ಭಾರತದ ೬೯ನೇ ಸ್ವಾತಂತ್ರ್ಯ ದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು ಪಟ್ಟಣದ ಅಂಗಡಿಗಳಲ್ಲಿ ತ್ರಿವರ್ಣ ಧ್ವಜ ,ಬ್ಯಾಡ್ಜ್, ಬ್ಯಾಂಡ್,ಟೋಪಿ ,ತ್ರಿವರ್ಣ ಟೇಪ್ ಗಳ ಮಾರಾಟ ಭರಾಟೆಯಿಂದ ನಡೆಯುತ್ತಿದೆ.ಎಲ್ಲಾ ಅಂಗಡಿಗಳಲ್ಲೂ ಬಾವುಟ ಕೊಳ್ಳಲು ಶಾಲಾ ಮಕ್ಕಳು ಮುಗಿಬಿದಿದ್ದರೆ ಬೈಕ್ ,ಕಾರುಗಳಿಗೆ ಆಟೋ ರಿಕ್ಷಾ ,ವ್ಯಾನ್ ಗಳಿಗೂ ಬಾವುಟ ಕಟ್ಟಲು ಮುಂದಾದ ಪರಿಣಾಮ ಬಾವುಟಗಳಿಗೆ ಬೇಡಿಕೆಯಿತ್ತು. ಪಟ್ಟಣದ ಎಲ್ಲಾ ಶಾಲಾಕಾಲೇಜುಗಳು,ಸರ್ಕಾರಿ ಕಛೇರಿಗಳು,ಸಂಘ ಸಂಸ್ಥೆಗಳು ಸಹ ಆವರಣವನ್ನು ,ಧ್ವಜಸ್ಥಂಭವನ್ನು ಸ್ವಚ್ಛಗೊಳಿಸಿದ್ದು ತಳಿರು ತೋರಣದ ಸಿಂಗಾರಕ್ಕೆ ಮುಂದಾಗಿದ್ದಾರೆ
ನಾಳಿನ ಕಾರ್ಯಕ್ರಮಕ್ಕೆ ಸಂಘ ಸಂಸ್ಥೆಗಳು ಸೈಕಲ್ ರೇಸ್,ದೇಶಭಕ್ತಿ ಗೀತೆ ಸ್ಪರ್ಧೆ,ನೃತ್ಯ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.ಪಟ್ಟಣದ ಎಂಪಿಎಸ್ ಶಾಲಾ ವರಣದಲ್ಲಿ ನಡೆಯುವ ಸಾರ್ವಜನಿಕ ಆಚರಣೆಯಲ್ಲಿ ಎಲ್ಲಾ ಶಾಲೆಯ ಮಕ್ಕಳು,ಗ್ರಾಪಂ ಸದಸ್ಯರುಗಳು,ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳೂ ಸಿಬ್ಬಂದಿ ವರ್ಗ,ಕನ್ನಡಪರ ಸಂಘಟನೆಗಳು ಭಾಗವಹಿಸುತ್ತಿದ್ದು ಮುಂಜಾನೆ ಎಂಟುಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.
ನಾಡಕಛೇರಿಯ ಉಪತಹಸಿಲ್ದಾರ್ ಸತ್ಯನಾರಾಯಣ್ ಧ್ವಜಾರೋಹಣ ನೆರವೇರಿಸಲಿದ್ದಾರೆ.ಗ್ರಾಪಂ ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆಯಲ್ಲಿ ಶಾಸಕರು, ಜನಪ್ರತಿ ನಿಧಿಗಳು,ವಿವಿಧ ಇಲಾಖೆಯ ಅಧಿಕಾರಿಗಳ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಎಲ್ಲಾ ಶಾಲಾಮಕ್ಕಳಿಂದ ಧ್ವಜವಂದನೆ,ರೈತಗೀತೆ,ವಂದೇಮಾತರಂ,ಧ್ವಜಾರೋಹಣ, ರಾಷ್ಟ್ರಗೀತೆ ಹಾಡುವುದು ಹಾಗೂ ಪಥಸಂಚಲನೆ ನಡೆಯಲಿದೆ.ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ