ಮಕ್ಕಳು ಆತ್ಮವಿಶ್ವಾಸ ಹಾಗೂ ದೃಢವಿಶ್ವಾಸ ಬೆಳೆಸಿಕೊಂಡು ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಮೈಗೂಡಿಸಿಕೊಳ್ಳಬೇಕೆಂದು ತಿಪಟೂರು ಏಆರ್ಟಿಓ ಮಂಜುನಾಥ್ ಪ್ರಸಾದ್ ಸಲಹೆ ನೀಡಿದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ನಡೆದ ವಿದ್ಯಾರ್ಥಿ ಪ್ರತಿನಿಧಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಸ್ಪರ್ಧೆಗಳಲ್ಲಿ ಆಸಕ್ತಿ ವಹಿಸಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಉತ್ತಮ ಕೌಶಲ್ಯ ಪ್ರದರ್ಶಿಸುವುದನ್ನು ರೂಢಿಸಿಕೊಳ್ಳುವಂತೆ .ಕಲೆ,ಸಂಗೀತ,ಸಾಹಿತ್ಯ ,ಕ್ರೀಡಾಚಟುವಟಿಕೆಗಳಂಥ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕುವಂತೆ ಹಾಗೂ ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಒಳ್ಳೆಯ ಹೆಸರುಗಳಿಸಿ ಸಮಾಜಮುಖಿಯಾಗುವಂತೆ ತಿಳಿಸಿದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವಿತಾಕಿರಣ್ ಕುಮಾರ್ ಮಾತನಾಡಿ ಸ್ಪರ್ಧಾತ್ಮಕ ಯುಗದಲ್ಲಿ ನಾಯಕತ್ವದ ಗುಣ ಅಗತ್ಯವಿದ್ದು ಆರನೇ ತರಗತಿಯಿಂದಲೆ ಮಕ್ಕಳಿಗೆ ಲೀಡರ್‌ಶೀಪ್‌ನ ಅವಕಾಶ ಕಲ್ಪಿಸುವ ಮೂಲಕ ಅವರಲ್ಲಿ ಶಿಸ್ತು ಹಾಗೂ ಬುದ್ದಿವಂತಿಕೆ ಬೆಳವಣಿಗೆಗೆ ಪೂರಕವಾಗುವಂತೆ ಶಿಕ್ಷಕರಿಂದ ಮಾರ್ಗದರ್ಶನ ಮಾಡಿಸಲಾಗುತ್ತದೆ . ಇದರಿಂದ ದೇಶಕ್ಕೆ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತಾರೆ ಎಂಬ ವಿಶ್ವಾಸವಿದೆ .ಪ್ರತಿಯೊಂದು ತರಗತಿಯ ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಯಲ್ಲಿ ನಡೆಯುವ ವಿವಿಧ ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಲು ಹೆಚ್ಚಿನ ಜವಬ್ಧಾರಿಯನ್ನು ತರಗತಿಯ ಶಿಕ್ಷಕರು ಮತ್ತು ಶಿಕ್ಷಕಿಯರು ವಹಿಸಬೇಕೆಂದು ತಿಳಿಸಿದರು.
ವಿದ್ಯಾರ್ಥಿ ಪ್ರತಿನಿಧಿಗಳು ಬಾವುಟ ಹಿಡಿದು ಬ್ಯಾಂಡ್ ವಾದನಕ್ಕೆ ಹೆಜ್ಜೆಹಾಕಿ ತಮ್ಮ ಖಾತೆಗಳ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ