![]() |
ಕ್ರೀಡಾಕೂಟದಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳೊಂದಿಗೆ ಸಾಧನೆಮಾಡಿದ ಮಕ್ಕಳೊಂದಿಗೆ ಮುಖ್ಯಶಿಕ್ಷಕ ಮೈಲಾರಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು. |
ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಎರಡು ದಿನಗಳ ಕಾಲ ಹುಳಿಯಾರು ಹೋಬಳಿ ಪ್ರೌಢಶಾಲೆಗಳ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ಜರುಗಿತು.ಗುಂಪುಕ್ರೀಡೆಗಳಲ್ಲಿ ಬೋರನಕಣಿವೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಗುಂಪುಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದು ಬಾಲಕ ವಿಭಾಗದಲ್ಲಿ ಥ್ರೋಬಾಲ್.ಬಾಲ್ ಬ್ಯಾಡ್ಮಿಂಟನ್ ಮತ್ತು ಷಟಲ್ ಬ್ಯಾಡ್ಮಿಂಟನ್‍ನಲ್ಲಿ ಹಾಗೂ ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್.ಬಾಲ್ ಬ್ಯಾಡ್ಮಿಂಟನ್ ನಲ್ಲಿ ಪ್ರಥಮ ಸ್ಥಾನಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಸಾಧನೆಮಾಡಿದ ಮಕ್ಕಳನ್ನು ಮುಖ್ಯಶಿಕ್ಷಕ ಮೈಲಾರಪ್ಪ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ