ಪಟ್ಟಣದ ಪುರಾಣಪ್ರಸಿದ್ದ ಶ್ರೀ ರಂಗನಾಥ ಸ್ವಾಮಿಯ ಅಮಾವಾಸ್ಯೆ ಪೂಜೆಯು ಶ್ರದ್ಧಭಕ್ತಿಯಿಂದ ನೆರವೇರಿತು.ಸ್ವಾಮಿಗೆ ಮುಂಜಾನೆ ಅಭಿಷೇಕ ನಡೆದು ವಿಶೇಷ ಪೂಜೆ ಸಲ್ಲಿಸಲಾಯಿತು.ಹತ್ತಿಯಿಂದ ಸ್ವಾಮಿಗೆ ಮಾಡಲಾಗಿದ್ದ ಅಲಂಕಾರ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಂಜೆ ಮಹಿಳಾ ಭಜನಾ ಮಂಡಳಿಯಿಂದ ಸ್ವಾಮಿಯ ಭಜನೆ ನಡೆದು ಮಹಾಮಂಗಳಾರತಿ ನೆರವೇರಿದ ನಂತರ ದಿ.ಭಾಸ್ಕರಾಚಾರ್ ಕುಟುಂಬವರ್ಗ,ಅರ್ಚಕ ರಾಜಣ್ಣ,ಬಡಿಗಿ ಹನುಮಂತಪ್ಪ ಹಾಗೂ ಬೀರಪ್ಪನವರ ಕುಟುಂಬದವರ ಸೇವಾರ್ಥದಲ್ಲಿ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ದೇವಸ್ಥಾನ ಸಮಿತಿಯ ಅಧ್ಯಕ್ಷ ರಂಗನಾಥ್ ಶೆಟ್ರು,ಏಕಾದಶಿ ಸಮಿತಿಯ ಸಿ.ವಿಶ್ವನಾಥ್,ಶೇಷಣ್ಣ ಇನ್ನಿತರರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ