬಳಸ್ತಾರೆ.
       
    ಚಿನ್ನ ತೂಕ ಮಾಡಲು ಈ ಬೀಜನೇ ಯಾಕೆ ಉಪಯೋಗಿಸ್ತಾರೆ ಅವ್ರಿಗೆ ಬೇರೆನೂ ಸಿಕ್ಕಲಿಲ್ವೆ ಅಂತ ಕೆದುಕ್ತಾ ಹೋದಾಗ ಅಚ್ಚರಿ ವಿಷಯ ತಿಳಿದುಬಂತು. ಗುಲಗಂಜಿಯ ಎಲ್ಲ ಕಾಳುಗಳು ಒಂದೇ ತೂಕ ಇರುತ್ತವಂತೆ. ಅದಕ್ಕಾಗಿ ಗುಲಗಂಜಿಯನ್ನು ತೂಕಕ್ಕೆ ಬಳುಸುತ್ತಾರೆ ಎಂದು ಹೇಳುತ್ತಾರೆ.ಗುಂಜಿ ಎಂದರೆ ಅಂದಾಜು 122 ಮಿಲಿ ಗ್ರಾಂ. ಒಂದು ಆಣೆಗೆ 6 ಗುಂಜಿ. ಅಪ್ಪಟ ಹದಿನಾರಾಣೆ ತೂಕ ಎಂದು ಹೇಳುವುದು ಬಂಗಾರಕ್ಕೆ ತಾನೆ.
           ಗುಲಗಂಜಿಯ ಬಗ್ಗೆ ಅನೇಕ ಮಾತುಗಳು,ಒಗಟುಗಳು ಕೇಳಿಬರುತ್ತೆ.ಕೆಲವು ಸಂದರ್ಭಗಳಲ್ಲಿ ಹೆಣ್ಣನ್ನು ಗುಲಗಂಜಿಗೆ ಹೋಲಿಸುವುದುಂಟು.ಜಾನಪದದಲ್ಲಿ ಗುಲಗಂಜಿಗೆ ಮಹತ್ವವಿದೆ.ಗುಲಗಂಜಿ ಒಮ್ಮೆ ನನಗಿಂತಾ ಸುಂದರಿಯಿಲ್ಲ ಎಂದು ಬೀಗುತ್ತಿತ್ತಂತೆ.ಬೇರೆಯವರ ಬಣ್ಣ ನೋಡಿ ನಗುತ್ತಿದ್ದ ಗುಲಗಂಜಿಗೆ ತನ್ನ ಕೆಳಗಿರುವ ಕಪ್ಪು ಬಣ್ಣದ ಬಗ್ಗೆ ತಿಳಿದಿರಲಿಲ್ಲ.ಇದನ್ನು ಮಾರ್ಮಿಕವಾಗಿ ಹಳ್ಳಿಗಳಲ್ಲಿ ಬೀಗುವ ಜನರಿಗೆ ಹಿರಿಯವರು ಬುದ್ದಿ ಹೇಳುವಾಗ ಬಳಸುತ್ತಾರೆ.
"ಆಕಾಶಕ್ಕೆ ಆಸೆಪಟ್ಟರೆ ಗಿಟ್ಟೋದು ಗುಲಗಂಜಿ; ದಕ್ಕಿದ್ದಷ್ಟೇ ಈ ಜನುಮದಲ್ಲಿ"
ಬಯ್ಗಳಲ್ಲೂ "ಥು ಗುಲಗುಂಜಿಯಷ್ಟೂ ಅವನಿಗೆ ಮಾನ ಇಲ್ವಲ್ಲಾ" ಎಂದೋ ಅಥವ "ಅಲ್ಲ ಒಂದು ಗುಲಗುಂಜಿಯಷ್ಟಾದರೂ ಅಭಿಮಾನ ಇರಬೇಕಲ್ವಾ" ಎನ್ನೊ ಮಾತು ಕೇಳಿ ಬರೋದುಂಟು. 
."ಕೋತಿ ಕೈಗೆ ಗುಲಗಂಜಿ ಕೊಟ್ಟಂಗೆ" ಎಂಬ ಗಾದೆ ಕೂಡಾ ಇದೆ.ಬೆಲೆ ಗೊತ್ತಿಲ್ಲದವರ ಕೈಯಲ್ಲಿ ಬೆಲೆಬಾಳುವ ವಸ್ತುವೊಂದನ್ನು ಕೊಟ್ಟ್ರೆ ಏನಾಗಬಹು ಎನ್ನುವುದಕ್ಕೆ ಈ ಗಾದೆಯನ್ನು ಬಳಸ್ತಾರೆ.

ಪೌರಾಣಿಕ ಮಹತ್ವ:ಮೈಸೂರಿಗೆ ಕೇವಲ 32 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರದಲ್ಲಿನ ನರಸಿಂಹನ ಬಲಗೈಯಲ್ಲಿ ಗುಲಗಂಜಿ ಇದೆಯಂತೆ.ಹಾಗಾಗಿ ಈತ ಇತರೆಡೆಯಲ್ಲಿರುವ ಮಿಕ್ಕೆಲ್ಲ ನರಸಿಂಹರಿಗಿಂತ ಒಂದು ಗುಲಗಂಜಿ ಶ್ರೇಷ್ಠನಂತೆ .ಇದಕ್ಕಾಗೆ ಇವನ್ನನ್ನು ಗುಂಜಾ ನರಸಿಂಹ ಎಂದು ಕರೀತಾರಂತೆ.ಒಂದ್ಸಲ ಹಂಪಿ ಮತ್ತು ಕಾಶಿ ಹೆಚ್ಚೋ ಎಂಬ ಪಾವಿತ್ರತೆಯ ತೂಕ ಮಾಡುವ ಭಾರ ಶ್ರೀಕೃಷ್ಣನ ಮೇಲೆ ಬಿತ್ತಂತೆ. ತೂಕ ಮಾಡಿದಾಗ ಹಂಪಿಯ ತೂಕ ಒಂದು ಗುಲಗಂಜಿ ಕಾಳಿನಷ್ಟು ಹೆಚ್ಚು ಬಂದಿತಂತೆ. ತೂಕ ಮಾಡಿದ ಕೃಷ್ಣನನ್ನು "ಗುಲಗಂಜಿ ಕೃಷ್ಣ" ಎಂದೂ ಹಂಪಿಯ ವಿರೂಪಾಕ್ಷ ದೇವರ ಗುಡಿಯ ಆವರಣದಲ್ಲಿ ಕೃಷ್ಣನಿಗೂ ಗುಡಿ ಕಟ್ಟಿದರಂತೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.