ಆದರ್ಶ ಮನುಷ್ಯನಲ್ಲಿ 16 ಗುಣಗಳಿರುತ್ತವೆ. ಇದರಲ್ಲಿ ಕ್ಷಮಾಗುಣ ಎಲ್ಲದಕ್ಕಿಂತ ದೊಡ್ಡದು. ಈ ಗುಣ ಉಳ್ಳವನು ದೇವರಿಗೆ ಸಮಾನ ಎಂದು ರಾಜ್ಯ ಮಾದಿಗ ದಂಡೋರದ ರಾಜ್ಯ ಸಮಿತಿ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಅವರು ತಿಳಿಸಿದರು.
ಹುಳಿಯಾರು ಸಮೀಪದ ರಾಮನಗರ ಗ್ರಾಪಂ ವ್ಯಾಪ್ತಿಯ ಗಂಟೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
![]() |
ಹುಳಿಯಾರು ಸಮೀಪದ ಗಂಟೇನಹಳ್ಳಿಯಲ್ಲಿ ಏರ್ಪಡಿಸಿದ್ದ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮದಲ್ಲಿ ರೈತ ಮುಖಂಡ ಕೆಂಕೆರೆ ಸತೀಶ್ ಮಾತನಾಡಿದರು. |
ಡಿಎಸ್‍ಎಸ್ ಸಂಚಾಲಕ ಲಿಂಗದೇವರು ಅವರು ಮಾತನಾಡಿ ಬೀಸೋ ಗಾಳಿ, ಹರಿಯುವ ನೀರು, ಬೆಳಗುವ ಸೂರ್ಯ ಮೇಲ್ಜಾತಿ, ಕೀಳ್ಜಾತಿ ಎನ್ನದೆ ಎಲ್ಲರಿಗೂ ಸಮಾನತ ತೋರುತ್ತದೆ. ಹೀಗೆ ಪ್ರಕೃತಿ ಮಾಡದ ಬಿನ್ನ ಭೇದವನ್ನು ಮನುಷ್ಯ ಮಾಡುತ್ತಿದ್ದಾನೆ. ಇದರಿಂದ ಮನುಷ್ಯ ಮನುಷ್ಯನಲ್ಲಿ ಪರಸ್ಪರ ಧ್ವೇಷ, ಅಸೂಯೆ ಮನೆ ಮಾಡುತ್ತಿದೆ. ದ್ವೇಷದಿಂದ ಯಾರೂ ಉದ್ಧಾರವಾಗಲು ಸಾಧ್ಯವಿಲ್ಲ ಎಂಬ ವಾಸ್ತವ ಸತ್ಯ ಅರಿತು ಪ್ರೀತಿಯಿಂದ ಬಾಳುವುದ ಕಲಿಯಿರಿ. ಅಸ್ಪೃಶ್ಯತೆ ಆಚರಣೆಗೆ ಒಗ್ಗಟ್ಟಾಗುವ ಬದಲು ಊರಿನ ಉದ್ಧಾರಕ್ಕಾಗಿ ಒಗ್ಗಟ್ಟಾಗಿ ಎಂದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ಕೆ.ಕೃಷ್ಣಮೂರ್ತಿ, ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ್ ಚಿ.ನಾ.ಹಳ್ಳಿ ಪಿಎಸ್‍ಐ ವಿಜಯಕುಮಾರ್, ರೈತ ಮುಖಂಡ ಕೆಂಕೆರೆ ಸತೀಶ್, ಗ್ರಾಪಂ ಸದಸ್ಯ ಲೋಕಣ್ಣ, ಪಿಡಿಓ ರಮೇಶ್, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ