ಹುಳಿಯಾರಿನ ದಲಿತ ಸಂರ್ಷ ಸಮಿತಿ ವತಿಯವರು ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ಆಚರಿಸಿದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಉಪಸ್ಥಿತರಿದ್ದ ದಲಿತ ಸಂರ್ಷ ಸಮಿತಿಯವರು.
ನಮ್ಮ ಸಮಾಜಕ್ಕೆ ಅಂಬೇಡ್ಕರ್ ನೀಡಿದ ಕೊಡುಗೆ ಅಪಾರ, ಭಾರತದಲ್ಲಿ ಲಿಖಿತ ಸಂವಿಧಾನದ ರಚನೆಯ ಮೂಲಕ ಸಂವಿಧಾನ ಶಿಲ್ಪಿ ಎಂಬ ಖ್ಯಾತಿ ಪಡೆದ ಅವರು ಹೊಂದಿದ್ದ ಚಿಂತನೆಗಳು,ತತ್ವಗಳು ಎಂದೆಂದಿಗೂ ಸರ್ವಕಾಲಿಕವಾದವೆಂದು ವಿಭಾಗೀಯ ದಲಿತ ಸಂರ್ಷ ಸಮಿತಿಯ ಸಂಚಾಲಕ ಕೋರಗೆರೆ ರಂಗಸ್ವಾಮಿ ತಿಳಿಸಿದರು.
ಹುಳಿಯಾರಿನ ದಲಿತ ಸಂರ್ಷ ಸಮಿತಿ ವತಿಯವರು ಅಂಬೇಡ್ಕರ್ ಭವನದಲ್ಲಿ ಸೋಮವಾರ ಸಂಜೆ ಆಚರಿಸಿದ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಸವೆದು ಕಳಚಿಕೊಂಡ ಕೊಂಡಿಗಳಂತಿರುವ ದಲಿತ ಸಂಘಟನೆಗಳು ಒಂದಕ್ಕೊಂದು ಪೂರಕವಾಗಿ ಬೆಸೆದುಕೊಂಡು,ಇಂದು ದಲಿತರ ಮೇಲಾಗುತ್ತಿರುವ ದೌರ್ಜನ್ಯದಿಂದ ಅಸಹಾಯಕರಾಗಿರುವ ದಲಿತರ ಬದುಕನ್ನು ಕಟ್ಟಿಕೊಡುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.
ದಲಿತ ಚಿಂತಕ ಹಾಗಲವಾಡಿ ಚಿಕ್ಕಣ್ಣ ತಮ್ಮ ಪ್ರಾಸ್ತಾವಿಕ ನಡಿಯಲ್ಲಿ, ಅಂಬೇಡ್ಕರ್ ಒಬ್ಬ ಮಹಾನ್ ವ್ಯಕ್ತಿ,ಈಡೀ ಭಾರತ ದೇಶಕ್ಕೆ ವ್ಯವಸ್ಥಿತವಾದ ಕಾನೂನು ಚೌಕಟ್ಟುಗಳನ್ನು ಕಟ್ಟಿಕೊಂಟಂತ ಅವರು ಬೆಳಕು ಕೊಡುವ ಜ್ಯೋತಿಯಾಗಿ ಮುಗ್ದ ಜನಕ್ಕೆ ಮೇಟಿಯಾಗಿ ಧರೆಯಲ್ಲಿ ಜನಿಸಿದ ಮಹಾನ್ ಮಾನವತಾವಾದಿಯಾಗಿದ್ದಾರೆ.ಜಾತಿಯ ಅಂದಕಾರದಲ್ಲಿ ಮುಳುಗಿದ್ದ ಭಾರತೀಯ ಸಮಾಜಕ್ಕೆ ಮಾನವೀಯತೆಯ ಸ್ಪರ್ಶ ನೀಡಿದ ಅಂಬೇಡ್ಕರರ ಚಿಂತನೆಗಳು ಪ್ರತಿಯೊಬ್ಬ ಭಾರತೀಯರಲ್ಲೂ ಅರಳಿ,ಸಮ ಸಮಾಜದ ಕಲ್ಪನೆ ಎಲ್ಲರ ಅಂತರಳದಲ್ಲಿ ಚಿಗುರೊಡೆಯಬೇಕು ಎಂದರು.
ಚಿ.ನಾ.ಹಳ್ಳಿ ದಲಿತ ಸಂರ್ಷ ಸಮಿತಿ ಅಧ್ಯಕ್ಷ ನಂದಿಹಳ್ಳಿ ಕೆಂಚಪ್ಪ ಅಧ್ಯಕ್ಷತೆವಹಿಸಿದ್ದ ಸಮಾರಂಭದಲ್ಲಿ ಚಿ.ನಾಹಳ್ಳಿ ದಲಿತ ಸಹಾಯವಾಣಿ ಅಧ್ಯಕ್ಷ ಹೊಸಳ್ಳಿ ಹನುಮಂತಯ್ಯ,ತಮ್ಮಡಿಹಳ್ಳಿ ನಾಗರಾಜು,ಹುಳಿಯಾರು ಘಟಕದ ಕಿರಣ್,ರಾಘವೇಂದ್ರ,ಗೀರೀಶ್,ಸಿದ್ದಯ್ಯ,ಲಕ್ಷ್ಮಯ್ಯ,ರಾಜಪ್ಪ ಸೇರಿದಂತೆ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ