ಅವಳಿ ಮಕ್ಕಳಿಗಾಗಿ ದಿನಾಚರಣೆ
ಅವಳಿ ಮಕ್ಕಳೂ ಅಪರೂಪವೂ ಅಲ್ಲ ಹಾಗಂತ ಸಾಮಾನ್ಯವು ಅಲ್ಲ.ಆದರೆ ಒಂದೇ ಶಾಲೆಯಲ್ಲಿ ಮಾತ್ರ ಒಟ್ಟು ಏಳು ಅವಳಿ ಮಕ್ಕಳು ವ್ಯಾಸಂಗ ಮಾಡುತ್ತಿರುವುದು ಅಪರೂಪ.ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆ ಇಂತಹದೊಂದು ಅಪರೂಪದ ವಿಚಾರಕ್ಕೆ ಭಾಜನವಾಗಿದೆ.
ಈ ಶಾಲೆಯಲ್ಲಿರುವ ಏಳು ಅವಳಿಗಳಲ್ಲಿ ಮೂರು ಜೋಡಿ ಗಂಡು ,ಎರಡು ಜೋಡಿ ಹೆಣ್ಣು ಹಾಗೂ ಇನ್ನೇರಡು ಜೋಡಿ ಹುಡುಗ ಹುಡುಗಿಯರಿದ್ದಾರೆ.ಈ ಮಕ್ಕಳೆಲ್ಲಾ ಒಂದೆರೀತಿ ಕಂಡುಬರುವುದರಿಂದ ಕೆಲವೊಮ್ಮೆ ಶಿಕ್ಷಕರು ಹಾಗೂ ಗೆಳಯರು ಕೂಡ ಬೆಸ್ತು ಬಿದ್ದ ಘಟನೆಗಳಿವೆ.
![]() |
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಅವಳಿ ಮಕ್ಕಳ ದಿನಾಚರಣೆಯಲ್ಲಿ ಪೋಷಕರೊಂದಿಗೆ ಅವಳಿ ಮಕ್ಕಳೂ ಭಾಗವಹಿಸಿರುವುದು.ಕವಿತಾಕಿರಣ್ , ಪ್ರಾಂಶುಪಾಲ ಟಿ.ಎಸ್.ರವಿ ಇದ್ದಾರೆ. |
ವಿದೇಶದಲ್ಲಿ ಆಗಸ್ಟ್ ಎಂಟರಂದು ಅವಳಿ ಜವಳಿಗಳ ದಿನಾಚರಣೆ ಮಾಡುವ ರೀತಿ ಈ ಶಾಲೆಯಲ್ಲೂ ಅವಳಿ ಮಕ್ಕಳ ದಿನಾಚರಣೆಯನ್ನು ಆ ಮಕ್ಕಳೊಂದಿಗೆ ಹಾಗೂ ಮಕ್ಕಳ ಪೋಷಕರೊಂದಿಗೆ ಆಚರಿಸಲಾಯಿತು.ಒಂದೇ ರೀತಿಯ ಉಡುಗೆ ತೊಟ್ಟುಬಂದಿದ್ದ ಅವಳಿ ಮಕ್ಕಳಿಂದ ಕೇಕ್ ಕತ್ತರಿಸಿ ಹಂಚಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾ ಮತ್ತು ತಂಡ ಪ್ರಾರ್ಥನೆ ಮಾಡಿ ಕು.ಅನ್ನಪೂರ್ಣ ಸ್ವಾಗತಿಸಿದರೆ ಅರುಣ್ ತರುಣ್ ನಿರೂಪಿಸಿದರು.ಅರ್ಬಾಜ್ ಕಾರ್ತಿಕ್ ಪರಿಚಯಿಸಿದರೆ ಮಾ.ಸೈಯದ್ ಝೈನ್ ವಂದಿಸಿದರು.ಕಾರ್ಯದರ್ಶಿ ಕವಿತಾಕಿರಣ್ ಕುಮಾರ್,ಪ್ರಾಂಶುಪಾಲ ಟಿ.ಎಸ್.ರವಿ ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.
------------------------------
ಈ ಮಕ್ಕಳನ್ನು ಗುರುತು ಹಿಡಿಯುವುದು ಕಷ್ಟ.ಅದರ ಅವರ ನಡುವಳಿಕೆಗಳನ್ನು ಹತ್ತಿರದಿದ ಕಂಡಿರುವ ನನಗೆ ಪತ್ತೆ ಮಾಡಲು ಕಷ್ಟವಾಗುವುದಿಲ್ಲ.ಮಕ್ಕಳು ಒಂದೇ ರೀತಿ ಕಂಡರು ಸಹ ಅವರ ಗುಣಸ್ವಾಭಾವ ಮಾತ್ರ ಭಿನ್ನವಾಗಿರುತ್ತೆ.ಒಂದು ಮಗು ಜೋರಾಗಿದ್ರೆ ಮತ್ತೊಂದು ಮಗು ಶಾಂತ ಸ್ವಾಭಾವದಿಂದ ಕೂಡಿರುತ್ತೆ.ಈ ರೀತಿಯ ಭಿನ್ನತೆಯಿಂದಷ್ಟೆ ಅವರುಗಳನ್ನು ಗುರುತು ಹಿಡಿಯಲು ಸಾಧ್ಯ: ಕವಿತಕಿರಣ್ ,ಸಂಸ್ಥೆಯ ಕಾರ್ಯದರ್ಶಿ
--------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ