ಮತದಾರರೇ ಒಂದು ಓಟು ಕೊಡುವುದರ ಜೊತೆ ಒಂದು ನೋಟು ಕೊಟ್ಟು ತಮ್ಮನ್ನು ಜಯಶೀಲರನ್ನಾಗಿ ಮಾಡಿ ಎನ್ನುವ ಘೋಷವಾಕ್ಯದೊಂದಿಗೆ ಚುನಾವಣಾ ಪ್ರಚಾರ ಪ್ರಾರಂಬಿಸಿದ್ದಾರೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಹೋರಾಟಗಾರ ಕೆಂಕೆರೆ ಸತೀಶ್.
ಹುಳಿಯಾರಿನ ಅಂಬೇಡ್ಕರ್ ಕಾಲೋನಿಯಿಂದ ತಮ್ಮ ಚುನಾವಣಾ ಪ್ರಚಾರ ಪ್ರಾರಂಭಿಸಿದ ಅವರು ತರಕಾರಿ ರಾಮಣ್ಣ ಅವರಿಂದ ನೋಟು ಪಡೆಯುವ ಮೂಲಕ ಪ್ರಚಾರಕ್ಕೆ ಮುಂದಾಗಿದ್ದು,ಮನೆಮನೆಗಳಿಗೆ ತೆರಳಿ ಮತಯಾಚನೆ ಮಾಡಿದರು.ತಾವು ರೈತಸಂಘದೊಂದಿಗೆ ತಾಲ್ಲೂಕಿನಾದ್ಯಂತ ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದು, ಚುನಾವಣೆಯಲ್ಲಿ ಗೆದ್ದರೂ,ಸೋತರೂ ತಮ್ಮ ಹೋರಾಟದ ಹಾದಿಯನ್ನು ಬಿಡುವುದಿಲ್ಲ,ಎಲ್ಲೆ ರೈತರಿಗೆ ಅನ್ಯಾಯವಾದರೂ ಅವರ ಜೊತೆ ಕೈಜೋಡಿಸು ನ್ಯಾಯ ದೊರಕಿಸುವ ಕಾರ್ಯದಲ್ಲಿ ಮುನ್ನೆಡೆಯುತ್ತಾ ಸಾಗುವುದಾಗಿ ತಿಳಿಸಿದರು.ತಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಚುನಾವಣೆಯಲ್ಲಿ ಗೆಲ್ಲಲಿ,ಸೋಲಲ್ಲಿ ತನ್ನ ಹೋರಾಟವನ್ನು ಕೈಬಿಡದೆ ಮುಂದುವರಿಸಿಕೊಂಡು ರೈತರಿಗಾಗಿ ಅವಿರತ ದುಡಿಯುವುದಾಗಿ ಹೇಳಿದರು.
ಒಬ್ಬ ರೈತನಾಗಿ ರೈತರ ಸಮಸ್ಯೆಗಳನ್ನು ಹತ್ತಿರದಿಂದ ಕಂಡವನಾಗಿರುವ ನನಗೆ ರೈತರ ಕಷ್ಟದ ಅರಿವಿದ್ದು ಬಗೆಹರಿಸಲು ಶಕ್ತನಾಗಿದ್ದೇನೆ. ಸೇವಾ ಮನೋಭಾವದಿಂದ ಚನಾವಣೆಯಲ್ಲಿ ಸ್ಪರ್ಥಿಸುತ್ತಿರುವ ನನಗೆ ರೈತರು ಸೇರಿದಂತೆ ಎಲ್ಲಾ ವರ್ಗದವರ ಅತ್ಯಮೂಲ್ಯ ಮತ ಬೇಕಾಗಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ಚುನಾವಣೆಯೆಂದರೆ ಕೋಟಿಗಟ್ಟಲೆ ಹಣದ ಹೊಳೆ ಹರಿಸ ಬೇಕು ಎಂಬುದು ಎಲ್ಲರ ಮನೋಭಾವ ಆದರೆ ತಾವು ಹಣ,ಹೆಂಡ ಹಂಚುವುದಿಲ್ಲ .ನಮ್ಮ ಖರ್ಚು ಮೂರರಿಂದ ನಾಲ್ಕು ಲಕ್ಷ ರೂಗಳ ತಗುಲಲಿದ್ದು, ಆ ವೆಚ್ಚದ ಹಣವನ್ನು ಮತದಾರರು ಹಾಗೂ ರೈತಬಂಧುಗಳೇ ಭರಿಸಲಿದ್ದಾರೆ ಎಂದರು. ,ಚುನಾವಣಾ ಪ್ರಚಾರದಲ್ಲಿ ಓಟಿನೊಂದಿಗೆ ನೋಟು ಕೇಳುತ್ತಾ ಸಾಗುತ್ತಿರುವ ಅವರೊಂದಿಗೆ ಪತ್ನಿ ಚಂದ್ರಕಲಾ ಹಾಗೂ ನೂರಾರು ಸಂಖ್ಯೆಯ ರೈತ ಬಾಂಧವರು ಸಾತ್ ನೀಡುತ್ತಿದ್ದಾರೆ.
ಚಿ.ನಾ.ಹಳ್ಳಿ ಕ್ಷೇತ್ರದ ರೈತಸಂಘದ ಅಭ್ಯರ್ಥಿ ಕೆಂಕೆರೆ ಸತೀಶ್ ಹುಳಿಯಾರಿನ ಅಂಬೇಡ್ಕರ್ ಕಾಲೋನಿಯಲ್ಲಿ ಓಟು-ನೋಟು ಅಡಿಯಲ್ಲಿ ತರಕಾರಿ ರಾಮಣ್ಣ ಅವರಿಂದ ನೋಟು ಪಡೆಯುವ ಮೂಲಕ ಪ್ರಚಾರ ಆರಂಭಿಸಿದರು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ