ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2012 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ75%^ ಫಲಿತಾಂಶ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಶೇ75%^ ಫಲಿತಾಂಶ ಲಭಿಸಿದೆ.ಪರೀಕ್ಷೆಗೆ ಒಟ್ಟು 166 ವಿದ್ಯಾರ್ಥಿಗಳು ಹಾಜರಾಗಿದ್ದು 125 ಮಂದಿ ತೇರ್ಗಡೆಯಾಗಿದ್ದಾರೆ. 5 ಮಂದಿ ಅತ್ಯುತ್ತಮ ಶ್ರೇಣಿ, 66 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೆ , 29 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ 25 ವಿದ್ಯಾರ್ಥಿಗಳು ತೃತೀಯ ಸ್ಥಾನ ಹೊಂದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಎಸ್.ಆರ್.ಕಿರಣ್ ಕುಮಾರ್ 537 ಅಂಕತೆಗೆಯುವ ಮೂಲಕ 90% ಗಳಿಸಿದರೆ, ನಾಗರಾಜ್.ಬಿ.ಸಿ 515 ಅಂಕದ ಮೂಲಕ ಶೇ 86 , ನದೀಮ್ ಹೆಚ್.ಜಿ 515 ಅಂಕದ ಮೂಲಕ ಶೇ 86%, ಕಲಾವಿಭಾಗದಲ್ಲಿ ಬಿ.ಹೆಚ್.ಚೈತ್ರ 535ಅಂಕದ ಮೂಲಕ ಶೇ.89 ಹಾಗೂ ಟಿ.ಎನ್.ಚೈತ್ರ 513 ಅಂಕದ ಮೂಲಕ ಶೇ.86 ಗಳಿಸಿದ್ದಾರೆ.ಮಾತೃಭಾಷೆ ಕನ್ನಡದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಎಸ್.ವಿನಾಯಕ 96 ಅಂಕ ತೆಗೆಯುವ ಮೂಲಕ ಕಾಲೇಜಿಗೆ ಪ್ರಥಮನಿಗನಾಗಿದ್ದಾನೆ.ಈ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪ್ರಾಂಶುಪಾಲ,ಶಿಕ್ಷಕ ವರ್ಗ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರುಗಳು ಅಭಿನಂದಿಸಿದ್ದಾರೆ.

ಜಿಡ್ಡು ಗಟ್ಟಿದ ಸಮಾಜಕ್ಕೆ ಚೇತನ ನೀಡಿದವರು ಬಸವೇಶ್ವರರು :ಸ್ವಾಮೀಜಿ

ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ಸಂಜೆ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಅಂಗವಾಗಿ ಅಷ್ಟಮಂಡಲ ಮಂಟಪದಲ್ಲಿ ಶ್ರೀಬಸವೇಶ್ವರ ಭಾವಚಿತ್ರವನ್ನಿಟ್ಟು ನಗರದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು. ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ನಡೆದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಉದ್ಘಾಟನೆಯನ್ನು ನಿಟ್ಟೂರು ಬಿ.ಕೋಡಿಹಳ್ಳಿಯ ಬಸವಭೃಂಗೇಶ್ವರ ಸ್ವಾಮೀಜಿಗಳು ನೆರವೇರಿಸಿದರು.ಜಿ.ಎಂ.ನೀಲಕಂಠಯ್ಯ,ಪ್ರಾಂಶುಪಾಲ ಜಿ.ಎನ್.ಬಸವರಾಜಪ್ಪ,ಗಂಗಣ್ಣ ,ಗಂಗಾಧರಯ್ಯ ಇದ್ದಾರೆ.                                     ಮಹಾನ್ ಮಾನವತಾವಾದಿ ಶ್ರೀ ಬಸವೇಶ್ವರರು 12 ನೇಶತಮಾನಕ್ಕಿಂತ ಮುಂಚೆ ಜಿಡ್ದುಗಟ್ಟಿದ್ದ ಸಮಾಜದಲ್ಲಿ ಹೊಸ ವಿಚಾರಗಳನ್ನು,ಬಸವ ತತ್ವಗಳನ್ನು ತಿಳಿಸುವ ಮೂಲಕ ಉಜ್ವಲ ಚೇತನವನ್ನು ನೀಡುವ ಮೂಲಕ ಬಸವಣ್ಣನವರು ಜಗಜ್ಯೋತಿಯಾಗಿ ಬೆಳಗಿದ್ದಾರೆ ಎಂದು ನಿಟ್ಟೂರು ಬಿ.ಕೋಡಿಹಳ್ಳಿಯ ಬಸವಭೃಂಗೇಶ್ವರ ಸ್ವಾಮೀಜಿಗಳು ಆಶೀರ್ವಚನದಲ್ಲಿ ತಿಳಿಸಿದರು. ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ಸಂಜೆ ಪಟ್ಟಣದ ಬಸವಭವನದಲ್ಲಿ ನಡೆದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡಿದರು. ಬಸವಣ್ಣ ಕೇವಲ ವಿರಶೈವ ಜಾತಿಗೆ ಮಾತ್ರ ಸೀಮಿತವಾಗಿರಲಿಲ್ಲ, ಸರ್ವಧರ್ಮ ಸಹಿಷ್ಟುವಾಗಿ,ಜಾತಿವಿಡಂಬನೆಯಿಂದ ಮೇಲು,ಕೀಳು ಎಂದು ನ

ತಾಲ್ಲೂಕಿಗೆ ಹೇಮೆ ನೀರು ಹರಿಸುವ ಕಾರ್ಯಕ್ಕೆ ಶೀಘ್ರದಲ್ಲೇ ಟೆಂಡರ್

ಬರಗಾಲದ ಬೇಗೆಯಿಂದ ಕುಡಿಯುವ ನೀರಿಗಾಗಿ,ಜಾನುವಾರುಗಳಿಗೆ ಮೇವಿಲ್ಲದೆ,ಕೃಷಿಗೆ ನೀರಿಲ್ಲದೆ ಪರಿತಪಿಸುತ್ತಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನದಿ ನೀರನ್ನು ಹರಿಸುವ ಕಾರ್ಯದ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಕರೆದು,ಕೆಲಸ ಪ್ರಾರಂಭಿಸುವುದಾಗಿ ತಾ.ಪಂ.ಸದಸ್ಯ ಕೆಂಕೆರೆ ನವೀನ್ ತಿಳಿಸಿದ್ದಾರೆ. ಹೇಮಾವತಿ ನದಿ ನೀರನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹರಿಸುವ ಯೋಜನೆಯ ಕಾಮಗಾರಿಯನ್ನು ಕಾವೇರಿ ನೀರಾವರಿ ನಿಗಮ ಕೈಗೆತ್ತಿಕೊಂಡಿದ್ದು, ಕಾಮಗಾರಿಯ ಅನುಷ್ಠಾನಕ್ಕಾಗಿ ಟೆಂಡರನ್ನು ಆಹ್ವಾನಿಸಿದ್ದು,ಮುಂದಿನ ಜುಲೈ ತಿಂಗಳಲ್ಲಿ ಟೆಂಡರ್ ಅನುಷ್ಠಾನದ ಕಾರ್ಯ ಸಂಪೂರ್ಣಗೊಂಡು,ಕಾಮಗಾರಿ ಪ್ರಾರಂಭವಾಗುತ್ತದೆ.ಈ ಯೋಜನೆಯಂತೆ ಹೇಮಾವತಿ ನದಿ ನೀರನ್ನು ಚಿಕ್ಕನಾಯಕನಹಳ್ಳಿ ಸೇರಿದಂತೆ ಹುಳಿಯಾರಿಗೆ ಶೆಟ್ಟಿಕೆರೆಯ ಮೂಲಕ ನೈಸರ್ಗಿಕವಾಗಿ,ತುಮಕೂರು ನಾಲೆಯಿಂದ ಗೋಡೆಕೆರೆ ಭಾಗಗಳಿಗೆ ಏತನೀರಾವರಿ ಮೂಲಕ ತಾಲ್ಲೂಕಿನ 36 ಕೆರೆಗಳಿಗೆ ಹೇಮೆ ನೀರು ಹರಿಸಲಾಗುತ್ತದೆ.ಇದಕ್ಕಾಗಿ ಸರ್ಕಾರ ಈಗಾಗಲೇ 102 ಕೋಟಿ ಹಣವನ್ನು ಮೀಸಲಿರಿಸಿದ್ದು,ನೈಸರ್ಗಿಕ ಹಾಗೂ ಏತ ನೀರಾವರಿಯ ಎರಡು ಕಾಮಗಾರಿಗಳನ್ನು ಒಟ್ಟಿಗೆ ಪ್ರಾರಂಭಿಸಲಿದ್ದು, ಕಾಮಗಾರಿಯ ಅನುಷ್ಠಾನಕ್ಕೆ 24 ತಿಂಗಳ ಕಾಲಾವಧಿ ನಿಗಧಿ ಮಾಡಿರುವುದರಿಂದ,ಇನ್ನೂ 2 ವರ್ಷಗಳಲ್ಲಿ ತಾಲ್ಲೂಕಿನಾದ್ಯಂತ ಹೇಮೆ ನೀರು ಪೂರೈಕೆಯಾಗುದರಲ್ಲಿ ಎರಡು ಮಾತಿಲ್ಲ ಎಂದರು. ಅಲ್ಲದೆ ಈ ಯೋಜನೆಯ ಅನುಷ್ಠಾನದಿಂದಾಗಿ ಸುಮಾರ

ಸಸಿ ನೆಡುವ ಮೂಲಕ ಟಿಪ್ಪು ಪುಣ್ಯ ತಿಥಿ ಆಚರಿಸಿದ ಮುಸ್ಲಿಂ ಬಾಂಧವರು

ಹುಳಿಯಾರಿನ ಮುಸ್ಲಿಂ ಬಾಂಧವರು ಮದೀನಾ ಮಸೀದಿ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುವ ಮೂಲಕ ಟಿಪ್ಪು ಜಯಂತಿಯನ್ನು ಆಚರಿಸಿದರು. ಇಲ್ಲಿನ ಮದೀನಾ ಮಸೀದಿ ಆವರಣ ಹಾಗೂ ಮುಸ್ಲಿಂರ ರುದ್ರಭೂಮಿ ಜಾಗದಲ್ಲಿ ಸಸಿ ನೆಡುವ ಮೂಲಕ ಮೈಸೂರ್ ಹುಲಿ ಟಿಪ್ಪು ಸುಲ್ತಾನರ ಪುಣ್ಯ ತಿಥಿಯನ್ನು ಮುಸ್ಲಿಂ ಬಾಂಧವರು ಹಾಗೂ ವಿವಿಧ ಸಂಘದವರು ಶುಕ್ರವಾರದಂದು ವಿಶಿಷ್ಟವಾಗಿ ಆಚರಿಸಿದರು. ಈ ಸಂಧರ್ಭದಲ್ಲಿ ಮದೀನಾ ಹಾಗೂ ಜಮೀಯಾ ಮಸೀದಿಯ ಮುತುವಲ್ಲಿಯಾದ ಹಲ್ ಹಜ್ ಸೈಯ್ಯದ್ ಜಬೀವುಲ್ಲಾ ಅವರು ಮಾತನಾಡಿ, ಟಿಪ್ಪು ಒಬ್ಬ ಮಹಾನ್ ವ್ಯಕ್ತಿಯಾಗಿದ್ದು, ಈಡಿ ದೇಶವೇ ಆತನ್ನು ಗುರ್ತಿಸಿದೆ.ಈತನ ಪುಣ್ಯತಿಥಿಯನ್ನು ಸಸಿ ನೆಡುವ ಮೂಲಕ ಆಚರಿಸುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದ್ದು,ಪ್ರತಿವರ್ಷವೂ ಇದೇ ರೀತಿ ನಡೆಯಲಿ ಎಂದು ಹಾರೈಸಿದರು. ಟಿಪ್ಪು ಬ್ರಿಟಿಷರ ವಿರುದ್ದ ಸಿಡಿದ್ದೇದ್ದ ಮೊದಲ ಮುಸ್ಲಿಂ ದೊರೆಯಾಗಿದ್ದು, ಭಾರತ ದೇಶಕ್ಕೆ ಸ್ವಾತಂತ್ರ ತಂದು ಕೊಡುವ ಛಲಹೊಂದಿದ್ದ ಈತನ ಪರಾಕಷ್ಟತೆಯನ್ನು ಎಲ್ಲರೂ ಸ್ಮರಿಸಬೇಕಿದೆ.ಅಲ್ಲದೇ ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸಿ ಮೈಸೂರು ಹುಲಿ ಎಂದು ಮನೆ ಮಾತಾಗಿರುವ ಟಿಪ್ಪುವಿನ ನೆನಪು ಪ್ರತಿಯೊಬ್ಬ ಭಾರತೀಯರಲ್ಲಿಯೂ ಸದಾ ಇರಬೇಕು ಎಂದರು.ಈ ರೀತಿ ಪರಿಸರ ಕಾಳಜಿಯನ್ನು ಹೊಂದಿ ಸಸಿ ನೆಡುವ ಮೂಲಕ ಸಮಾರಂಭ ಆಚರಿಸುತ್ತಿರುವುದು ಶ್ಲಾಘನೀಯ,ಇದೇ ರೀತಿ ಪ್ರತಿಯೊಬ್ಬರು ಆಚರಿಸಬೇಕಿದೆ ಎಂದು ರೈತ ಸಂಘದ ಸತೀಶ್ ತಿಳಿಸಿದರು. ಇಂದು

ಕೊಬ್ಬರಿ ಪ್ರೋತ್ಸಾಹ ಧನ ನೀಡುವಂತೆ ಸಿಎಂ ಅವರನ್ನು ಒತ್ತಾಯಿಸಿದ ರೈತಸಂಘ ಹಾಗೂ ತೆಂಗು ಬೆಳೆಗಾರರು

ಇಂದು ಕೊಬ್ಬರಿಗೆ ಉತ್ತಮ ಬೆಲೆ ದೊರೆಯದೆ ತೆಂಗು ಬೆಳೆಗಾರರು ಪರಿತಪಿಸುತ್ತಿದ್ದು, ತೆಂಗಿನ ಮರಗಳೆಲ್ಲಾ ರಸ ಸೋರಿ ಧರೆಗುಳುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅದರಲ್ಲಿಯೋ ಇರುವ ತೆಂಗಿನಿಂದ ದೊರೆಯುವಂತಹ ಕೊಬ್ಬರಿಗೆ ಹಾಲಿ ಮಾರುಕಟ್ಟೆಯಲ್ಲಿರುವ ದರ ತುಂಬಾ ಕಡಿಮೆಯಿದ್ದು,ರಾಜ್ಯ ಸರ್ಕಾರ ಕೊಡುವ ಪ್ರೋತ್ಸಾಹ ಧನವನ್ನು ಹೆಚ್ಚಿಸಿ ತೆಂಗು ಬೆಳೆಗಾರರನ್ನು ರಕ್ಷಿಸುವಂತೆ ರೈತಸಂಘದ ನಿಯೋಗ ಮಾನ್ಯ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಬಳಿ ತೆರಳಿ ಮನವಿ ಸಲ್ಲಿಸಿ,ಒತ್ತಾಯಿಸಿದ್ದಾರೆ.. ಇಂದು ಒಂದು ಕ್ವಿಂಟಲ್ ಕೊಬ್ಬರಿ ಉತ್ಪಾದಿಸಲು ರೈತರಿಗೆ ಸುಮಾರು 10 ಸಾವಿರ ರೂ. ಖರ್ಚು ಬರುತ್ತಿದ್ದು, ಮಾರುಕಟ್ಟೆ ಮಧ್ಯವರ್ತಿಗಳಾ ಹಾವಳಿಯಿಂದ ಕೇವಲ ಐದಾರು ಸಾವಿರದ ದರವಿದೆ. ಇದರಿಂದ ಕೊಬ್ಬರಿ ಬೆಳೆಗಾರರು ಸಂಕಷ್ಟದ ಸ್ಥಿತಿಯಲ್ಲಿದ್ದು ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸುವ ಅಗತ್ಯವಿದೆ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ನೇತೃತ್ವದಲ್ಲಿ ತಿಪಟೂರು, ಚಿ.ನಾ.ಹಳ್ಳಿ ರೈತ ಸಂಘದ ಪದಾಧಿಕಾರಿಗಳು ಬೆಂಗಳೂರಿನ ಅನುಗ್ರಹದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವರಿಸಿದರು. ಕರ್ನಾಟಕ ರಾಜ್ಯದ 13 ಜಿಲ್ಲೆಗಳ 114 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಸರ್ಕಾರವೇ ಘೋಷಿಸಿದ್ದು,ಈ ಪ್ರದೇಶಗಳಲ್ಲಿ ಹೆಚ್ಚು ತೆಂಗು ಬೆಳೆಗಾರರಿದ್ದು, ಕೊಬ್ಬರಿ ಬೆಳೆಯನ್ನು ನಂಬಿ ಜೀವನನಡೆಸುತ್ತಿದ್ದಾರೆ. ಅಲ್ಲದೆ ಮಳೆಯನ್ನೇ ನಂಬಿ ಇಲ್ಲ

ಪೋಟೊ

ಹುಳಿಯಾರು ಸಮೀಪದ ಬೋರನಕಣಿವೆಯಲ್ಲಿ ಸಿಡಿಲು ಬಡಿದು ಸಾವನಪ್ಪಿದ ಜಯಚಂದ್ರ ನಗರ 4 ಕುಟುಂಬದವರಿಗೆ ಕಾಂಗ್ರೇಸ್ ನ ಯುವಮುಖಂಡ ಸಂತೋಷ್ ಜಯಚಂದ್ರ ತಲಾ 5000 ಹಣ ನೀಡಿ ಮೂಲಕ ಸಾಂತ್ವಾನ ಹೇಳಿದರು. ಹುಳಿಯಾರಿನ ಆರ್ಯವೈಶ್ಯ ಮಂಡಲಿವತಿಯಿಂದ ಗಾಂಧೀಪೇಟೆಯ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ 21ನೇ ವಾರ್ಷಿಕೋತ್ಸವ ಹಾಗೂ ಶ್ರೀವಾಸವಿ ಜಯಂತಿಯಂದು ಆನೇಕಲ್ ಮುತ್ತಿನ ಮಂಟಪದಲ್ಲಿ ಕನ್ನಿಕಾಪರಮೇಶ್ವರಿ ಅಮ್ಮನವರ ರಾಜಬೀದಿ ಉತ್ಸವ ನಡೆಸಿದರು

ಅಂಬೇಡ್ಕರರ ಚಿಂತನೆಗಳು ಸರ್ವಕಾಲಿಕವಾಗಿವೆ:

ಹುಳಿಯಾರಿನ ದಲಿತ ಸಂರ್ಷ ಸಮಿತಿ ವತಿಯವರು ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ಆಚರಿಸಿದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಉಪಸ್ಥಿತರಿದ್ದ ದಲಿತ ಸಂರ್ಷ ಸಮಿತಿಯವರು. ನಮ್ಮ ಸಮಾಜಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆ ಅಪಾರ, ಭಾರತದಲ್ಲಿ ಲಿಖಿತ ಸಂವಿಧಾನದ ರಚನೆಯ ಮೂಲಕ ಸಂವಿಧಾನ ಶಿಲ್ಪಿ ಎಂಬ ಖ್ಯಾತಿ ಪಡೆದ ಅವರು ಹೊಂದಿದ್ದ ಚಿಂತನೆಗಳು,ತತ್ವಗಳು ಎಂದೆಂದಿಗೂ ಸರ್ವಕಾಲಿಕವಾದವೆಂದು ವಿಭಾಗೀಯ ದಲಿತ ಸಂರ್ಷ ಸಮಿತಿಯ ಸಂಚಾಲಕ ಕೋರಗೆರೆ ರಂಗಸ್ವಾಮಿ ತಿಳಿಸಿದರು. ಹುಳಿಯಾರಿನ ದಲಿತ ಸಂರ್ಷ ಸಮಿತಿ ವತಿಯವರು ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ಆಚರಿಸಿದ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು. ಪ್ರಸ್ತುತ ಸಮಾಜದಲ್ಲಿ ಸವೆದು ಕಳಚಿಕೊಂಡ ಕೊಂಡಿಗಳಂತಿರುವ ದಲಿತ ಸಂಘಟನೆಗಳು ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡು,ಇಂದು ದಲಿತರ ಮೇಲಾಗುತ್ತಿರುವ ದೌರ್ಜನ್ಯದಿಂದ ಅಸಹಾಯಕರಾಗಿರುವ ದಲಿತರ ಬದುಕನ್ನು ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು. ದಲಿತ ಚಿಂತಕ ಹಾಗಲವಾಡಿ ಚಿಕ್ಕಣ್ಣ ತಮ್ಮ ಪ್ರಾಸ್ತಾವಿಕ ನಡಿಯಲ್ಲಿ, ಅಂಬೇಡ್ಕರ್ ಒಬ್ಬ ಮಹಾನ್ ವ್ಯಕ್ತಿ,ಈಡೀ ಭಾರತ ದೇಶಕ್ಕೆ ವ್ಯವಸ್ಥಿತವಾದ ಕಾನೂನು ಚೌಕಟ್ಟುಗಳನ್ನು ಕಟ್ಟಿಕೊಂಟಂತ ಅವರು ಬೆಳಕು ಕೊಡುವ ಜ್ಯೋತಿಯಾಗಿ ಮುಗ್ದ ಜನಕ್ಕೆ ಮೇಟಿಯಾಗಿ ಧರೆಯಲ್ಲಿ ಜನಿಸಿದ ಮಹಾನ್ ಮಾನವತಾವಾದಿಯಾಗಿದ್ದಾರೆ.ಜಾತಿಯ ಅಂದಕಾರದಲ್ಲಿ ಮುಳುಗಿದ್ದ ಭಾರತೀಯ ಸಮ

ಪೋಟೊ

 ಹುಳಿಯಾರಿನ ಸುತ್ತಮುತ್ತಲಿನ ಬಂಕ್ ಗಳಲ್ಲಿ ಕಳೆದ ಒಂದು ವಾರಗಳಿಂದ ಸರಿಯಾಗಿ ಡಿಸೇಲ್ ದೊರೆಯದಿದ್ದು, ಮಂಗಳವಾರ ಬೆಳಿಗ್ಗೆ ಪಟ್ಟಣದ ಯೂಸುಪ್ ಖಾನ್ ಬಂಕ್ ಗೆ ಬಂದಿದ್ದ ಡೀಸೇಲ್ ಗಾಗಿ ಕ್ಯಾನು ಹಿಡಿದು ಬೆಳಗ್ಗಿನಿಂದಲೇ ಸಾಲುಗಟ್ಟಿನಿಂತಿರುವ ಟ್ರ್ಯಾಕ್ಟರ್ ಮಾಲೀಕರುಗಳು ಹಾಗೂ ವಾಹನಗಳು. ಹುಳಿಯಾರಿನ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದಿಂದ ಮಂಗಳವಾರ ಕಛೇರಿ ಆವರಣಾದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದರು.ಹಿರಿಯ ಕಟ್ಟಡ ಕಾರ್ಮಿಕ ದೊಡ್ಡದುರ್ಗಯ್ಯ,ಗೌರವ ಕಾರ್ಯದರ್ಶಿ ಸಂಘದ ಮಂಜುನಾಥ್, ಅಧ್ಯಕ್ಷ ಕರಿಯನಾಯ್ಕ,ಕಾರ್ಯದರ್ಶಿ ಸುರೇಶ್,ಪದಾಧಿಕಾರಿಗಳಾದ ಕೃಷ್ಣಮೂರ್ತಿ,ಸದ್ದಾಂ,ವಂಕಟೇಶ್,ರಾಜು,ಅಂಜನ್,ಶಂಕರಯ್ಯ ಇತರಿದ್ದರು .