ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಿಧನ ವಾರ್ತೆ

ಹುಳಿಯಾರು ಹೋಬಳಿಯ ಗಾಣಧಾಳು ಗ್ರಾಮದ ಜಿ.ಎಸ್.ಜಬ್ಬರ್ ಸಾಬ್(90ವರ್ಷ) ಬುಧವಾರದಂದು ನಿಧನರಾಗಿದ್ದಾರೆ. ಇವರು ಸಮಾಜ ಸೇವಕರಾಗಿ, ಮುಸ್ಲಿಂ ಸಮುದಾಯದ ಖಾಜಿಸಾಬ್ ಆಗಿದ್ದರು. ಅಲ್ಲದೆ ಖುರಾನ್ ಮತ್ತು ಅರಬ್ ಭಾಷೆಯನ್ನು ಮಕ್ಕಳಿಗೆ ಪಠಣ ಮಾಡುತ್ತಿದ್ದರು. ಗ್ರೂಪ್ ಪಂಚಾಯ್ತಿಯ(ಇಂದಿನ ಗ್ರಾಮಪಂಚಾಯ್ತಿ) ಸದಸ್ಯರಾಗಿ, ಸೇವಾಸಹಕಾರ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರಿಗೆ 6 ಗಂಡು,5 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವಿತ್ತು. ಮೃತರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಯಿತು.

ಹುಳಿಯಾರ್ ಗೆ ಬಿ.ಎಸ್.ವೈ

ಅಣೇಪಾಳ್ಯದಲ್ಲಿ ಹಾಲು ಶೇಕರಣಾ ಕೇಂದ್ರ,ಗೀತಗಾಯನ ಸ್ಪರ್ಧೆ

ಹುಳಿಯಾರು ಸಮೀಪದ ಹೊಯ್ಸಳಕಟ್ಟೆ ಗ್ರಾಮದಲ್ಲಿ ನಡೆದ ಗೀತಗಾಯನ ಸ್ಪರ್ಧೆಯ ಉದ್ಘಾಟನೆಯನ್ನು ತಾ.ಪಂ.ಸದಸ್ಯ ಜಿ.ಸೀತಾರಾಮಯ್ಯ ನೆರವೇರಿಸಿದರು.ಜೊತೆಯಲ್ಲಿ ಕೆಂಕೆರೆ ಸತೀಶ್,ಮಲ್ಲೇಶ್,ಲ.ಪು.ಕರಿಯಪ್ಪ ಮತ್ತಿತರಿದ್ದಾರೆ. ಹುಳಿಯಾರು ಹೋಬಳಿ ಅಣೇಪಾಳ್ಯ ಗ್ರಾಮದಲ್ಲಿ ಆರಂಭಗೊಂಡ ಹಾಲು ಶೇಕರಣಾ ಕೇಂದ್ರದ ಉದ್ಘಾಡನೆಯನ್ನು ಹಾಲು ಒಕ್ಕೂಟದ ಅಧ್ಯಕ್ಷ ಹಳೆ ಮನೆ ಶಿವನಂಜಪ್ಪ ನೆರವೇರಿಸಿದರು,ಜೊತೆಯಲ್ಲಿ ಗಂಗಣ್ಣ,ವಿಜಯ ಲಕ್ಷ್ಮಿ,ಸುಬ್ಬರಾಯ ಭಟ್,ದೀಪಕ್ ಇದ್ದಾರೆ.

ಗುಡಿ ಕೈಗಾರಿಕೆಗಳಿಗೆ ಒತ್ತು ನೀಡಿದಾಗ ದೇಶದ ಅಭಿವೃದ್ದಿ ಸಾಧ್ಯ

ಗ್ರಾಮೀಣ ಭಾಗದ ಅಭಿವೃದ್ದಿ ಹಾಗೂ ಔದ್ಯೋಗಿಕ ಸಮಸ್ಯೆ ನಿವಾರಿಸಲು ಕೃಷಿಯ ಜೊತೆ ಜೊತೆಗೆ ಗುಡಿಕೈಗಾರಿಕೆಗೆ ಒತ್ತು ನೀಡಿದಾಗ ಮಾತ್ರ ಸಾಧ್ಯವೆಂದು ಜಿ.ಪಂ.ಕೈಗಾರಿಕ ವಿಭಾಗದ ಉಪನಿರ್ದೇಶಕ ಕುಮಾರಸ್ವಾಮಿ ತಿಳಿಸಿದರು. ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ಜಿ.ಪಂ,ಜಿಲ್ಲಾ ಕೈಗಾರಿಕ ಕೇಂದ್ರ ಹಾಗೂ ಬಾಷ್ ಕಂಪನಿಯ ಸಂಯುಕ್ತಾಶ್ರಯದಲ್ಲಿ ಕುಶಲಕರ್ಮಿಗಳು ಮತ್ತು ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉದ್ಯಮಶೀಲತ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿ ಭಾರತವು ಕೃಷಿ ಆಧಾರಿತ ದೇಶವಾಗಿದ್ದರೂ ಸಹ ಸಾಕಷ್ಟು ಮಂದಿ ಗುಡಿ ಕೈಗಾರಿಕೆಯನ್ನು ಅವಲಂಬಿಸಿದ್ದಾರೆ. ಗುಡಿ ಕೈಗಾರಿಕೆಗೆಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ಗುಡಿಕೈಗಾರಿಕಾ ಉಪಕರಣಗಳ ಖರೀದಿಗೆ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿದೆ. ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ಹೆಚ್ಚಿನ ಉತ್ಪಾದನೆಯಲ್ಲಿ ತೊಡಗಬೇಕು ಎಂದರು. ಶಿಬಿರ ಉದ್ಘಾಟಿಸಿದ ಜಿ.ಪಂ.ಸದಸ್ಯೆ ಮಂಜುಳಾ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಅನೇಕ ಗ್ರಾಮೀಣ ಭಾಗದ ಜನರು ಕೆಲಸಕ್ಕಾಗಿ ಪಟ್ಟಣಗಳತ್ತ ವಲಸೆ ಹೋಗಿತ್ತಿದ್ದು ,ಇದನ್ನು ತಡೆಯುವ ನಿಟ್ಟಿನಲ್ಲಿ ಪಿ.ಎಂ.ಆರ್.ವೈ, ಮತ್ತು ಆರ್.ಇ.ಜಿ.ಪಿ. ಯೋಜನೆಗಳನ್ನು ಒಗ್ಗೂಡಿಸಿ ಜಾರಿಗೆ ತಂದಿರುವ ಪಿ.ಎಂ.ಇ.ಜಿ.ಪಿ ಎಂಬ ಹೊಸ ಯೋಜನೆ ಗ್ರಾಮೀಣ ಜನತೆಗೆ ತುಂಬಾ ಸಹಕಾರಿಯಾಗಿದೆ ಎಂದರು. ಶಿಬಿರದಲ್ಲಿ ಗ್ರಾ,ಪಂ,ಅಧ್ಯಕ್ಷ ಸಯ್ಯದ್ ಅನ್ಸರ್ ಆಲಿ,ತಾ.ಪಂ.ಸದಸ್ಯ ನ

ಬಾಲ್ ಬ್ಯಾಡ್ಮಿಂಟನ್: ಆಳ್ವಾಸ್ ತಂಡ ಪ್ರಥಮ

ಹುಳಿಯಾರಿನ ಕ್ರಿಯಾಶೀಲ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಸ್ಥೆವತಿಯಿಂದ ನಡೆದ ಬಾಲ್ ಬ್ಯಾಡ್ಮಿಂಟನ್ ಪಂದ್ಯದ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಆಳ್ವಾಸ್ ತಂಡದ ಆಟಗಾರ್ತಿಯರು.

ಹುಳಿಯಾರು:ಜೂ.10 ರಿಂದ ರಾಜ್ಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಪುಟ್ಟಸ್ವಾಮಿಗೌಡ ಪಟ್ಟಣದ ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಸ್ಮರಣಾರ್ಥ ರಾಜ್ಯ ಮಟ್ಟದ ಆಹ್ವಾನಿತ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇಂದಿನಿಂದ( ಜೂ.10) ರಿಂದ 12ರ ವರೆಗೆ ಒಟ್ಟು ಮೂರು ದಿನಗಳ ಕಾಲ ಹುಳಿಯಾರಿನ ಎಂ.ಪಿ.ಎಸ್. ಆವರಣದಲ್ಲಿ ನಡೆಯಲಿದೆ. ಸಂಘ ಸ್ಥಾಪನೆಯ ಉದ್ದೇಶ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಪುಟ್ಟಸ್ವಾಮಿ ಗೌಡ ಗ್ರಾಮಾಂತರ ಪ್ರದೇಶಗಳಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಜೊತೆಗೆ ಸಮಾಜಮುಖಿ ಕಾರ್ಯಗಳನ್ನು ಏರ್ಪಡಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವಾರು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಜೂ.10 ರ ಬೆಳಿಗ್ಗೆ 10 ಗಂಟೆಗೆ ತುಮಕೂರು ಜಿಲ್ಲಾಧಿಕಾರಿ ಡಾಸಿ.ಸೋಮಶೇಖರ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ.ಶಾಸಕ ಸಿ.ಬಿ.ಸುರೇಶ್ ಬಾಬು ಪತ್ರಕರ್ತ ದಿವಂಗತ ಡಿ.ಎಸ್.ರಾಜಪ್ಪನವರ ಕುರಿತ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ರಾಷ್ತ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಹೆಚ್.ಎಲ್.ಸತೀಶ್ ಪ್ರಾಸ್ತಾವಿಕ ನುಡಿ ಆಡಲಿದ್ದಾರೆ.ಕ್ರಿಯಾಶೀಲ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮಹಾಪೋಷಕರಾದ ಸುಶೀಲಮ್ಮ,ತಹ

ಸಾಮೊಹಿಕ ವಿವಾಹದಲ್ಲಿ ಮದುವೆಯಾದ ಜೋಡಿಗಳು

ಹುಳಿಯಾರಿನ ರೋಟರಿ ಸಂಸ್ಥೆ, ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ ನಡೆ ವಿವಾಹ ಮಹೋತ್ಸವದಲ್ಲಿ ಮೇ.೨೯ ರ ಭಾನುವಾರ ವಿವಾಹ ಬಂಧನಕೊಳಗಾದ ಜೋಡಿಗಳು.

ಸಾಮೂಹಿಕ ವಿವಾಹ: ಹಸೆಮಣೆ ಏರಿದ 12 ಜೋಡಿಗಳು

ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಹುಳಿಯಾರಿನ ರೋಟರಿ ಸಂಸ್ಥೆ , ಕಮ್ಯೂನಿಟಿ ಕಾರ್ಪ್ಸ್ ಹಾಗೂ ಬೆಂಗಳೂರು ರೋಟರಿ ಮಿಡ್ಟೌನ್ ಸಹಯೋಗದಲ್ಲಿ 28ನೇ ಸಾಮೂಹಿಕ ವಿವಾಹ ಶರಣರ ಸಮ್ಮುಖದಲ್ಲಿ ನೆರವೇರಿತು. ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಮೃತ್ಯಂಜಯ ದೇಶಿಕೇಂದ್ರ ಸ್ವಾಮಿಗಳು ವಿವಾಹ ಬಂಧನಕೊಳಗಾದ ಜೋಡಿಗಳನ್ನು ಕುರಿತಂತೆ ದುಷ್ಚಟಗಳನ್ನು ಬದಿಗೊತ್ತಿ ಬಾಳಬೇಕು, ಆಗ ನಮ್ಮ ಬದುಕು ಹಸನಾಗುತ್ತದೆ,ಗುರುಹಿರಿಯರು ಹಾಕಿದ ಮಾರ್ಗದಲ್ಲಿ ನಡೆದರೆ ಅದರಿಂದ ನಮ್ಮ ಜೀವನ ಉತ್ತಮ ರೀತಿಯಲ್ಲಿ ರೂಪಗೊಳ್ಳತ್ತದೆ ಎಂದರು. ಧರ್ಮನಿಷ್ಠರು,ನೀತಿವಂತರು ಆಗಿ ಸಹಬಾಳ್ವೆಯಿಂದ ಹೊಂದಿಕೊಂಡರೆ ಅದರಿಂದ ಮುಕ್ತಿ ಲಭಿಸುತ್ತದೆ. ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಾರ್ವಜನಿಕ ಸೇವಾ ಕಾರ್ರದಲ್ಲಿ ತೊಡಗಿರುವ ರೋಟರಿ ಸಂಸ್ಥೆಗೆ ಸೇವಾಮನೋಭಾವ ಉಳ್ಳವರು ಸದಸ್ಯರಾಗಿ ಸೇರ್ಪಡೆಗೊಳ್ಳುವ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಮುಂದಾಗಬೇಕು ಎಂದು ಆಶೀರ್ವವಚನ ನೀಡಿದರು . ಇಂದಿನ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 12 ವಧು-ವರರು ಹಸೆಮಣೆ ಏರುವ ಮೂಲಕ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ನೂತನ ವಧೂವರರಿಗೆ ದಾನಿಗಳಿಂದ ರೇಷ್ಮೇಸೀರೆ,ಬಟ್ಟೆಬರೆ,ಕಾಲುಂಗುರ,ತಾಳಿ ನೀಡಲಾಯಿತು. ಹುಳಿಯಾರು ರೋಟರಿ ಸಂಸ್ಥೆ ಅಧ್ಯಕ್ಷ ಟಿ,ಜಿ.ಮಂಜುನಾಥ ಗುಪ್ತಅಧ್ಯಕ್ಷತೆ ವಹಿಸಿದ್ದ ಈ ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆ ಶಿವಗಿರಿ ಕ್ಷೇತ್ರದ ಸೂರ್ಯ ನಾರಾಯಣ ಮಹಾಸ್ವಾಮಿಗಳು,ದಾನಿಗಳಾದ ಶ್ರೀನಿವಾಸ ಶೆಟ್ಟಿ

ಬೋರನಕಣಿವೆಯಲ್ಲಿ ರಾಜ್ಯಮಟ್ಟದ ಕಾರ್ಯಗಾರ

ಇಂದು ನಮ್ಮಲ್ಲಿ ಸಂಪತ್ತಿನ ದುರುಪಯೋಗವಾಗುತ್ತಿದೆ ಅದಕ್ಕೆ ಪುರುಷ ಅಹಂಕಾರವೇ ಕಾರಣವಾಗಿದೆ,ಇದು ಸರಿಯಾಗಬೇಕಾದರೆ ಸಂಪತ್ತಿನ ಜವಾಬ್ದಾರಿಯನ್ನು ಸ್ತ್ರೀ ಹೊಂದಬೇಕು.ಗಾಂಧೀಜಿ ಹೇಳಿರುವಂತೆ ಆಹಿಂಸೆ ಎನ್ನುವುದು ಒಂದು ಅಸ್ತ್ರ ,ಅದನ್ನು ಸ್ತ್ರೀ ಹಿಡಿದಾಗ ಶಾಂತಿ ಎಂಬ ರಾಜ್ಯದ ನಿರ್ಮಾಣವಾಗುತ್ತದೆ ಎಂದು ಸಾಹಿತಿ ಪ್ರೋ.ಎಸ್.ಜಿ.ಸಿದ್ದರಾಮಯ್ಯ ನುಡಿದರು. ಬೆಂಗಳೂರಿನ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಬೋರನ ಕಣಿವೆ ಸೇವಾಚೇತನದ ಸಹಯೋಗದಲ್ಲಿ ಮಹಿಳೆ ಮತ್ತು ವಿಜ್ಞಾನ ಯೋಜನೆಯಡಿ ಅಂಗನವಾಡಿ ಕಾರ್ಯರ್ಕತೆಯರು ಮತ್ತು ಸ್ತ್ರೀ ಶಕ್ತಿಸಂಘಟಕರಿಗಾಗಿ ಬೋರನಕಣಿವೆ ಸಮೀಪದ ಸೇವಾಚೇತನ ಕೇಂದ್ರದಲ್ಲಿ ಶನಿವಾರದಂದು ನಡೆದ ರಾಜ್ಯ ಮಟ್ಟದ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಮನೋಧರ್ಮವನ್ನು ಸ್ತ್ರೀ ಆಳವಡಿಸಿಕೊಂಡಾಗ ತನ್ನ ಮನೆಯವರಿಂದ ನಮ್ಮ ಭೂಮಿಗೆ ಉಪಯುಕ್ತವಾಗುವಂತೆ ಮಾಡುತ್ತಾಳೆ,ಇದರಿಂದ ಉತ್ತಮ ಸಂಸ್ಕೃತಿಯನ್ನು ವೃದ್ದಿಸಬಹುದು. ಜೊತೆಯಲ್ಲಿ ಜಗತ್ತಿನಲ್ಲೇ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ನಿರ್ಮೂಲನೆಯಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದ ಸಿರಿಯಜ್ಜಿ,ಸಾಲುಮರದ ತಿಮ್ಮಕ್ಕ ಅವರ ಆದರ್ಶದ ಪಾಲನೆ ಆಗಬೇಕಿದೆ.ಬದುಕಿನ ಆಶುದ್ದತೆಯನ್ನು ತೊಡೆದುಹಾಕಲು ವೈಜ್ಞಾನಿಕ ಮನೋಧರ್ಮದೆಡೆಗೆ ನಮ್ಮ ಪಯಣ ಸಾಗಬೆಕಿದೆ ಎಂದ ಅವರು ಹಿಂದೆ ಊರ

ಬೋರನ ಕಣಿವೆ ಸೇವಾ ಚೇತನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಗಾರ

ಹುಳಿಯಾರು ಸಮೀಪದ ಬೋರನ ಕಣಿವೆ ಸೇವಾ ಚೇತನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಗಾರವನ್ನು ಜಿಲ್ಲಾಧಿಕಾರಿ ಸೋಮಶೇಕರ್ ಸಸಿಯನ್ನು ನೆಡುವ ಮೂಲಕ ಉದ್ಘಾಟಿಸಿದರು, ಚಲನಚಿತ್ರ ನಟ ಅಶೋಕ್,ಸಾಹಿತಿ ಸಿದ್ರಾಮಯ್ಯ,ಪ್ರಜಾಪ್ರಗತಿ ನಾಗಣ್ಣ,ತಹಸಿಲ್ದಾರ್ ಕಾಂತರಾಜು ಇನ್ನಿತರರಿದ್ದಾರೆ.

ಮೇ.೩೦ ರಂದು ಫಲಾನುಭವಿಗಳ ಆಯ್ಕೆ

2011-12ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ಸರ್ಕಾರದ ಸುವರ್ಣ ಭೂಮಿ ಯೋಜನೆಯಡಿ ಅರ್ಜಿ ಸಲ್ಲಿಸಿರುವ ರೈತರನ್ನು ಲಾಟರಿ ಪ್ರಕ್ರಿಯೆಮೂಲಕ ಇಂದು ಫಲಾನುಭಭವಿಗಳನ್ನು ಆಯ್ಕೆಮಾಡಲಾಗುವುದೆಂದು ಕೃಷಿ ಸಹಾಯಕ ನಿರ್ದೇಶಕ ರಂಗಸ್ವಾಮಿ ತಿಳಿಸಿದ್ದಾರೆ. ಆಯ್ಕೆ ಪ್ರಕ್ರಿಯೆ ಹುಳಿಯಾರಿನ ಅಂಬೇಡ್ಕರ್ ಭವನ, ಕಂದಿಕೆರೆ ಗಣಪತಿ ಪೆಂಡಾಲ್,ಹಂದನಕೆರೆ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಬೆಳಿಗ್ಗೆ ಅಯಾ ವಿಭಾಗದ ನೊಡೆಲ್ ಅಧಿಕಾರಿಗಳ ಹಾಗೂ ತಾಲ್ಲೂಕ್ ಮಟ್ಟದ ಇಲಾಖಾ ಅಧಿಕಾರಿಗಳ ಸಮ್ಮಖದಲ್ಲಿ ಗುರಿಗಿಂತ ಹೆಚ್ಚಾಗಿ ಬಂದಿರಯವ ಅರ್ಜಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುವುದೆಂದು ತಿಳಿಸಿದ್ದಾರೆ.

ಮೈಸೂರ್ ಹುಲಿ ಟಿಪ್ಪುಸುಲ್ತಾನ್ ನ 258 ನೇ ಪುಣ್ಯತಿಥಿ

ಸ್ವಾತಂತ್ರಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿಗಳ ಆದರ್ಶ ಗುಣಗಳನ್ನು ಪ್ರತಿಯೋಬ್ಬರು ಅಳವಡಿಸಿಕೊಳ್ಳ ಬೇಕೆಂದು ಆಲ್ಹಜ್ ಸಯ್ಯದ್ ಜಬೀಸಾಬ್ ತಿಳಿಸಿದರು. ಹುಳಿಯಾರಿನ ಟಿಪ್ಪು ಸುಲ್ತಾನ್ ಯುವಕರ ಸಂಘದ ವತಿಯಿಂದ ಮದೀನಾ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಟಿಪ್ಪುವಿನ 258ನೇ ಪುಣ್ಯತಿಥಿಯ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಯುವಕರು ಸಂಘಟಿತರಾಗಿ ಅನೇಕ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು.. ತಾ.ಪಂ.ಉಪಾಧ್ಯಾಕ್ಷೆ ಬಿ.ಬಿ.ಫಾತೀಮಾ ಮಾತನಾಡಿ ದೇಶಕ್ಕೋಸ್ಕರ ಹೋರಾಡಿದ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಇಂದಿನ ವಿಧ್ಯಾಥರ್ಿಗಳಿಗೆ ಅರಿವು ಮೂಡಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿನ ಪಠ್ಯಪುಸ್ತಕದಲ್ಲಿ ಆಳವಡಿಸಬೇಕಿದೆ. ಗ್ರಾ.ಪಂ.ಮಾಜಿ ಉಪಾಧ್ಯಾಕ್ಷ ಹೆಚ್.ಎನ್.ನಜುರುಲ್ಲಾಖಾನ್ ಮಾತನಾಡುತ್ತಾ ಸಾಮೂಹಿಕವಾಗಿ ಮಕ್ಕಳಿಗೆ ಖತ್ನ ಕಾರ್ಯ ಮಾಡಿರುವುದು ತುಂಬಾ ಸಂತೋಷ,ಅದೇ ರೀತಿ ಸಾಮೂಹಿಕ ಮದುವೆ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಈ ಸಂಘದವರು ಆಯೋಜಿಸಲಿ. ಇಂತಹ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮದ್ ಫಯಾಜ್ ವಹಿಸಿದ್ದು,ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಜಹೀರ್ ಸಾಬ್,ಸಯ್ಯದ್ ಜಲಾಲ್ ಸಾಬ್,ಸಜ್ಜಾದ್,ದಿಲ್ ದಾರ್ ಪಾಷ,ಇಲಾಹಿ ಹಾಗೂ ಸದಸ್ಯರು ಭಾಗವಹಿಸಿದ್ದು,ಕಾರ್ಯಕ್ರಮವನ್ನು ಎಸ್.ಅರ್.ಎಲ್ ಲಾರಿ ಮಾಲೀಕರಾದ ಮ

ಹುಳಿಯಾರು ದುರ್ಗಮ್ಮನ ವೈಭವದ ರಥೋತ್ಸವ

ಹುಳಿಯಾರು ಗ್ರಾಮದೇವತೆ ದುರ್ಗಾಪರಮೇಶ್ವರಿ ಅಮ್ಮನವರ 41 ನೇ ವರ್ಷದ ರಥೋತ್ಸವವು ಅಸಂಖ್ಯಾತ ಭಕ್ತರ ಉಪಸ್ಥಿತಿಯಲ್ಲಿ ವಿವಿಧ ಗ್ರಾಮದೇವತೆಗಳ ಸಮ್ಮುಖದಲ್ಲಿ ವೇದ ಮಂತ್ರ ಘೋಷಗಳ ನಾದದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಶುಕ್ರವಾರದಂದು ಯಶಸ್ವಿಯಾಗಿ ಜರುಗಿತು. ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ಹಾಗೂ ಪೂಜಾಕೈಂಕರ್ಯಗಳು ನೆರವೇರಿತು.ಮಂಗಳವಾಧ್ಯದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಿಯು ಮೂಲ ದೇವತೆಗೆ ವಿಶೇಷ ಪೂಜೆ ಸಲ್ಲಿಸಿ ಗ್ರಾಮದೇವತೆ ಹುಳಿಯಾರಮ್ಮ,ತಿರುಮಲಾಪುರದ ಕೊಲ್ಲಾಪುರದಮ್ಮ,ಗೌಡಗೆರೆಯ ದುರ್ಗಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮನವರೊಂದಿಗೆ ಭೇಟಿ ಮಾಡಿಸಿ ಭಕ್ತಾಧಿಗಳ ಉದ್ಘೋಷದೊಂದಿಗೆ ಕರೆತಂದು ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು ಹಾಗೂ ಹೂವಿನ ಹಾರಗಳಿಂದ ಸರ್ವಾಲಂಕೃತಗೊಂಡ ರಥಕ್ಕೆ ಏರಿಸಲಾಯಿತು.ಮದ್ಯಾಹ್ನ 2 ಗಂಟೆಗೆ ರಥಕ್ಕೆ ಕಾಯಿ ಒಡೆಯುವ ಮೂಲಕ ಹಾಗೂ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿಲಾಯಿತು. ಮುಂಜಾನೆಯಿಂದಲೇ ಕಿಕ್ಕಿರಿದು ನೆರದಿದ್ದ ಭಕ್ತಾಧಿಗಳು ಜಯಘೋಷದೊಂದಿಗೆ ತೇರನ್ನೆಳದು ಸಂಭ್ರಮಿಸಿದರು. ಮಂಗಳವಾಧ್ಯದೊಂದಿಗೆ ಸಾಗಿಬಂದ ರಥಕ್ಕೆ ಬಾಳೆಹಣ್ಣು,ಧವನ ತೂರುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಹಾಗೂ ಹರಕೆಯನ್ನು ಸಮರ್ಪಿಸಿದರು.ನಂತರ ನೆರದಿದ್ದ ಭಕ್ತಾಧಿಗಳು ಹಾಗೂ ಹೆಣ್ಣುಮಕ್ಕಳು ಹಣ್ಣು ಕಾಯಿ ಮಾಡಿಸಿ ತಮ್ಮ ಇಷ್ಟ ದೈವವನ್ನು ಕಣ್ಣಿಗೆ ತುಂಬಿಕೊಂಡರು.ರಥೋತ್ಸವದ ಅಂಗ

ಶ್ರೀ ರಾಮನವಮಿ

ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ರಾಮನವಮಿ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಶ್ರೀ ರಾಮ ಭಜನೆ ಮೂಲಕ ಶ್ರೀ ರಾಮ ದೇವರ ಉತ್ಸವವನ್ನು ಗ್ರಾಮದೇವತೆಗಳೊಂದಿಗೆ ವಿಭೃಂಜಣೆಯಿಂದ ನಡೆಸಿದರು. ಶ್ರೀ ರಾಮನವಮಿ ಪ್ರಯುಕ್ತ ಹುಳಿಯಾರಿನ ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿರುವುದು. ಹುಳಿಯಾರಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಜೈ ಮಾರುತಿ ಯುವಕ ಚಾರಿಟಬಲ್ ಟ್ರಸ್ಟ್ ವತಿಯಿಂದ ರಾಮನವಮಿ ಅಂಗವಾಗಿ ಮಜ್ಜಿಗೆ ಹಾಗೂ ಪನಿವಾರ ಸೇವೆ ನಡೆಯಿತು.

ಚಿನಾಹಳ್ಳಿ ತಾಲ್ಲೂಕಿಗೆ ಹೇಮೆ:102.60 ಕೋಟಿ ಅಂದಾಜು ವೆಚ್ಚದಲ್ಲಿ 26 ಕೆರೆಗೆ ನೀರು

ಚಿನಾಹಳ್ಳಿ ತಾಲ್ಲೂಕಿಗೆ ಹೇಮೆ:102.60 ಕೋಟಿ ಅಂದಾಜು ವೆಚ್ಚದಲ್ಲಿ 26 ಕೆರೆಗೆ ನೀರು --------------------------------------------- ಸಚಿವರಿಂದ ಬೋರನಕಣೆವೆಗೂ ನೀರು ಹರಿಸುವ ಭರವಸೆ ------------------------------------- ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕುಡಿಯುವ ನೀರು ಯೋಜನೆಗಾಗಿ ಕಾವೇರಿ ನೀರಾವರಿ ನಿಗಮದಿಂದ 102.60ಕೋಟಿ ವೆಚ್ಚದಲ್ಲಿ ಸಲ್ಲಿಸಲಾಗಿರುವ ಪ್ರಸ್ತಾವನೆಯನ್ನು ಸಕಾ೯ರ ಒಪ್ಪಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಯೋಜನೆ ಅನುಷ್ಠನಗೊಳಿಸುವ ಉದ್ದೇಶ ಸಕಾ೯ರದಲ್ಲಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಸೋಮವಾರ ವಿಧಾನಸಭೆಯಲ್ಲಿ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ತಲ್ಲೂಕಿನ ಕುಡಿಯುವ ನೀರಿವ ಸಮಸ್ಯೆ ಪ್ರಸ್ತಾವನೆಯಾಗಿದ್ದರ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ತಾವು ತಾಲ್ಲೂಕಿನ ಸಾಸಲು,ಪೆಮ್ಮಲದೇವರಹಳ್ಳಿ,ಶೆಟ್ಟಿಕೆರೆ ಮುಖಾಂತರ ಸಾಲು ಕೆರೆಗಳ ಮೂಲಕ ಬೋರನಕಣೆವೆ ಜಲಾಶಯಕ್ಕೆ ನೀರು ಹರಿಸುವ ಯೋಜನೆ ಬಗ್ಗೆ ಪ್ರಶ್ನಿಸಿದಕ್ಕೆ ಜಲ ಸಂಪನ್ಮೂಲ ಸಚಿವ ಬಸವರಾಜ್ ಬೊಮ್ಮಾಯಿಯವರು ನೀಡಿದ ಉತ್ತರ ಒಟ್ಟಾರೆ ತೃಪ್ತಿದಾಯಕವಾಗಿದೆ ಎಂದರು. ನೀರಿನ ಅಲಭ್ಯತೆ ಹಾಗೂ ಕೆಲವೊಂದು ತಾಂತ್ರಿಕ ಕಾರಣದಿಂದ ಉದ್ದೇಶಿತ ಯೋಜನೆಯಲ್ಲಿ ಬೋರನಕಣಿವೆ ಕೈ ಬಿಡಲಾಗಿದ್ದು ಇದನ್ನು ಹೊರತುಪಡಿಸಿದರೆ ತಾಲ್ಲೂಕಿ