![]() |
ಹುಳಿಯಾರು ಸಮೀಪದ ವಳಗೆರೆಹಳ್ಳಿಯ ನೀರಿನ ಸಮಸ್ಯೆ ಪರಿಹರಿಸಲು ಮುತುವರ್ಜಿ ವಹಿಸಿ ಬೋರ್ ವೆಲ್ ಗೆ ಚಾಲನೆ ನೀಡಿದ ಶಾಸಕ ಸಿ.ಬಿ.ಸುರೇಶ್ ಬಾಬು |
ಹುಳಿಯಾರು ಪಟ್ಟಣಕ್ಕೆ ಹೊಂದಿಕೊಂಡಂತೆ ವಳಗೆರೆಹಳ್ಳಿಯಿದ್ದು ಗ್ರಾಮದಲ್ಲಿ ಬಳಸಲ್ಪಡುತ್ತಿದ್ದ ಏಕೈಕ ಕೊಳವೆ ಬಾವಿ ದುರ್ವಾಸನೆಯಿಂದ ಕೂಡಿದ್ದು ಶುದ್ದ ನೀರಿಗೆ ಕಳೆದೊಂದು ವರ್ಷದಿಂದ ಪರದಾಡುವಂತಾಗಿತ್ತು.ಅಲ್ಲಿರುವ ಶನಿ ಮಹಾತ್ಮ ದೇವಾಲಯಕ್ಕೆ ಆಗಮಿಸುತ್ತಿದ್ದ ಭಕ್ತಾಧಿಗಳಿಗೂ ತೊಂದರೆಯಾಗಿತ್ತು.
ಪಟ್ಟಣಕ್ಕೆ ಕಾರ್ಯನಿಮಿತ್ತ ಆಗಮಿಸಿದ್ದ ಶಾಸಕರಿಗೆ ಅಲ್ಲಿನ ಗ್ರಾಮಪಂಚಾಯ್ತಿ ಸದಸ್ಯರು ನೀರಿನ ಸಮಸ್ಯೆ ಬಗ್ಗೆ ತಿಳಿಸುತ್ತಿದ್ದಂತೆ ತಕ್ಷಣವೆ ಕ್ರಮ ಕೈಗೊಂಡ ಶಾಸಕರು ತಾವೇ ಖುದ್ದಾಗಿ ಗ್ರಾಮಕ್ಕೆ ತೆರಳಿ ಪೂಜೆ ಸಲ್ಲಿಸಿ ಕೊಳವೆ ಬಾವಿ ಕೊರೆಸಿದರು.ಸುಮಾರು ಅರವತ್ತು ಅಡಿ ಕೊರೆಯುವುದರೊಳಗೆ ನೀರು ಪ್ರಾರಂಭವಾಗಿದ್ದು ಎಲ್ಲರೂ ಸಂತೋಷಿಸುವಂತಾಯಿತು.೯೦೦ ಅಡೀಯವರೆಗೂ ಬೋರ್ ಕೊರೆಸಿದ್ದು ನೀರು ಉಕ್ಕಿಹರಿದಿದೆ.ಒಟ್ಟಾರೆ ಬಹುದಿನಗಳ ನೀರಿನ ಸಮಸ್ಯೆ ಬಗೆಹರಿದಿದ್ದು ಗ್ರಾಮಸ್ಥರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಹುಳಿಯಾರು ಗ್ರಾಪಂ ಅಧ್ಯಕ್ಷೆ ಶ್ರೀಮತಿ ಗೀತಾ ,ಉಪಾಧ್ಯಕ್ಷ ಗಣೇಶ್ ಹಾಗೂ ಸದಸ್ಯರುಗಳಾದ ಶಿವಾಜಿರಾವ್,ಚಂದ್ರಶೇಖರ್ ರಾವ್,ಶ್ರೀಮತಿ ಸುಭದ್ರಬಾಯಿ ಬಾಪುರಾವ್ ,ಹೇಮಂತ್,ರಂಗನಾಥ್,ರಾಘವೇಂದ್ರ,ಕಲಾವಿದ ಗೌಡಿ,ಗೀತಾ ಅಶೋಕ್ ಬಾಬು,ಸಿದ್ದಗಂಗಮ್ಮ,ಪಟಾಕಿ ಶಿವಣ್ಣ,ಗಂಗಣ್ಣ,ಜೆಡಿಎಸ್ ತಾಲ್ಲೂಕ್ ಯುವ ಅಧ್ಯಕ್ಷ ಗೌಡಿ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ