ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ಸಂಜೆ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಅಂಗವಾಗಿ ಅಷ್ಟಮಂಡಲ ಮಂಟಪದಲ್ಲಿ ಶ್ರೀಬಸವೇಶ್ವರ ಭಾವಚಿತ್ರವನ್ನಿಟ್ಟು ನಗರದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು.
ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ನಡೆದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಉದ್ಘಾಟನೆಯನ್ನು ನಿಟ್ಟೂರು ಬಿ.ಕೋಡಿಹಳ್ಳಿಯ ಬಸವಭೃಂಗೇಶ್ವರ ಸ್ವಾಮೀಜಿಗಳು ನೆರವೇರಿಸಿದರು.ಜಿ.ಎಂ.ನೀಲಕಂಠಯ್ಯ,ಪ್ರಾಂಶುಪಾಲ ಜಿ.ಎನ್.ಬಸವರಾಜಪ್ಪ,ಗಂಗಣ್ಣ ,ಗಂಗಾಧರಯ್ಯ ಇದ್ದಾರೆ.
ಮಹಾನ್ ಮಾನವತಾವಾದಿ ಶ್ರೀ ಬಸವೇಶ್ವರರು 12 ನೇಶತಮಾನಕ್ಕಿಂತ ಮುಂಚೆ ಜಿಡ್ದುಗಟ್ಟಿದ್ದ ಸಮಾಜದಲ್ಲಿ ಹೊಸ ವಿಚಾರಗಳನ್ನು,ಬಸವ ತತ್ವಗಳನ್ನು ತಿಳಿಸುವ ಮೂಲಕ ಉಜ್ವಲ ಚೇತನವನ್ನು ನೀಡುವ ಮೂಲಕ ಬಸವಣ್ಣನವರು ಜಗಜ್ಯೋತಿಯಾಗಿ ಬೆಳಗಿದ್ದಾರೆ ಎಂದು ನಿಟ್ಟೂರು ಬಿ.ಕೋಡಿಹಳ್ಳಿಯ ಬಸವಭೃಂಗೇಶ್ವರ ಸ್ವಾಮೀಜಿಗಳು ಆಶೀರ್ವಚನದಲ್ಲಿ ತಿಳಿಸಿದರು.
ಹುಳಿಯಾರು ಹೋಬಳಿ ವಿರಶೈವ ಸಮಾಜದವತಿಯಿಂದ ಸೋಮವಾರ ಸಂಜೆ ಪಟ್ಟಣದ ಬಸವಭವನದಲ್ಲಿ ನಡೆದ ವಿಶ್ವಗುರು ಬಸವೇಶ್ವರರ ಜಯಂತಿ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ದಿವ್ಯಸಾನಿಧ್ಯವಹಿಸಿ ಅವರು ಮಾತನಾಡಿದರು.
ಬಸವಣ್ಣ ಕೇವಲ ವಿರಶೈವ ಜಾತಿಗೆ ಮಾತ್ರ ಸೀಮಿತವಾಗಿರಲಿಲ್ಲ, ಸರ್ವಧರ್ಮ ಸಹಿಷ್ಟುವಾಗಿ,ಜಾತಿವಿಡಂಬನೆಯಿಂದ ಮೇಲು,ಕೀಳು ಎಂದು ನಡೆದುಕೊಂಡು ಬರುತ್ತಿದ್ದ ಗೊಡ್ಡು ಸಂಪ್ರದಾಯಗಳನ್ನು ತೊಡೆದು ಹಾಕಿ,ಸಮಾಜದಲ್ಲಿ ಯಾವುದೇ ಜಾತಿಯಿಲ್ಲ ಇರುವುದು ಒಳ್ಳೆಯವರು ಮತ್ತು ಕೆಟ್ಟವರು ಮಾತ್ರ ಎಂದು ತಿಳಿಸಿಕೊಟ್ಟವರು.ಅಂದು ಸಮಾಜವನ್ನು ಅದೋಗತಿಗೆ ತಂದಿದ್ದ ವೇದ,ಆಗಮಗಳಲ್ಲಿನ ವಿಚಾರ್ಗಳನ್ನು ವಿಮರ್ಷಿಸಿ,ಅವುಗಳ ಬಿಗಿ ಬಂಧನದಿಂದ ಮುಗ್ದಜನರನ್ನು ಹೊರಬರುವಂತೆ ಮಾಡಿ,ದೇವರ ಬಗ್ಗೆ ಪ್ರಮಾಣಿಕವಾಗಿ ಜನತೆಗೆ ತಿಳಿಯುವಂತೆ ಮಾಡೀದರು.ಅಲ್ಲದೆ ಬಸವಣ್ಣನವರು ಸಂಕುಚಿತ ಮನೋಭಾವನೆ ಹೊಂದಿರದೆ,ಸಮಾಜದ ಜನರಿಗೆ ಆಗುತ್ತಿದ್ದ ಶೋಷಣೆಯ ವಿರುದ್ದ ತಾತ್ವಿಕ ಚಿಂತನೆಗಳನ್ನು ಮಾಡಿದವರು.ಇಂತಹ ಮಹಾನ್ ವ್ಯಕ್ತಿಯನ್ನು ಸ್ಮರಿಸುವುದು ಅತ್ಯಗತ್ಯ ಎಂದರು.
ಚಿತ್ರದುರ್ಗದ ಬಸವತತ್ವ ವಿದ್ಯಾಲಯದ ಪ್ರಾಂಶುಪಾಲ ಜಿ.ಎನ್.ಬಸವರಾಜಪ್ಪನವರು ತಮ್ಮ ಅನುಭಾವ ನಿವೇದನೆಯಲ್ಲಿ, ಇಂದಿನ ರಾಜಕೀಯ ವ್ಯಕ್ತಿಗಳಿಗೆ ಬಸವತತ್ವಗಳನ್ನು ತಿಳಿಸಬೇಕಿದೆ ಎಂದರು.ಪ್ರಜೆಗಳನ್ನು ರಕ್ಷಿಸಬೇಕಾದವರೇ ಪ್ರಜೆಗಳನ್ನು ಸುಳಿದು ತಿನ್ನುತ್ತಿದ್ದಾರೆ.ಅಂದು ಬಸವಣ್ಣ ಹೇಳಿದ ವಚನದಂತೆ ಮನೆ ಹತ್ತಿ ಹುರಿದರೆ ಇರಬಹುದು,ಭೂಮಿಹತ್ತಿ ಹುರಿದರೆ ಇರಲಾರದಂಬಂತೆ ಇಂದು ಸಮಾಜದಲ್ಲಿ ಉತ್ತಮ ಆಡಳಿತ ನಡೆಸಬೇಕಾದವರು ನುಂಗುಬಾಕರಾಗಿ ಜೈಲು ಸೇರುತ್ತಿದ್ದು,ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದರು. ಬಸವಣ್ಣ ಹುಟ್ಟಿನಿಂದಲೇ ಪವಾಡಗಳನ್ನು ಮಾಡಿದಂತವ, ಬೆಳೆಯುತ್ತಾ ಸಮಾಜದಲ್ಲಿ ನಡೆಯುತ್ತಿದ್ದ ವಿಚಾರಗಳ ಬಗ್ಗೆ ತಿಳಿದು,ಅಸಮಾನತೆಯ ವಿರುದ್ದ ಬಂಡೆದ್ದು,ವೈಧಿಕ ಧರ್ಮವನ್ನು ತೊರೆದು,ಸಮಾಜದಲ್ಲಿನ ಅಂಕುಡೊಂಕುಗಳನ್ನು ಗುರ್ತಿಸಿ,ಅವುಗಳ ನಿವಾರಣೆಯ ಬಗ್ಗೆ ಚಿಂತಿಸಿದವರು.ಅನುಭವ ಮಂಟಪದ ಸ್ಥಾಪನೆ ಮಾಡಿ ಜನತೆಗೆ ಬೇಕಾದ ವಿಷಯಗಳನ್ನು ಚಿಂತನ ಮಂಥನದ ಮೂಲಕ ಏಕದೇವತಾರಧನೆ,ಸ್ತ್ರೀಸಮಾನತೆಯನ್ನು ಸಾಧಿಸಲು ಮುಂದಾದವರು.ಬಸವಣ್ಣನವರು ಪ್ರತಿಪಾಧಿಸಿದ ತತ್ವಗಳು ನಮ್ಮದೇಶದಲ್ಲೇ ಅಲ್ಲದೇ ವಿದೇಶಗಳಲ್ಲು ಪ್ರಚಾರಗೊಂಡಿದ್ದು,ಅಂದಿನ ಬ್ರೀಟಿಷರೇ ಬಸವಣ್ಣನನ್ನ ಜಗಜ್ಯೋತಿ ಬಸವೇಶ್ವರ ಎಂದು ಕರೆದಿದ್ದಾರೆ ಎಂದರು.ಕಾಯಕದ ಮಹತ್ವ,ಶರಣರ ಸೇವೆಯಿಂದ ಸುಖ ಜೀವನವನ್ನು ನಡೆಸಬಹುದೆಂದು ತಿಳಿಸಿದ ಬಸವಣ್ಣ ಈಡಿ ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿದ್ದಾರೆ ಎಂದು ತಿಳಿಸಿದರು.
ಹುಳಿಯಾರಿನ ಅಕ್ಕಮಹಾದೇವಿ ಸಂಘ ಹಾಗೂ ಕೆಂಕೆರೆಯ ಬಸವಕೇಂದ್ರ ಶರಣೆಯರಿಂದ ವಚನಗಾಯನ ನಡೆಸಿ. ಅಷ್ಟಮಂಡಲ ಮಂಟಪದಲ್ಲಿ ಶ್ರೀಬಸವೇಶ್ವರ ಭಾವಚಿತ್ರವನ್ನಿಟ್ಟು ನಗರದ ರಾಜಬೀದಿಗಳಲ್ಲಿ ಉತ್ಸವ ನಡೆಸಲಾಯಿತು.
ಬಸವೇಶ್ವ ಪತ್ತಿನ ಸಹಕಾರಸಂಘದ ಅಧ್ಯಕ್ಷರಾದ ಜಿ.ಎಂ.ನೀಲಕಂಠಯ್ಯ ಸಮಾರಂಭದ ಅಧ್ಯಕ್ಷತೆವಹಿಸಿದ್ದು,ಬಸವಕೇಂದ್ರದ ಗಂಗಣ್ಣ ಪ್ರಾಸ್ತಾವಿಕ ನುಡಿ ನುಡಿದರು.ರಮೇಶ್ ನಿರೂಪಿಸಿ,ಶಿಕ್ಷಕ ಗಂಗಾಧರಯ್ಯ ಸ್ವಾಗತಿಸಿ,ಉಮೇಶ್ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ