ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಹುಳಿಯಾರು : ಬಿ ವಿಭಾಗದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಇಂದು

ಹುಳಿಯಾರು ಹೋಬಳಿ ಮಟ್ಟದ ಬಿ ವಿಭಾಗದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ಇಂದು ಮತ್ತು ನಾಳೆ ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ನಡೆಯಲಿದೆ.ಇಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭದ ನಂತರ ಕ್ರೀಡೆಗಳಿಗೆ ಚಾಲನೆ ಸಿಗಲಿದೆ

ಶಿಶುಗಳ ಆರೋಗ್ಯಕ್ಕೆ ತಾಯಿಯ ಎದೆಹಾಲು ಸಂಜೀವಿನಿ

                         ನವಜಾತ ಶಿಶುಗಳ ಆರೋಗ್ಯಕ್ಕೆ ತಾಯಿಯ ಎದೆಹಾಲು ಸಂಜೀವಿನಿಯಾಗಿದ್ದು ಮಗುವಿಗೆ ಎರಡು ವರ್ಷ ತುಂಬುವವರೆಗೂ ಎದೆಹಾಲುಣಿಸಬೇಕೆಂದು ತಾಲ್ಲೂಕು ಅಂಗನವಾಡಿ ಕಾರ್ಯಕರ್ತಯೆರ ಸಂಘದ ಅಧ್ಯಕ್ಷೆ ಪೂರ್ಣಮ್ಮ ತಿಳಿಸಿದರು.ಹುಳಿಯಾರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎದೆಹಾಲು ಕುಡಿಸುವುದರಿಂದ ತಾಯಿ ಮಗುವಿನ ಬಾಂದವ್ಯ ವೃದ್ಧಿಯಾಗುತ್ತದೆಯಲ್ಲದೆ ಎದೆ ಕ್ಯಾನ್ಸರ್ ತಡೆಗಟ್ಟುವ ಜೊತೆಗೆ ತಾಯಿ ಮತ್ತು ಮಗು ಇಬ್ಬರೂ ಸಹ ಅನೇಕ ರೋಗಗಳಿಂದ ಮುಕ್ತರಾಗಬಹುದುದೆಂದರು.           ಗ್ರಾಮ ಪಂಚಾಯ್ತಿ ಸದಸ್ಯರಾದ ಬಿಂಧುರಮೇಶ್ ಮಾತನಾಡಿದರು.ಆರೋಗ್ಯ ಇಲಾಖೆಯ ದೇವರಾಜು ,ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯಕರ್ತೆ ಜಯಲಕ್ಷ್ಮಮ್ಮ ,ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಹಾಲಕ್ಷ್ಮಿ , ನಾಗವೇಣಿ ,ಆಶಾ ಕಾರ್ಯಕರ್ತೆ ಆಭಿದಾಬೀ ಇನ್ನಿತರರು ಭಾಗವಹಿಸಿದ್ದರು

ಮಗುವಿಗೆ ಸ್ತನ್ಯಪಾನ ಶ್ರೇಷ್ಠ

ತಾಯಂದಿರು ಎದೆ ಹಾಲು ಕುಡಿಸುವುದರಿಂದ ಮಗುವಿಗೆ ಉತ್ತಮ ಆರೋಗ್ಯದ ಜೋತೆಗೆ ತಾಯಿಯ ಬೊಜ್ಜು ಕಡಿಮೆಯಾಗಿ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೊಯ್ಸಳಕಟ್ಟೆಯ ವೈದ್ಯಾಧಿಕಾರಿ ರಜನೀಶ್ ಬಾಬು ತಿಳಿಸಿದರು. ಹೊಯ್ಸಳಕಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯiಕ್ರಮವನ್ನು ತಾಪಂ ಸದಸ್ಸೆ ಕವಿತಾಪ್ರಕಾಶ್ ಉದ್ಘಾಟಿಸಿದರು.ಪ್ರಾಂಶುಪಾಲೆ ಉಮಾ,ಗ್ರಾಪಂ ಸದಸ್ಯ ಗಿರೀಶ್,ಮುಖ್ಯಶಿಕ್ಷಕ ಮೈಲಾರಪ್ಪ ,ಮಂಜುಳ,ಎಪಿಎಂಸಿ ಸದಸ್ಯ ರುದ್ರೇಶ್ ಇದ್ದಾರೆ. ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ನಡೆದ ವಿಶ್ವ ಸ್ಥನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹುಟ್ಟಿದ ಮೊದಲ ಮೂರು ದಿನ ತಾಯಂದಿರು ಮಗುವಿಗೆ ಎದೆ ಹಾಲು ಕುಡಿಸುವುದು ಅತ್ಯಾವಶ್ಯಕವಾಗಿದ್ದು ಮೂಢನಂಬಿಕೆಯಿಂದ ಕೆಲವು ಗ್ರಾಮೀಣ ತಾಯಂದಿರು ಹೆರಿಗೆ ಆದ ಮಗುವಿಗೆ ತಾಯಿ ಹಾಲು ಬಿಟ್ಟು ಬೇರೆ ಹಾಲು ಕುಡಿಸುವುದು ವಾಡಿಕೆಯಾಗಿದ್ದು ಇದರಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು. ಫಲಾನುಭವಿಗಳಿಗೆ ಭಾಗ್ಯಲಕ್ಷಿ ಬಾಂಡ್ ವಿತರಣೆ          ಅಂಗನವಾಡಿ ಮೇಲ್ವಿಚಾರಕಿ ಲಕ್ಷೀಮೂರ್ತಿ ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಭಾಗ್ಯಲಕ್ಷಿ ಬಾಂಡ್ ವಿತರಿಸಿದರು.ತಾಪಂ ಸದಸ್ಯ...

ಇಂದು ಜಾನಪದ ನೃತ್ಯ ಸಂಜೆ

ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ಇಂದು (ಶನಿವಾರ) ಸಂಜೆ ಆರು ಗಂಟೆಗೆ ಎಂಟಿಎಸ್ ನಿಂದ ಗ್ರಾಮೀಣ ಸೊಗಡಿನ ಜಾನಪದ ನೃತ್ಯ ಸಂಜೆ ಆಯೋಜಿಸಲಾಗಿದೆ.ಹರಿಕಥಾ ವಿದ್ವಾನ್ ಡಾ.ಲಕ್ಷ್ಮಣ ದಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು ಸಾಹಿತಿ ಪ್ರೋ ಬಿಳಿಗೆರೆ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.ನಾಗರಾಜ್ ಪಿ ಕುಲಕರ್ಣಿ,ವಿಶ್ವನಾಥ್, ಬೀರಪ್ಪನವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಪ್ಪೂರು ವಲಯದ ಜ್ಞಾನ ವಿಕಾಸ ಕೇಂದ್ರದವರು ಹಳ್ಳಿ ಜೀವನ ಬಿಂಬಿಸುವ ಹಾಸ್ಯ ಭರಿತ ವಿಶೇಷ ರೂಪಕ ನಡೆಸಿಕೊಡಲಿದ್ದಾರೆ.ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಆಯೋಜಕರಾದ ಕಿರಣ್ ಕುಮಾರ್ ಕೋರಿದ್ದಾರೆ.

ರೈತರ ಬಗ್ಗೆ ಪ್ರೋ .ಬಿಳಿಗೆರೆ ಕೃಷ್ಣಮೂರ್ತಿಯವರ ಅನಿಸಿಕೆ

ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಂದು ನಡೆದ ಸಾಂಸ್ಕೃತಿಕ , ಕ್ರೀಡಾ,ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭದಲ್ಲಿ ಪ್ರೋ .ಬಿಳಿಗೆರೆ ಕೃಷ್ಣಮೂರ್ತಿ ದುಡಿದು ತಿನ್ನುವ ಸಮುದಾಯದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಹೀಗೆ

ರೈತರ ಸಮಸ್ಯೆ ಬಗೆಹರಿಸಲು ರಾಷ್ಟ್ರೀಯ ಕೃಷಿ ನೀತಿ ಜಾರಿಯಾಗಬೇಕು

ರೈತರ ಬೆಳೆಗೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು: ಚಂಪಾ -------------------------------                   ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಅನ್ನದಾತ ದೇಶದ ಬೆನ್ನೆಲುಬು ಎನ್ನಲಾಗುವ ಈ ನಾಡಿನಲ್ಲಿ ರೈತ ಇಂದು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬರುತ್ತಿರುವುದು ದುರಾದೃಷ್ಟ .''ರೈತ ದೇಶದ ಬೆನ್ನೆಲುಬು ಎಂಬ ಮಾತು ಸತ್ಯವಾಗಬೇಕಾದಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಆಗಷ್ಟೆ ರೈತರ ಬದುಕು ಹಸನಾಗಲು ಸಾಧ್ಯ'' ಎಂದು ಕವಿ,ನಾಟಕಕರಾದ ಪ್ರೋ.ಚಂದ್ರಶೇಖರ ಪಾಟೀಲ್ ಹೇಳಿದರು.  ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಂದುನಡೆದ ಸಾಂಸ್ಕೃತಿಕ , ಕ್ರೀಡಾ, ಎನ್.ಎಸ್.ಎಸ್  ಹಾಗೂ  ಯುವ ರೆಡ್ ಕ್ರಾಸ್ ಚಟುವಟಿಕೆಗಳ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯಿಲ್ಲದೆ, ಮಾಡಿರುವ ಸಾಲಗಳನ್ನು ಸಂದಾಯ ಮಾಡಲಾರದೆ ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿರುವುದು ದುಃಖದ ವಿಷಯ. ಬಿತ್ತನೆ ನಂತರ ಬೆಳೆ ಬರಬೇಕು,ಬೆಳೆದಿದ್ದು ಮಾರಾಟವಾಗಬೇಕು,ದುಡಿತಕ್ಕೆ ತಕ್ಕ ಪ್ರತಿಫಲ ದೊರೆತಾಗ ಮಾತ್ರ ಕೃಷಿಯನ್ನು ನಂಬಿ ಬದುಕಬಹುದು.ಇಂದು ಬೆಂಕಿಪೊಟ್ಟಣಕ್ಕೂ ಬೆಲೆ ನಿಗದಿಯಾಗಿದ್ದರೆ ರೈ...

ಇಂದು (೬ ರಂದು) ಎನ್.ಎಸ್.ಎಸ್/ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಹುಳಿಯಾರು ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ , ಕ್ರೀಡಾ,ಎನ್.ಎಸ್.ಎಸ್ ಹಾಗೂ ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಗುರುವಾರದಂದು ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ. ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಆದ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು ಪ್ರಸಿದ್ಧ ಕವಿಗಳು, ನಾಟಕಕಾರರು, ಕನ್ನಡ ಹೋರಾಟಗಾರರು ಆದ ಪ್ರೊ.ಚಂದ್ರಶೇಖರ ಪಾಟೀಲ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ .ವಿಮರ್ಶಕರು, ಸಂಸ್ಕೃತಿ ಚಿಂತಕರಾದ ಡಾ.ವಡ್ಡಗೆರೆ ನಾಗರಾಜಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಾಂಶುಪಾಲರಾದ ಪ್ರೊ.ಬಿ.ಆರ್.ಕೃಷ್ಣಮೂರ್ತಿ ಪ್ರಸ್ತಾವಿಕ ನುಡಿಗಳಾಡಲಿದ್ದಾರೆ. ವಿದ್ಯಾರ್ಥಿಗಳು,ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಪ್ರೋ.ಬಿಳಿಗೆರೆ ಕೃಷ್ಣಮೂರ್ತಿ ಕೋರಿದ್ದಾರೆ.