ಹುಳಿಯಾರಿನ ಮುಸ್ಲಿಂ ಬಾಂಧವರು ಮದೀನಾ ಮಸೀದಿ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುವ ಮೂಲಕ ಟಿಪ್ಪು ಜಯಂತಿಯನ್ನು ಆಚರಿಸಿದರು.
ಇಲ್ಲಿನ ಮದೀನಾ ಮಸೀದಿ ಆವರಣ ಹಾಗೂ ಮುಸ್ಲಿಂರ ರುದ್ರಭೂಮಿ ಜಾಗದಲ್ಲಿ ಸಸಿ ನೆಡುವ ಮೂಲಕ ಮೈಸೂರ್ ಹುಲಿ ಟಿಪ್ಪು ಸುಲ್ತಾನರ ಪುಣ್ಯ ತಿಥಿಯನ್ನು ಮುಸ್ಲಿಂ ಬಾಂಧವರು ಹಾಗೂ ವಿವಿಧ ಸಂಘದವರು ಶುಕ್ರವಾರದಂದು ವಿಶಿಷ್ಟವಾಗಿ ಆಚರಿಸಿದರು.
ಈ ಸಂಧರ್ಭದಲ್ಲಿ ಮದೀನಾ ಹಾಗೂ ಜಮೀಯಾ ಮಸೀದಿಯ ಮುತುವಲ್ಲಿಯಾದ ಹಲ್ ಹಜ್ ಸೈಯ್ಯದ್ ಜಬೀವುಲ್ಲಾ ಅವರು ಮಾತನಾಡಿ, ಟಿಪ್ಪು ಒಬ್ಬ ಮಹಾನ್ ವ್ಯಕ್ತಿಯಾಗಿದ್ದು, ಈಡಿ ದೇಶವೇ ಆತನ್ನು ಗುರ್ತಿಸಿದೆ.ಈತನ ಪುಣ್ಯತಿಥಿಯನ್ನು ಸಸಿ ನೆಡುವ ಮೂಲಕ ಆಚರಿಸುತ್ತಿರುವುದು ತುಂಬಾ ಸಂತಸದ ಸಂಗತಿಯಾಗಿದ್ದು,ಪ್ರತಿವರ್ಷವೂ ಇದೇ ರೀತಿ ನಡೆಯಲಿ ಎಂದು ಹಾರೈಸಿದರು.
ಟಿಪ್ಪು ಬ್ರಿಟಿಷರ ವಿರುದ್ದ ಸಿಡಿದ್ದೇದ್ದ ಮೊದಲ ಮುಸ್ಲಿಂ ದೊರೆಯಾಗಿದ್ದು, ಭಾರತ ದೇಶಕ್ಕೆ ಸ್ವಾತಂತ್ರ ತಂದು ಕೊಡುವ ಛಲಹೊಂದಿದ್ದ ಈತನ ಪರಾಕಷ್ಟತೆಯನ್ನು ಎಲ್ಲರೂ ಸ್ಮರಿಸಬೇಕಿದೆ.ಅಲ್ಲದೇ ಮೈಸೂರು ಸಂಸ್ಥಾನದಲ್ಲಿ ಆಡಳಿತ ನಡೆಸಿ ಮೈಸೂರು ಹುಲಿ ಎಂದು ಮನೆ ಮಾತಾಗಿರುವ ಟಿಪ್ಪುವಿನ ನೆನಪು ಪ್ರತಿಯೊಬ್ಬ ಭಾರತೀಯರಲ್ಲಿಯೂ ಸದಾ ಇರಬೇಕು ಎಂದರು.ಈ ರೀತಿ ಪರಿಸರ ಕಾಳಜಿಯನ್ನು ಹೊಂದಿ ಸಸಿ ನೆಡುವ ಮೂಲಕ ಸಮಾರಂಭ ಆಚರಿಸುತ್ತಿರುವುದು ಶ್ಲಾಘನೀಯ,ಇದೇ ರೀತಿ ಪ್ರತಿಯೊಬ್ಬರು ಆಚರಿಸಬೇಕಿದೆ ಎಂದು ರೈತ ಸಂಘದ ಸತೀಶ್ ತಿಳಿಸಿದರು.
ಇಂದು ಸರ್ಕಾರ ದೇಶಕ್ಕಾಗಿ ಹೋರಾಡಿ ಮಹಾನ್ ವ್ಯಕ್ತಿಗಳಿಗಳನ್ನು ಗೌರವಿಸುತ್ತಿದೆ,ಆದರೆ ಟಿಪ್ಪುವನ್ನು ಮಾತ್ರ ಕಡೆಗಣಿಸಿದ್ದು,ಟಿಪ್ಪುವಿನ ಜಯಂತಿಯಾಗಲಿ,ಆತನ ಪುಣ್ಯತಿಥಿಯನ್ನಾಚರಿಸಲು ಯಾವುದೇ ರೀತಿಯ ಕ್ರಮ ಕೈಗೊಳ್ಳದೇ,ಒಬ್ಬ ದೇಶಭಕ್ತನನ್ನ ಕಡೆಗಣಿಸಿದೆ.ಇಂದು ಮೈಸೂರು ಸಂಸ್ಥಾನದ ಆರಸರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿರುವ ಸರ್ಕಾರ ಟಿಪ್ಪುವಿನ ಸಂಭಂದಿಕರಿಗೆ ಯಾವುದೇ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡೆ ತನ್ನ ವಿಫಲತೆಯನ್ನು ತೊರುತ್ತಿದೆ.ತಮ್ಮ ಕುಟುಂಬವನ್ನೇ ದೇಶದ ಏಳ್ಗೆಗಾಗಿ ಸಮರ್ಪಿಸಿದ ಟಿಪ್ಪುವಿನ ಜಯಂತಿ ಆಚರಣೆಗೆ ಸರ್ಕಾರ ಒಂದು ದಿನ ರಜೆಯನ್ನು ಘೋಷಿಸಿ,ದೇಶಭಕ್ತನಿಗೆ ಗೌರವ ನಮನ ಸಲ್ಲಿಸುವಂತೆ ಮಾಡಬೇಕೆಂದು ಸಮಾಜ ಸೇವಕ ಇಮ್ರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಸೀದಿಯ ಮೌಲಾನ ಅವರಿಂದ ಸಾಮೂಹಿಕ ಪ್ರಾಥನೆ ಸಲ್ಲಿಸಿ,ಸಸಿ ನೆಟ್ಟು,ನೀರು ಹಾಯಿಸಿದರು.
ರೈತಸಂಘದ ಮಲ್ಲಪ್ಪ, ಟಿಫ್ಫು ಸಂಘದ ಅಧ್ಯಕ್ಷ ಫಯಾಜ್,ಉಪಾಧ್ಯಕ್ಷ ಅಪ್ಸರ್,ಟಿಪ್ಪು ಅಭಿಮಾನಿ ಬಳಗದ ಸಯ್ಯದ್ ಸಾಬ್,ಶೌಕತ್, ಇರ್ಫಾನ್,ಅನ್ಸರ್,ಗೌಸಿ, ಸೇರಿದಂತೆ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ