ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲೆಡೆ ೬೯ ನೇ ಸ್ವಾತಂತ್ರ್ಯೋತ್ಸವದ ಆಚರಣೆ ಶನಿವಾರದಂದು ಅದ್ದೂರಿಯಾಗಿ ಆಚರಿಸಲಾಯಿತು. ಗ್ರಾ.ಪಂ.ವತಿಯಿಂದ ಎಂಪಿಎಸ್ ಶಾಲಾ ಮೈದಾನದಲ್ಲಿ ಸಾರ್ವತ್ರಿಕವಾಗಿ ಆಯೋಜಿಸಿದ್ದ ಸ್ವಾತಂತ್ಯ್ರೋತ್ಸವದಲ್ಲಿ ಉಪತಹಶೀಲ್ದಾರ್ ಸತ್ಯನಾರಾಯಣ್ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ದೇಶಭಕ್ತರ ಹೋರಾಟ ಹಾಗೂ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಿದೆ.ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ.ಎಲ್ಲರು ನಮ್ಮ ಹಕ್ಕು ಭಾಧ್ಯತೆ ಅರಿತು ಇನ್ನೊಬ್ಬರ ಲೇಸು ಬಯಸಬೇಕು. ನಮಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸಾಮಾಜಿಕ ಪಿಡುಗುಗಳು ಇನ್ನೂ ಎಲ್ಲಡೆ ಮನೆ ಮಾಡಿದ್ದು ಇದನ್ನು ತೊಡೆದು ಹಾಕಲು ಯುವಜನತೆ ಸಂಕಲ್ಪ ತೊಡಬೇಕು, ತ್ಯಾಗ ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳೂವ ಅಗತ್ಯವಿದ್ದು ಇದಕ್ಕಾಗಿ ಯುವಶಕ್ತಿಯ ಭಾಗವಹಿಸುವಿಕೆ ಅಗತ್ಯ ಬೇಕಾಗಿದೆ ಎಂದರು.
ಗ್ರಾಪಂ ಸದಸ್ಯ ಎಲ್.ಆರ್.ಚಂದ್ರಶೇಖರ್ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಬದುಕುವ ಹಕ್ಕು ಸಿಗುವವರೆಗೂ ಸ್ವಾತಂತ್ರ್ಯಕ್ಕೆ ಪೂರ್ಣ ಅರ್ಥ ಬರುವುದಿಲ್ಲ.ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷ ಕಳೆದರೂ ಅನೇಕರು ಇನ್ನೂ ಎಲ್ಲಾ ರೀತಿಯಲ್ಲೂ ಹಿಂದುಳಿದಿದ್ದಾರೆ. ಅಸಮಾನತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಬದ್ಧತೆ ಪ್ರದರ್ಶಿಸಬೇಕು ಎಂದರು.
ರೈತಗೀತೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .ಪೋಲಿಸ್ ಸೇರಿದಂತೆ ಎಲ್ಲಾ ಶಾಲೆಯ ಮಕ್ಕಳ ವಿವಿಧ ತಂಡಗಳಿಂದ ಸಮವಸ್ತ್ರದಲ್ಲಿ ಪಥಸಂಚಲ ನಡೆಸಿ ಧ್ವಜವಂದನೆ ಸಲ್ಲಿಸಿದನಂತರ ಧ್ವಜಾರೋಹಣ ನೆರವೇರಿಸಲಾಯಿತು.
ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ದೇಶಭಕ್ತಿಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಅತ್ಯುತ್ತಮ ಪ್ರದರ್ಶನ ನೀಡಿದ ಶಾಲಾಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ೧೯ ಮಂದಿ ಹಿರಿಯ ಸ್ವಾತಂತ್ಯ್ರ ಹೋರಾಟಗಾರರು ಹಾಗೂ ಅವರ ಕುಟುಂಬದವರಿಗೆ ಸನ್ಮಾನ ಮಾಡಲಾಯಿತು.
ಗ್ರಾ.ಪಂ.ಅಧ್ಯಕ್ಷೆ ಗೀತಾಪ್ರದೀಪ್ ಅಧ್ಯಕ್ಷತೆವಹಿಸಿದ್ದು, ಉಪಾಧ್ಯಕ್ಷ ಎಂ.ಗಣೇಶ್, ಜಿ.ಪಂ. ಸದಸ್ಯೆ ಮಂಜುಳಾ,ತಾ.ಪಂ.ಸದಸ್ಯೆ ಬೀಬೀಫಾತೀಮ, ಪಿಡಿಓ ಅಡವೀಶ್ ಕುಮಾರ್, ಗ್ರಾ.ಪಂ.ಸದಸ್ಯರಾದ ಅಶೋಕ್ ಬಾಬು,ಹೇಮಂತ್ ಕುಮಾರ್,ದಯಾನಂದ್, ರಂಗನಾಥ್, ಭೈರೇಶ್, ಜಬೀಉಲ್ಲಾ,ಪುಟ್ಟರಾಜು, ಕೋಳಿ ಶ್ರೀನಿವಾಸ್, ಪುಟ್ಟಿಬಾಯಿ,ಗೀತಾ, ಸೇರಿದಂತೆ ಗ್ರಾ.ಪಂ.ಎಲ್ಲಾ ಸದಸ್ಯರು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು, ಹಾಗೂ ವಿವಿಧ ಸಂಘ ಸಂಸ್ಥೆಯವರು ,ಶಾಲೆಗಳ ದೈಹಿಕ ಶಿಕ್ಷಕರು, ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ