ವಿಶ್ವದಲ್ಲಿಯೇ ಹಿಂದೂ ಧರ್ಮ ಶ್ರೇಷ್ಠವಾಗಿದ್ದು ಶ್ರೇಷ್ಠ ವಿಚಾರಧಾರೆ ಹೊಂದಿರುವ ಈ ಧರ್ಮದ ಮೇಲೆ ಹಿಂದಿನಿಂದಲೂ ಅತಿಕ್ರಮಣಗಳು ನಡೆಯುತ್ತಿದೆ. ಭಾರತದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಯುವ ಸಮುದಾಯ ಜಾಗೃತರಾಗಿರಬೇಕೆಂದು ಆರ್ ಎಸ್ ಎಸ್ ನ ತುಮಕೂರು ವಿಭಾಗದ ಕಾರ್ಯವಾಹ ಬಲರಾಮ್ ಕರೆ ನೀಡಿದರು
. ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪಟ್ಟಣದ ಬಶಂಕರಿ ದೇವಾಲಯದಲ್ಲಿ ಗುರುಪೂಜಾ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ 95 ವರ್ಷಗಳಿಂದಲೂ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಂಡು ಯುವ ಸಮುದಾಯದಲ್ಲಿ ದೇಶಭಕ್ತಿ ತುಂಬುತ್ತಾ ಸಮಾಜದ ಏಳಿಗೆಗೆ ಕಾರ್ಯತತ್ಪರವಾಗಿದ್ದು ಇಂತಹ ಸಂಘಟನೆಯಲ್ಲಿ ಎಲ್ಲರೂ ತೊಡಗಿಕೊಂಡು ಬಲಗೊಳಿಸಲು ಮುಂದಾಗಬೇಕೆಂದರು.
![]() |
ಗುರುಪೂಜಾ ಕಾರ್ಯಕ್ರಮದಲ್ಲಿ ಬಲರಾಮ್ ,ಬಿ.ಕೆ.ಶಶಿಭೂಷಣ್ |
ಗುರು ಶಿಷ್ಯ ಪರಂಪರೆ ಹಿಂದಿನಿಂದಲೂ ಸಮಾಜದಲ್ಲಿ ಹಾಸುಹೊಕ್ಕಾಗಿ ಬಂದಿದೆ ಎಂದ ಅವರು ಗುರುವಿನ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಮಾತ್ರ ಏಳಿಗೆ ಹೊಂದಲು ಸಾಧ್ಯವೆಂದರು.
ಅಧ್ಯಕ್ಷತೆವಹಿಸಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಕೆ.ಶಶಿಭೂಷಣ್ ಮಾತನಾಡಿ ಗುರುವಿನ ಹಾಗೂ ಗುರುಪೂಜೆಯ ಮಹತ್ವದ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಧ್ವಜಾವಂದನೆ ಸ್ವೀಕರಿಸಿ, ಪುಷ್ಪರ್ಚನೆ ಮಾಡಿದರು.ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ದಾಸಪ್ಪ.ಹು.ಲ.ವೆಂಕಟೇಶ್, ತಮ್ಮಯ್ಯ,ಅಜಿತ್,ಶ್ರೇಯಸ್ ಮುಂತಾದವರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ