ಜನಪದರ ನುಡಿಗಟ್ಟನ್ನು ಅರ್ಥೈಸಿ ಅಳವಡಿಸಿಕೊಳ್ಳಿ:ಪ್ರೋ.ಬಿಳಿಗೆರೆ
------------
ಜನಪದರ ಮೂರು ಮಹಾಕಾವ್ಯಗಳಾದ ಮಂಟೆಸ್ವಾಮಿ ಕಾವ್ಯ,ಜುಂಜಪ್ಪನ ಕಾವ್ಯ,ಮಲೆಮಹದೇಶ್ವರ ಸ್ವಾಮಿ ಕಾವ್ಯಗಳು ಲೋಕವಿರುವವರೆಗೂ ಚಿರಸ್ಥಾಯಿ ಕಾವ್ಯಗಳಾಗಿದ್ದು ಇದರಲ್ಲಿನ ಶ್ರೇಷ್ಟ ನುಡಿಗಟ್ಟುಗಳನ್ನು ಮನನ ಮಾಡಿಕೊಂಡು ಅಳವಡಿಸಿಕೊಳ್ಳಬೇಕೆಂದು ಪ್ರೋ,ಬಿಳಿಗೆರೆ ಕೃಷ್ಣಮೂರ್ತಿ ಕರೆನೀಡಿದರು.
![]() |
ಪ್ರೋ,ಬಿಳಿಗೆರೆ ಕೃಷ್ಣಮೂರ್ತಿ ಮಾತನಾಡುತ್ತಿರುವುದು |
ಅವರು ಹುಳಿಯಾರು ಹೋಬಳಿ ಸ್ವಾತಂತ್ರ್ಯ ಹೋರಾಟಗಾರರ ಸಂಘದಿಂದ ರೈತಸಂಘ ಹಾಗೂ ವಿವಿಧ ಸಂಘಸಂಸ್ಥಗಳ ಸಹಯೋಗದೊಂದಿಗೆ ಪಟ್ಟಣದ ಗಾಂಧಿಭವನದಲ್ಲಿ ಶುಕ್ರವಾರ ಮಧ್ಯರಾತ್ರಿ ೧೨ರ ಸಮಯದಲ್ಲಿ ಆಚರಿಸಿದ ೬೮ ನೇ ಸ್ವಾತಂತ್ಯ್ರ ದಿನಾಚರಣೆಯಲ್ಲಿ ಪಾಲ್ಗೊಂಡು ಜನಪದಸಾಹಿತ್ಯ ಹಾಗೂ ಸಂಸ್ಕೃತಿ ಬಗ್ಗೆ ಮಾತನಾಡಿದರು.
ಸಾಂಸ್ಕೃತಿಕವಾಗಿ ಹುಳಿಯಾರು ಮುಂದುವರಿದಿದ್ದು ಇಲ್ಲಿರುವ ಅನೇಕ ಕೊರತೆಗಳನ್ನು ನೀಗಿಸಲು ಇಂದಿನ ಯುವಪೀಳಿಗೆ ಮುಂದಾಗಬೇಕು ಎಂದ ಅವರು ಪ್ರಸ್ತುತದಲ್ಲಿ ದೇಶವ್ಯಾಪಿ ಅನೇಕ ಜ್ವಲಂತಸಮಸ್ಯೆಗಳಿದ್ದು ಅವುಗಳ ನಿರ್ಮೂಲನೆಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲವೆಂದರು. ಇಂತಹ ಸಮಸ್ಯೆಗಳ ನಿರ್ಮೂಲನೆಗಾಗಿ ದೇಶದ ಪ್ರತಿಯೊಬ್ಬ ಪ್ರಜೆಯೂ ಪಣತೊಡಬೇಕಿದೆ ಎಂದರು.
ಮಧ್ಯರಾತ್ರಿ ಸ್ವಾತಂತ್ರ್ಯ ಆಚರಣೆಯ ಹಿನ್ನಲೆ ಬಗ್ಗೆ ಲೇಖರಾದ ಗುರುಮೂರ್ತಿ ಕೊಟಿಗೆಮನೆ ತಿಳಿಸಿದರು.
ಎಲ್.ಆರ್.ಚಂದ್ರಶೇಖರ್ವರ್ತಮಾನದ ಸಮಸ್ಯೆ ಬಗ್ಗೆ ಚಿತ್ರಣ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ವೆಂಕಟಾಛಲಪತಿ ಶೆಟ್ರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು, ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ,ಉಪಾಧ್ಯಕ್ಷ ಗಣೇಶ,ಗ್ರಾಪಂ ಸದಸ್ಯರಾದ ಜಬೀಉಲ್ಲಾ,ಅಶೋಕ್ ಬಾಬು,ಗೀತಾ ಬಾಬು, ರೈತ ಸಂಘದ ಕೆಂಕೆರೆ ಸತೀಶ, ಮಲ್ಲಿಕಣ್ಣ, ಬಸ್ ಏಜೆಂಟರ್ ಸಂಘದ ಲೋಕೇಶಣ್ಣ, ಮುಖಂಡರಾದ ನಂದಿಹಳ್ಳಿ ಶಿವಣ್ಣ, ಜಲಾಲ್ ಸಾಬ್, ನಜರು ಖಾನ್ ,ಬಡಗಿರಾಮಣ್ಣ, ಗೋಪಾಲ್ ರಾವ್, ಸೇರಿದಂತೆ ಇತರರು ಉಪಸ್ಥಿತರಿದ್ದರು
68ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಬಣೆಯಿಂದ ನಮ್ಮ ಹುಳಿಯಾರಿನಲ್ಲಿ ಮಧ್ಯರಾತ್ರಿ 12ಗಂಟೆ ಸಮಯದಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದಿಂದ ಆಚರಿಸಿದ್ದು ನಿಜಕ್ಕೂ ಬಹಳ ಸಂತೋಷದ ವಿಷಯವಾಗಿದೆ, ಎಲ್ಲರಿಗೂ ಅಭಿನಂದನೆಗಳು, ಇದನ್ನು ಫೇಸ್ ಬುಕ್ ಮುಖಾಂತರ ತಿಳಿಸಿದ ಶ್ರೀ ನರೇಂದ್ರ ಬಾಬುರವರಿಗೆ ಅನಂತಾನಂತ ವಂದನೆಗಳು
ಪ್ರತ್ಯುತ್ತರಅಳಿಸಿ