ದೇವಾಲಯವೊಂದರ ಹುಂಡಿಹಣ ದೋಚಲು ಸಂಚು ನಡೆಸಿ ಹೊಂಚುಹಾಕಿದ್ದ ನಾಲ್ವರು ಗ್ರಾಮಸ್ಥರಿಗೆ ಸೆರೆ ಸಿಕ್ಕ ಪ್ರಕರಣ ಹುಳಿಯಾರು ಸಮೀಪದ ಕೆಂಕೆರೆಯ ಪುರದಮಠದಲ್ಲಿ ಬುಧವಾರ ಸಂಜೆ ಜರುಗಿದೆ.
ಕೆಂಕೆರೆಯ ಪುರದಮಠದ ಮರುಳಸಿದ್ದೇಶ್ವರ ಗವಿಗುಡ್ಡದಲ್ಲಿ ನಿಧಿ ಹಾಗೂ ಹುಂಡಿ ಹಣ ಇರಬಹುದೆಂಬ ಲೆಕ್ಕಾಚಾರದಲ್ಲಿ ಹೊರಜಿಲ್ಲೆಯ ನಾಲ್ವರು ತಮ್ಮಡಿಹಳ್ಳಿಯ ವ್ಯಕ್ತಿಯಾದ ವರುಣ್ ಎಂಬಾತನೊಂದಿಗೆ ಸೇರಿ ಹಣ ದೋಚಲು ಸಂಚು ರೂಪಿಸಿದ್ದಾರೆ.
ಕೆಂಕೆರೆಯ ಪುರದಮಠದ ಮರುಳಸಿದ್ದೇಶ್ವರ ಗವಿಗುಡ್ಡದಲ್ಲಿ ನಿಧಿ ಹಾಗೂ ಹುಂಡಿ ಹಣ ಇರಬಹುದೆಂಬ ಲೆಕ್ಕಾಚಾರದಲ್ಲಿ ಹೊರಜಿಲ್ಲೆಯ ನಾಲ್ವರು ತಮ್ಮಡಿಹಳ್ಳಿಯ ವ್ಯಕ್ತಿಯಾದ ವರುಣ್ ಎಂಬಾತನೊಂದಿಗೆ ಸೇರಿ ಹಣ ದೋಚಲು ಸಂಚು ರೂಪಿಸಿದ್ದಾರೆ.
ಎರಡು ಬೈಕಿನಲ್ಲಿ ಆಗಮಿಸಿದ್ದ ಈ ನಾಲ್ಕು ಮಂದಿ ಗವಿಗುಡ್ಡಕ್ಕೆ ಹೋಗಿ ಸಂಜೆಯಾದರೂ ಮರಳದಿದ್ದನ್ನೂ ನೋಡಿದ ಕುರಿಗಾಹಿಗಳು ಊರಿಗೆ ಫೋನಾಯಿಸಿ ಜನರನ್ನು ಕರೆಸಿ ಗುಹೆಯೊಳಗೆ ನುಗ್ಗಿದ್ದಾಗ ಇವರೆಲ್ಲ ಸೆರೆಸಿಕ್ಕಿದ್ದಾರೆ.ನಂತರ ಹುಳಿಯಾರು ಠಾಣೆಗೆ ಒಪ್ಪಿಸಿದ ಇವರುಗಳನ್ನು ವಿಚಾರಣೆ ಮಾಡಿದಾಗ ಟಿವಿಯಲ್ಲಿ ಗವಿಗುಡ್ಡದ ಬಗ್ಗೆ ಪ್ರಸಾರವಾಗಿದ್ದನ್ನು ನೋಡಿ ಪ್ರೇರಿತರಾದ ನಾವುಗಳು ಈ ಕೃತ್ಯ ಎಸೆಗಲು ಬಂದಿದ್ದಾಗಿ ತಿಳಿಸಿದ್ದಾರೆ.
ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಪ್ರವೀಣ್ ತನಿಖೆಯನ್ನು ಕೈಗೊಂಡಿದ್ದಾರೆ.
ಬಂಧಿತರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ವೆಂಕಟೇಶ್ ,ಆಂಧ್ರಪ್ರದೇಶದ ರಾಮಾಂಜಿ ಉರ್ಫ್ ರೆಡ್ಡಿ ,ಹೋಬಳಿಯ ತಮ್ಮಡಿಹಳ್ಳಿಯ ವರುಣ ಹಾಗೂ ದೊಡ್ಡಬಳ್ಳಾಪುರ ಗ್ರಾಮದ ಬಾಶೆಟ್ಟಿಹಳ್ಳಿಯವರಾದ ಮನೋಹರ ಮತ್ತು ಮಂಜುನಾಥ್ ಎಂದು ಗುರ್ತಿಸಲಾಗಿದ್ದು ಏಲ್ಲಾ ಐದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ