ಬಿರು ಬಿಸಿಲನ್ನು ಲೆಕ್ಕಿಸದೆ ಪಟ್ಟಣದಾದ್ಯಂತೆ ಗುರುವಾರ ವಿವಿಧ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅಬ್ಬರದ ಪ್ರಚಾರ ನಡೆಸಿದರು.ಒಂದು ಕಡೆ ಬಿಜೆಪಿ ಪಕ್ಷದ ಕಿರಣ್ ಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಮನೆಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದು,ಕಾರ್ಯಕರ್ತರು ಜೈಕಾರಗಳನ್ನು ಹಾಕುತ್ತಾ ತಮ್ಮ ನಾಯಕನಿಗೆ ಓಟು ಕೊಡಿ ಎಂದು ಕೇಳುತ್ತಿದ್ದರು.
ಮತ್ತೊಂದೆಡೆ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ ಮಾರ್ಕೆಟ್ ಯಾರ್ಡ್,ವಠಾರ, ಶಂಕರಪುರ,ವಸಂತನಗರ,ಅಮಾನಿಕೆರೆ ಹೀಗೆ ವಿವಿಧ ಬಡಾವಣೆಗಳಲ್ಲಿ ಅಪಾರ ಸಂಖ್ಯೆಯ ರೈತರೊಂದಿಗೆ ಸುತ್ತಿ ಕ್ಷೇತ್ರದ ಅಭಿವೃದ್ಧಿಗೆ ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಭಿತ್ತಿಪತ್ರಗಳನ್ನು ಹಂಚುತ್ತಾ ಓಟಿನೊಂದಿಗೆ ಒಂದು ನೋಟು ಕೊಡಿ ಎಂದು ಸಾಗುತ್ತಾ ನಡೆದರೆ, ಜೆಡಿಎಸ್ ಪಕ್ಷದ ಸಿ.ಬಿ.ಸುರೇಶ್ ಬಾಬು ಅವರ ಅನುಪಸ್ಥಿಯಲ್ಲಿಯೂ ಅವರ ಪರ ಮುಖಂಡರಾದ ಬೈಜು ಸಾಬ್.ಮಾಜಿ ತಾಪಂ ಸದಸ್ಯ ಶಿವನಂಜಪ್ಪ ,ತರಕಾರಿ ರಘು,ಲಲಿತ ಹಾಗೂ ಶೌಕತ್ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ಜೇಡಿಎಸ್ ಪಕ್ಷಕ್ಕೆ ಮತಯಾಚಿಸುತ್ತಿದ್ದರು.
ಕೆಜೆಪಿ ಪಕ್ಷದ ಜೆ.ಸಿ.ಮಾಧುಸ್ವಾಮಿ ಪರವಾಗಿ ಸ್ಥಳಿಯ ಮುಖಂಡರುಗಳಾದ ಜಹೀರ್ ಸಾಬ್, ಕಾರ್ಗಿಲ್ ಸತೀಶ್,ಗ್ರಾಪಂ ಸದಸ್ಯರುಗಳಾದ ಬಡ್ಡಿ ಪುಟ್ಟಣ್ಣ, ಭೈರೇಶ್, ಅಶೋಕ್ ಬಾಬು ಸೇರದಂತೆ ಅಪಾರ ಅಭಿಮಾನಿಗಳು ಪಟ್ಟಣದ ವಿವಿಧ ಬದಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಸಾಧನೆಗಳನ್ನು ಬಿಂಬಿಸಿ,ಕ್ಷೇತ್ರದ ಬಗ್ಗೆ ಮಾಧುಸ್ವಾಮಿಯವರ ಸಾಧನೆಗಳುಳ್ಳ ಕರಪತ್ರ ಹಂಚುತ್ತಾ ಸಾಗಿದರು.ಒಟ್ಟಾರೆ ಇಂದು ಪಟ್ಟಣದಲ್ಲಿ ಗುರುವಾರದ ಸಂತೆ ಇದ್ದು ಹೋಬಳಿಯ ಸುತ್ತಮುತ್ತಲಿನ ಹಳ್ಳಿಗಳ ಸಾಕಷ್ಟು ಜನ ಬರುತ್ತಾರೆ ಎಂಬುದನ್ನು ಮನಗಂಡು ವಿವಿಧ ಪಕ್ಷದವರು ಒಂದೇ ದಿನ ಪಟ್ಟಣದಾದ್ಯಂತ ಪ್ರಚಾರ ನಡೆಸಿದ್ದಾರೆ.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ