ಸ್ವಾತಂತ್ರ್ಯೋತ್ಸವದ ಅಂಗವಾಗಿ ಹುಳಿಯಾರಿನಲ್ಲಿ ಜಯಕರ್ನಾಟಕ ಸಂಘಟನೆಯಿಂದ ಪುರುಷರ ಜಿಲ್ಲಾ ಮಟ್ಟದ ಸೈಕಲ್ ರೇಸ್ ಸ್ಪರ್ಧೆಯನ್ನು ಆಗಸ್ಟ್ ಹದಿನೈದರಂದು ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 1೦ ಗಂಟೆಗೆ ಸರಿಯಾಗಿ ಸ್ಪರ್ಧೆ ಆರಂಭವಾಗಲಿದ್ದು ಸ್ಪರ್ಧಿಗಳು ಹುಳಿಯಾರು ಪೋಲಿಸ್ ಠಾಣೆ ಸರ್ಕಲ್ ನಿಂದ ಹೊರಟು ಸಾಲ್ಕಟ್ಟೆ ಕ್ರಾಸ್ ತಲುಪಿ ಅಲ್ಲಿ ಕೊಡುವ ಟೋಕನ್ ಪಡೆದು ವಾಪಸ್ಸು ಹುಳಿಯಾರಿಗೆ ಮರಳಬೇಕಿದೆ.
ಸ್ಪರ್ಧೆಗೆ ಗೇರ್ ಸೈಕಲ್ ಬಳಸುವಂತಿಲ್ಲ ಎಂಬ ನಿಬಂಧನೆಯಿದ್ದು ಪ್ರಥಮ ಬಹುಮಾನವಾಗಿ ಸೈಕಲ್,ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ ಮೊಬೈಲ್ ನೀಡಲಾಗುವುದು .
ಆಸಕ್ತರು ಹೆಚ್ಚಿನ ಮಾಹಿತಿಗೆ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ರೈ 9141726144 ಹಾಗೂ ತಾಲ್ಲೂಕು ಯುವಘಟಕದ ಅಧ್ಯಕ್ಷ ಭೈರೇಶ್ 9448748280 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ