ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀ ಕಾಳಿಕಾಂಬದೇವಿಯ ಜಾತ್ರಾ ಮಹೋತ್ಸವವು ಶನಿವಾರದಂದು ಉಪ್ಪರಿಗಯ್ಯನ ಬಸಯ್ಯನ ಮನೆಯವರಿಂದ ನಡೆದ ಅಗ್ನಿಕೊಂಡಸೇವಾ ಕಾರ್ಯದದೊಂದಿಗೆ ಚಾಲನೆಗೊಂಡಿದ್ದು ತಾ.20ರ ಶನಿವಾರದವರೆಗೆ ಎಂಟು ದಿನಗಳ ಕಾಲ ನಡೆಯಲಿದೆ.
ತಾ.14ರ ಭಾನುವಾರ ವೇ.ಚನ್ನಬಸವಯ್ಯ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ,ತಾ.15ರ ಸೋಮವಾರ ಕರೇಸಿದ್ದಯ್ಯನ ಚನ್ನವೀರಮ್ಮ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ ಕಾರ್ಯ, ತಾ.16ರ ಮಂಗಳವಾರ ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ,ಆರತಿಬಾನ ಕಾರ್ಯ ಹಾಗೂ ಇದೇ ದಿನ ರಾತ್ರಿ ಗೌಡಗೆರೆ ಶ್ರೀದುರ್ಗಮ್ಮದೇವಿ,ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಹುಳಿಯಾರು ದುರ್ಗಮ್ಮದೇವಿಯವರ ಆಗಮನದೊಂದಿಗೆ ಕೂಡುಭೇಟಿ ನಡೆಯಲಿದೆ.ತಾ.17ರ ಬುಧವಾರ ಬೆಳಿಗ್ಗೆ ಮಡಲಕ್ಕಿಸೇವೆ ರಾತ್ರಿ ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಅಮ್ಮನವರ ಉಯ್ಯಾಲೆ ಉತ್ಸವ ನಡೆಯಲಿದೆ.ತಾ.18ರ ಗುರುವಾರ ಬೆಳಿಗ್ಗೆ ಕಲಶ ಮಹೋತ್ಸವ,ರಾತ್ರಿ ಬರದಲೇಪಾಳ್ಯದ ಅಂಬಿಕಾ ಕೃಪಾಪೋಷಿತ ನಾಟಕ ಮಂಡಳಿಯವರಿಂದ ದೇವಿಮಹಾತ್ಮೆ ನಾಟಕ ಪ್ರದರ್ಶನ,ತಾ.19 ಶುಕ್ರವಾರ ಸಿಡಿ ಕಾರ್ಯಕ್ರಮ,ತಾ.20ರ ಶನಿವಾರ ಓಕಳಿ ಭಂಡಾರ ಸೇವೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ