ನವಜಾತ ಶಿಶುಗಳ ಆರೋಗ್ಯಕ್ಕೆ ತಾಯಿಯ ಎದೆಹಾಲು ಸಂಜೀವಿನಿಯಾಗಿದ್ದು ಮಗುವಿಗೆ ಎರಡು ವರ್ಷ ತುಂಬುವವರೆಗೂ ಎದೆಹಾಲುಣಿಸಬೇಕೆಂದು ತಾಲ್ಲೂಕು ಅಂಗನವಾಡಿ ಕಾರ್ಯಕರ್ತಯೆರ ಸಂಘದ ಅಧ್ಯಕ್ಷೆ ಪೂರ್ಣಮ್ಮ ತಿಳಿಸಿದರು.ಹುಳಿಯಾರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ,ಶಿಶು ಅಭಿವೃದ್ಧಿ ಯೋಜನೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಎದೆಹಾಲು ಕುಡಿಸುವುದರಿಂದ ತಾಯಿ ಮಗುವಿನ ಬಾಂದವ್ಯ ವೃದ್ಧಿಯಾಗುತ್ತದೆಯಲ್ಲದೆ ಎದೆ ಕ್ಯಾನ್ಸರ್ ತಡೆಗಟ್ಟುವ ಜೊತೆಗೆ ತಾಯಿ ಮತ್ತು ಮಗು ಇಬ್ಬರೂ ಸಹ ಅನೇಕ ರೋಗಗಳಿಂದ ಮುಕ್ತರಾಗಬಹುದುದೆಂದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಬಿಂಧುರಮೇಶ್ ಮಾತನಾಡಿದರು.ಆರೋಗ್ಯ ಇಲಾಖೆಯ ದೇವರಾಜು ,ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯಕರ್ತೆ ಜಯಲಕ್ಷ್ಮಮ್ಮ ,ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಹಾಲಕ್ಷ್ಮಿ , ನಾಗವೇಣಿ ,ಆಶಾ ಕಾರ್ಯಕರ್ತೆ ಆಭಿದಾಬೀ ಇನ್ನಿತರರು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ