ಹೋಬಳಿ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಗುರುವಾರ ಧ್ವಜಾರೋಹಣ.ಕಂಕಣಧಾರಣೆ,ಮಧುವಣಗಿತ್ತಿ ಸೇವಾ ಕಾರ್ಯದೊಂದಿಗೆ ಚಾಲನೆಗೊಂಡಿದೆ.
ತಾ.26ರ ಶುಕ್ರವಾರ ದೊಡ್ಡಬಿದರೆ ಕರಿಯಮ್ಮ,ಪೋಚಗಟ್ಟೆ ಕರಿಯಮ್ಮ,ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಕೂಡು ಭೇಟಿ ಇದ್ದು ,ಇದೇ ದಿನ ಸಂಜೆ ಬಾನ ನಡೆಯಲಿದೆ.ತಾ.27ರ ಶನಿವಾರ ಭೈರಾಪುರ,ಅವಳಗೆರೆ,ದೇವಹಳ್ಳಿ ಗ್ರಾಮಸ್ಥರಿಂದ ಚಿಕ್ಕಬಿದರೆ ಕೆರೆಯಲ್ಲಿ ಗಂಗಾಪೂಜೆ,ಕಳಸ ದೊಂದಿಗೆ ನಡೆಮುಡಿಯಲ್ಲಿ ಅಗ್ನಿಕುಂಡ ಪ್ರವೇಶಿಸಿ,ಘಟೆಪೂಜೆ ಹಾಗು ಮಹಾಮಂಗಳಾರತಿ,ತಾ.28ರ ಭಾನುವಾರ ಆರತಿ,ಹಾನಕಲಾಡಿ ಉತ್ಸವ,ತಾ.29ರ ಸೋಮವಾರ ಚಿಕ್ಕಬಿದರೆ ರಂಗನಾಥಸ್ವಾಮಿ ಸಮ್ಮುಖದಲ್ಲಿ ಅಮ್ಮನವರ ರಥೋತ್ಸವ ನಡೆದು ನಂತರ ಕಂಕಣ ವಿಸರ್ಜನೆ,ಓಕಳಿಸೇವೆ ಗಂಡುಗತ್ತರಿ ಸೇವೆಯೊಂದಿಗೆ ಕೊನೆಗೊಳ್ಳಲಿದೆ.ತಾ.30ರ ಮಂಗಳವಾರ ಉದ್ಭವ ಮೂರ್ತಿ ದುರ್ಗಮ್ಮ ದೇವಿಯವರಿಗೆ ಆರತಿಬಾನ ನಡೆಯಲಿದ್ದು ಸುತ್ತಮುತ್ತಿಲಿನ ಭಕ್ತಾಧಿಗಳು ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ