ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಆಗಸ್ಟ್ 20ರಂದು ಕಡ್ಡಾಯವಾಗಿ ವಿಶೇಷ ಗ್ರಾಮ ಸಭೆ ನಡೆಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಸೂಚನೆ ಕಳುಹಿಸಲಾಗಿದ್ದರೂ ಹುಳಿಯಾರು ಪಂಚಾಯ್ತಿಯಲ್ಲಿ ಮಾತ್ರ ಇದಕ್ಕೆ ವಿನಾಯತಿ ಎಂಬಂತೆ ಸದಸ್ಯರುಗಳನ್ನು ಮೂರುದಿನಗಳ ತರಬೇತಿಗಾಗಿ ಕಳುಹಿಸಿಕೊಡುತ್ತಿರುವುದು ವಿಪರ್ಯಾಸವಾಗಿದೆ.
ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಹೊಸ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದ ಬಳಿಕ ನಡೆಸಲಾಗುವ ಮೊದಲ ಗ್ರಾಮ ಸಭೆ ಇದಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಗ್ರಾಮ ಪಂಚಾಯಿತಿ ಪಿಡಿಒಗಳು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂಬ ನಿರ್ದೇಶನ ಕೂಡ ಕೊಡಲಾಗಿತ್ತು.
ಆದರೆ ಆ.20ರಂದು ವಿಶೇಷ ಗ್ರಾಮ ಸಭೆ ಕಡ್ಡಾಯವಾಗಿ ನಡೆಸಬೇಕಿದ್ದರ ಬಗ್ಗೆ ಹುಳಿಯಾರು ಗ್ರಾಪನಲ್ಲಿ ಈ ಬಗ್ಗೆ ಸಾರ್ವಜನಿಕರಿಗಾಗಲಿ ಸದಸ್ಯಗಳಿಗಾಗಲಿ ಯಾವುದೇ ಮಾಹಿತಿಯಿಲ್ಲದಿರುವುದು ದುರಂತ.
ತರಬೇತಿಯೂ ಕಡ್ಡಾಯ: ಈ ಬಗ್ಗೆ ಹುಳಿಯಾರು ಪ್ರಭಾರಿ ಪಿಡಿಓ ಅವನ್ನು ಪತ್ರಿಕೆ ಸಂಪರ್ಕಿಸಿದಾಗ ಹೊಸದಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ತಾಲ್ಲೂಕ್ ಪಂಚಾಯ್ತಿ ಸಭಾಂಗಣದಲ್ಲಿ ಇದೇ ದಿನಾಂಕದಂದು "ಗ್ರಾಮ ಪಂಚಾಯ್ತಿ ಸದಸ್ಯರ ಸಾಮಾರ್ಥ್ಯಾಭಿವೃದ್ಧಿ ತರಬೇತಿ"ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಅದೂ ಕೂಡ ಕಡ್ಡಾಯವಾಗಿದೆ.ತಾಲ್ಲೂಕ್ ಕಾರ್ಯನಿರ್ವಾಹಾಹಕ ಅಧಿಕಾರಿಗಳ ಸೂಚನೆಯಂತೆ ಎಲ್ಲಾ ಚುನಾಯಿತ ಸದಸ್ಯರನ್ನು ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಕಡ್ಡಾಯಯವಾಗಿ ಪಾಲ್ಗೊಳ್ಳುವಂತೆ ಸೂಚಿಸಿರುವುದಾಗಿ ತಿಳಿಸಿದರು.
ಒಟ್ಟಾರೆ ಇಲ್ಲಿನ ಗ್ರಾಪಂಯಲ್ಲಿ ಯಾವುದೇ ಸೂಚನೆಗಳಿಗೂ ,ಸರ್ಕಾರಿ ಆದೇಶಗಳಿಗೂ ಬೆಲೆಯಿಲ್ಲವೆಂದು ಸಾರ್ವಜನಿಕರು ಆಕ್ಷೇಪಿಸುವಂತಾಗಿದೆ.
---------------------------
ನಾನು ಆ.೧೦ ರಂದು ಪ್ರಭಾರಿ ಪಿಡಿಓ ಆಗಿ ಅಧಿಕಾರ ವಹಿಸಿಕೊಂಡಿದ್ದು ಅಂದಿನಿಂದ ಮೂರು ದಿನಗಳ ಕಾಲ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಲು ಸಂಘ ಸಂಸ್ಥೆಗಳ ಸಭೆ ಕರೆಯುವುದರಲ್ಲೆ ಕಾಲ ತಗುಲಿದೆ.ಅಲ್ಲದೆ ಗ್ರಾಮ ಸಭೆ ನಡೆಸುವುದಕ್ಕೂ ಮುಂಚಿತವಾಗಿ ವಾರ್ಡ್ ಸಭೆ ನಡೆಸಬೇಕಿದ್ದು ಅದಕ್ಕೆ ಕಾಲಾವಕಾಶ ದೊರೆಯದಿದ್ದರಿಂದ ಹಾಗೂ ಇಓ ರವರನ್ನು ಸಂಪರ್ಕಿಸಿದಾಗ ಕಡ್ಡಾಯವಾಗಿ ತರಬೇತಿಗೆ ಸದಸ್ಯರನ್ನು ಕಳುಹಿಸಲೇಬೇಕೆಂದು ಸೂಚಿಸಿದ್ದರಿಂದ ಇಂದಿನ ಗ್ರಾಮ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ :ಪಿಡಿಓ ,ಅಡವೀಶ್ ಕುಮಾರ್
------------------------------------------------------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ