ಹುಳಿಯಾರಿನ ಶ್ರೀ ಗಣೇಶ್ ಹೋಟೆಲ್ ನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಗ್ಯಾಸ್ ಸಿಲಿಂಡ್ ಸ್ಪೋಟದ ಸ್ಥಳವನ್ನು ಪರಿಶೀಲಿಸುತ್ತಿರುವ ಪಿಎಸೈ ರಾಜು. |
ಗಾಣಧಾಳು ಗ್ರಾಮದ ಶಿವಣ್ಣ ಎಂಬುವರಿಗೆ ಸೇರಿದ್ದ ಈ ಹೋಟೆಲ್ ನಲ್ಲಿ ಮಂಗಳವಾರ ಮದ್ಯರಾತ್ರಿ 12 ರಿಂದ 1 ಗಂಟೆ ಸಮಯದಲ್ಲಿ ಘಟನೆ ಸಂಭವಿಸಿದೆ. ಹೋಟೆಲ್ ಮೇಲ್ಭಾಗದಲ್ಲಿ ವಾಸವಿರುವ ಚನ್ನಬಸವಯ್ಯ ಅವರ ಪ್ರಕಾರ ಮಧ್ಯರಾತ್ರಿ ಹನ್ನೆರಡರ ಸಮಯದಲ್ಲಿ ಎದೆ ಜೆಲ್ ಎನ್ನುವಂತೆ ಜೋರಾದ ಶಬ್ದ ಕೇಳಿಬಂದಿದ್ದು, ತಕ್ಷಣವೇ ಹೊರಗಡೆ ಬಂದು ನೋಡಿದಾಗ ಹೋಟೆಲ್ ನ ಕಬ್ಬಿಣದ ರೋಲಿಂಗ್ ಶೆಟರ್ ಸುಮಾರು ಐವತ್ತು ಅಡಿ ದೂರ ರಸ್ತೆಯ ಇನ್ನೊಂದು ಬದಿಯಲ್ಲಿ ಎಸೆಯಲ್ಪಟ್ಟಿತು ಅಲ್ಲದೆ ಹೋಟೆಲ್ ಮುಂದೆ ನಿಲ್ಲಿಸಿದ್ದ ನಮ್ಮ ಬೈಕ್ ನ ಮುಂಭಾಗ ಹಾಗೂ ಪ್ಯಾಸೆಂಜರ್ ಆಟೋ ಸಂಪೂರ್ಣ ಜಖಂ ಗೊಂಡಿದ್ದವು,ತಕ್ಷಣವೇ ಪೋಲೀಸ್ ಹಾಗೂ ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದೆವು ಎಂದು ಅವರು ಮಾಹಿತಿ ನೀಡಿದರು. ವೃತ್ತ ನೀರೀಕ್ಷಕ ಪ್ರಭಾಕರ್ , ಪಿಎಸೈ ರಾಜು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಸ್ಪೋಟಕ್ಕೆ ಸೂಕ್ತ ಕಾರಣವೇನೆಂದು ತಿಳಿದು ಬಂದಿರುವುದಿಲ್ಲ. ಜಕಂಗೊಂಡಿರುವ ಬೈಕ್ ಬೈರವೇಶ್ವರ ಮೆಡಿಕಲ್ ನ ಚನ್ನಬಸವಯ್ಯ ಎಂಬುವರಿಗೆ ಹಾಗೂ ಆಟೊ ಹರ್ಷ ಎಂಬುವರಿಗೆ ಸೇರಿದ್ದವಾಗಿದ್ದು,ಯಾವುದೇ ಪ್ರಾಣಾಪಾಯ ಸಂಭವಿಸಿರುವುದಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ