ಪ್ರತಿಯೊಬ್ಬರಲ್ಲೂ ಗುರಿ ಹಾಗೂ ಸಾಧಿಸುವ ಛಲಯಿದ್ದಲ್ಲಿ ಮಾತ್ರವೇ ಏಳಿಗೆ ಹೊಂದಲು ಸಾಧ್ಯ ಎಂದು ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು ಆಟೋಚಾಲಕರಿಗೆ ಕಿವಿಮಾತು ಹೇಳಿದರು.
ಪಟ್ಟಣದ ವಂದೇಮಾತರಂ ಆಟೋ ಚಾಲಕರ ಹಾಗೂ ಮಾಲಿಕರ ಸಂಘದಿಂದ ಬಸ್ ನಿಲ್ದಾಣದಲ್ಲಿ ವಿಜೃಂಭಣೆಯಿಂದ ಆಚರಿಸಲಾದ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾವು ಕೂಡ ಇದೇ ಸ್ಥಳದಲ್ಲಿ ಆಟೋ ಚಾಲಕನಾಗಿ ದುಡಿದಿದ್ದು ಸೇವಾ ಮನೋಭಾವದಿಂದ ಕಷ್ಟಪಟ್ಟು ವೃತ್ತಿಯಲ್ಲಿ ತೊಡಗಿಕೊಂಡು ದುಡಿದ ಪರಿಣಾಮ ನಾನಿಂದು ಗ್ರಾಪಂ ಅಧ್ಯಕ್ಷನಾಗಲು ಸಾಧ್ಯವಾಯಿತೆಂದರು.ಚಾಲಕರುಗಳು ವೃತ್ತಿನಿಷ್ಟೆ ಹಾಗೂ ಸೇವಾ ಮನೋಭಾವ ಹೊಂದಿದಾಗ ಮಾತ್ರವೇ ಮುಂದೆ ಬರಲು ಸಾಧ್ಯವೆಂದರು.
ಧ್ವಜಾರೋಹಣ ನೆರವೇರಿಸಿದ ಎಎಸೈ ಶಿವಣ್ಣ ಮಾತನಾಡಿ ದೇಶಭಿಮಾನದ ದ್ಯೋತಕದ ಸಂಕೇತವಾಗಿ ಆಟೋ ಸಂಘದಿಂದ ಎಲ್ಲರೂ ಒಗ್ಗಟ್ಟಾಗಿ ಇಂತಹ ಆಚರಣೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.
ಸ್ವಾತಂತ್ರ್ಯೋತವದ ಅಂಗವಾಗಿ ನೂರಕ್ಕೂ ಮೀರಿದ ಆಟೋಗಳನ್ನು ಧ್ವಜ ಹಾಗೂ ಬೆಲೂನ್ ನಿಂದ ಅಲಂಕರಿಸಿದ್ದ ಚಾಲಕರುಗಳು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಹುಳಿಯಾರಿನ ಬಸ್ ನಿಲ್ದಾಣದ ವಂದೇಮಾತರಂ ಆಟೋಚಾಲಕರ ಸಂಘದಿಂದ ಆಚರಿಸಲಾದ ಸ್ವಾತಂತ್ರ್ಯೋತವದಲ್ಲಿ ಎಎಸೈ ಶಿವಣ್ಣ,ತಿರುಮಲಾಪುರ ಗ್ರಾಪಂ ಅಧ್ಯಕ್ಷ ದೇವರಾಜು,ಬಸ್ ಏಜೆಂಟರ್ ಸಂಘದ ವಿಶ್ವಣ್ಣ,ತರಕಾರಿ ಕಾಜಾಪೀರ್ ಹಾಗೂ ಆಟೋ ಚಾಲಕರ ಸಂಘದವರಿದ್ದಾರೆ. |
ಧ್ವಜಾರೋಹಣ ನೆರವೇರಿಸಿದ ಎಎಸೈ ಶಿವಣ್ಣ ಮಾತನಾಡಿ ದೇಶಭಿಮಾನದ ದ್ಯೋತಕದ ಸಂಕೇತವಾಗಿ ಆಟೋ ಸಂಘದಿಂದ ಎಲ್ಲರೂ ಒಗ್ಗಟ್ಟಾಗಿ ಇಂತಹ ಆಚರಣೆ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿದರು.
ಸ್ವಾತಂತ್ರ್ಯೋತವದ ಅಂಗವಾಗಿ ನೂರಕ್ಕೂ ಮೀರಿದ ಆಟೋಗಳನ್ನು ಧ್ವಜ ಹಾಗೂ ಬೆಲೂನ್ ನಿಂದ ಅಲಂಕರಿಸಿದ್ದ ಚಾಲಕರುಗಳು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ