
ಅಥ್ಲೆಟಿಕ್ಸ್ ವಿಭಾಗ : ೧೫೦೦ ಮೀ ಓಟದಲ್ಲಿ ಪೃಥ್ವಿರಾಜ್ ,೮೦೦ಮೀ ಓಟದ ಸ್ಪರ್ಧೆಯಲ್ಲಿ ಕೆ.ಯು.ಸುಹಾಸ್, ೧೦೦ ಮೀ ಓಟದಲ್ಲಿ ಎನ್.ಪಿ.ಸಿದ್ದೇಶ್ ಪ್ರಥಮ ಸ್ಥಾನ ಪಡೆದರೆ ಶೃತಿಪಾಲ್ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಉದ್ದಜಿಗಿತದಲ್ಲಿ ದೀಪಕ್,ಗುಂಡುಎಸೆತದಲ್ಲಿ ಪ್ರಮೋದ್,೮೦೦ಮೀ ಓಟದಲ್ಲಿ ವಿಜಯ್,೫೦೦೦ ಮೀ ನಡಿಗೆಯಲ್ಲಿ ದೀಪಕ್,ಡಿಸ್ಕಸ್ ಥ್ರೋ ನಲ್ಲಿ ಮೋನಿಕ ದ್ವಿತೀಯ ಸ್ಥಾನಕ್ಕೆ ಭಾಜನರಾಗಿದ್ದಾರೆ.
ಗುಂಪು ಕ್ರೀಡೆ : ಬಾಲಕರ ತಂಡ ೪*೧೦೦ ರಿಲೇ, ಕೊಕ್ಕೋ,ಥ್ರೋ ಬಾಲ್ ನಲ್ಲಿ ಹಾಗೂ ಬಾಲಕಿಯರ ತಂಡ ಷಟಲ್ ಬ್ಯಾಡ್ಮಿಂಟನ್ ಹಾಗೂ ವಾಲಿ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಜೇತ ಮಕ್ಕಳನ್ನು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ರಾಮಸ್ವಾಮಿ,ಶೇಖರ್ ಅವರುಗಳನ್ನು ಶಾಲಾ ಮಂಡಳಿ ಅಧ್ಯಕ್ಷ ಲಕ್ಷ್ಮಿಕಾಂತ್ ಶೆಟ್ರು,ಕಾರ್ಯದರ್ಶಿ ರಾಮನಾಥ್ ಶೆಟ್ರು,ಮುಖ್ಯ ಶಿಕ್ಷಕ ಮಹೇಶ್ ,ಮೇಲ್ವಿಚಾರಕ ಶ್ರೀನಿವಾಸ್ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ