ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಂಚ ಮುಕ್ತ ಚಿಕ್ಕನಾಯಕನಹಳ್ಳಿ ವೇದಿಕೆಯಿಂದ ದೊಡ್ಡಬಿದರೆ ಪಂಚಾಯ್ತಿಗೆ ಭೇಟಿ

ಹುಳಿಯಾರು: ಲಂಚ ಮುಕ್ತ ಚಿಕ್ಕನಾಯಕನಹಳ್ಳಿ ವೇದಿಕೆಯಿಂದ 3ನೇ ಹಂತದ ಅಭಿಯಾನದ ಅಂಗವಾಗಿ ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮಪಂಚಾಯ್ತಿಗೆ ಭೇಟಿ ನೀಡಲಾಯಿತು.              ದೊಡ್ಡಬಿದರೆ ಗ್ರಾಮ ಪಂಚಾಯ್ತಿಗೆ ಉತ್ತಮ ಕಟ್ಟಡವಿದ್ದರೂ ಸಹ ಅವ್ಯವಸ್ತೆಯಿಂದ ಕೂಡಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರಿನ ಮಹಾಪೂರವೇ ಹರಿದುಬಂತು. ನೀರು ವಿತರಕರ ಕಾರ್ಯವೈಖರಿ ಸೇರಿದಂತೆ ಅನೇಕ ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂತು.             ಗ್ರಾಮಪಂಚಾಯ್ತಿಯಲ್ಲಿನ ಕಾರ್ಯವೈಖರಿ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವೇದಿಕೆಯ ಜಿಲ್ಲಾ ಸಂಘಟಕ ಮಲ್ಲೀಕಾರ್ಜುನಯ್ಯ ಸಾರ್ವಜನಿಕರ ಗಮನಕ್ಕೆ ಯಾವುದೇ ಮಾಹಿತಿಗಳನ್ನು ನೀಡದೇ ಬಹಳ ಗೌಪ್ಯತೆಯನ್ನು ಕಾಪಾಡಿಕೊಂಡಿರುವುದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದಂತೆ ಎಂದರಲ್ಲದೆ ಸಾರ್ವಜನಿಕರಿಗೆ ಸಕಾಲದಲ್ಲಿ ಪಾರದರ್ಶಕ ಸೇವೆ ನೀಡುವಂತೆ ತಾಕೀತು ಮಾಡಿದರು.ಅಲ್ಲದೆ ಎಸ್ಸಿ ಎಸ್ಟಿ ಅನುದಾನವನ್ನು ಇನ್ನೂ ಬಳಕೆ ಮಾಡದಿರುವ ಬಗ್ಗೆ ಆಕ್ಷೇಪಿಸಿ ಅರ್ಹ ಪ್ರತಿಭಾವಂತರನ್ನು ಗುರುತಿಸಿ ಲ್ಯಾಪ್ ಟ್ಯಾಪ್ ಗಳನ್ನು ನೀಡಿ ಅವರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವಂತೆ ಸೂಚಿಸಿದರು        ಈ ಸಂದರ್ಭದಲ್ಲಿ ಕಾಂತಪ್ಪ,ಬಸವರಾಜು,ಕೆಂಕೆರೆ ನಾಗಣ್ಣ,ಶ್ರೀಧರ್,ಮಹ್ಮದ್ ಸಜ್ಜಾದ್ ಮತ್ತಿತರರಿದ್ದರು.

ಹುಳಿಯಾರು ಸಮೀಪ ಬರದಲೇಪಾಳ್ಯದಲ್ಲಿ ಕಂಡುಬಂದ ಚಿರತೆ

ಕಾರ್ಯಚರಣೆಯಲ್ಲಿ ಕೊನೆಗೂ ಸೆರೆ ಸಿಕ್ಕ ಚಿರತೆ --------------------------- ಹುಳಿಯಾರು: ಇಬ್ಬರನ್ನು ಗಾಯಗೊಳಿಸಿ ದಾಳಿಂಬೆ ತೋಟದಲ್ಲಿ ಅಡಗಿಕುಳಿತಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಕಾರ್ಯಾಚರಣೆ ನಡೆಸಿ ಕಡೆಗೂ ಸೆರೆಹಿಡಿದ ಘಟನೆ ಹುಳಿಯಾರು ಪೋಲಿಸ್ ಠಾಣಾ ವ್ಯಾಪ್ತಿಯ ಕೆಂಕೆರೆ ಮಜುರೆ ಬರದಲೇ ಪಾಳ್ಯದಲ್ಲಿ ಭಾನುವಾರ ಸಂಜೆ ನಡೆದಿದೆ.          ಭಾನುವಾರ ಮುಂಜಾನೆ ೭.೩೦ರ ಸಮಯದಲ್ಲಿ ಕೆಂಕೆರೆ ಸಮೀಪದ ದುರ್ಗದಸೀಮೆ ಪಾಳ್ಯದಲ್ಲಿ ದಾಳಿಂಬೆ ತೋಟಕ್ಕೆ ಹೋಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಚಿರತೆ ನಂತರ ೧೦.೩೦ರ ಸಮಯದಲ್ಲಿ ಬರದಲೇಪಾಳ್ಯದಲ್ಲಿ ಟೊಮೆಟೊ ಗಿಡಕ್ಕೆ ನೀರು ಹಾಯಿಸಲು ಹೋಗಿದ್ದ ವ್ಯಕ್ತಿಯ ಮೇಲೆ ಎರಗಿ ಗಾಯಗೊಳಿಸಿ ನಂತರ ಅಲ್ಲೆಯಿದ್ದ ದಾಳಿಂಬೆ ತೋಟಕ್ಕೆ ಹೊಕ್ಕಿದೆ.          ಅಷ್ಟರಲ್ಲಾಗಲೇ ಚಿರತೆ ಸುದ್ದಿ ಎಲ್ಲಡೆ ಹಬ್ಬಿ ಅಪಾರ ಸಂಖ್ಯೆಯ ಜನ ಸೇರಿದ್ದರಿಂದ ಹಾಗೂ ಅರಣ್ಯ ಇಲಾಖೆಯವರು ಆಗಮಿಸಿ ಕಾರ್ಯಾಚರಣೆಗೆ ಇಳಿದಿದ್ದರಿಂದ ದಾಳಿಂಬೆ ತೋಟದಿಂದ ಹೊರಗೆ ಬರಲಾರದೆ ಗಾಬರಿಗೊಂಡು ಸಂಜೆಯವರೆಗೂ ಒಂದೇ ಸ್ಥಳದಲ್ಲಿ ಕುಳಿತಿದೆ. ಚಿ           ರತೆ ಹಿಡಿಯಲು ಬಲೆ ಹೆಣೆದ ಅರಣ್ಯ ಇಲಾಖೆ ಸಿಬ್ಬಂದಿ ತೋಟದ ಸುತ್ತಲೂ ಬಲೆ ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿತ್ತು.ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹಾಸನದಿಂದ ಅರವಳಿಕೆ ತಜ್ಞರಾದ ಡಾ.ಮುರಳಿ ಆಗಮಿಸಿದ

ಹುಳಿಯಾರು: ಶ್ರದ್ಧಾಭಕ್ತಿಯ ಶಿವರಾತ್ರಿ

ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯ ಹಲವೆಡೆ ಶುಕ್ರವಾರದಂದು ಮಹಾಶಿವರಾತ್ರಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.          ಪಟ್ಟಣದ ಮಲ್ಲೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ,ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ, ವಿಪ್ರ ಸಮಾಜದ ಸೀತಾರಾಮ ಕಲ್ಯಾಣ ಮಂದಿರದಲ್ಲಿ, ತಿರುಮಲಾಪುರದ ಚಂದ್ರಮೌಳೇಶ್ವರ ದೇಗುಲದಲ್ಲಿ, ಕೆಂಕೆರೆಯ ಕಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ,ಸೂರಗೊಂಡನಹಳ್ಳಿಯ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಪರಶಿವನಿಗೆ ಮುಂಜಾನೆಯಿಂದಲೇ ವಿಶೇಷ ಪೂಜಾಕೈಂಕರ್ಯಗಳು ನಡೆಯಿತು. ಶಿವಲಿಂಗಕ್ಕೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಂಚಾಮೃತಾಭಿಷೇಕ, ಜಾವದ ಪೂಜೆ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.ಎಲ್ಲಡೆಯೂ ಶಿವರಾತ್ರಿ ಸಂಭ್ರಮ ಮನೆ ಮಾಡಿತ್ತು.ಎಲ್ಲಾ ದೇವಾಲಯಗಳಲ್ಲೂ ಬೆಳಿಗ್ಗೆಯಿಂದಲೇ ಭಕ್ತರು ತೆರಳಿ ಶಿವನ ದರ್ಶನ ಪಡೆಯುತ್ತಿದಿದ್ದು ಸಾಮಾನ್ಯವಾಗಿತ್ತು.             ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ಪ್ರಾರಂಭವಾದ ದರ್ಶನದಲ್ಲಿ ಅಲಂಕೃತ ಸ್ವಾಮಿಯನ್ನು ನೋಡಲು ಅಪಾರ ಸಂಖ್ಯೆಯ ಭಕ್ತಾಧಿಗಳು ತಂಡೋಪತಂಡವಾಗಿ ಆಗಮಿಸಿದ್ದು , ಸರದಿ ಸಾಲಿನಲ್ಲಿ ಸಾಗುವ ಮೂಲಕ ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿದರು.ಬೆಳಗಿನಜಾವ ಅರ್ಚಕ ವೀರೇಶ್ ಪೌರೋಹಿತ್ಯದಲ್ಲಿ ಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹನ್ಯಾಸಪೂರಕ ಅಭಿಷ

ಹುಳಿಯಾರು ಕಾರೇಹಳ್ಳಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ

ಮಾರ್ಚ್ ಅಂತ್ಯದವರೆಗೆ ಮೇವು ಲಭ್ಯ: ಮೇವಿನ ಸಮಸ್ಯೆ ಪರಿಹರಿಸಲು ಮೇವು ಬೆಳೆಯಲು ಸೂಚನೆ ಹುಳಿಯಾರು: ತಾಲ್ಲೂಕಿನಲ್ಲಿ ಒಟ್ಟು ೬ ಗೋಶಾಲೆಗಳನ್ನು ತೆರೆಯಲಾಗಿದ್ದು ಮಾರ್ಚ್ ತಿಂಗಳಿನವರೆಗೆ ಮೇವಿನ ಸಮಸ್ಯೆ ತಲೆದೋರದಂತೆ ತಾಲ್ಲೂಕ್ ಆಡಳಿತ ನಿಭಾಯಿಸಲಿದ್ದು ಮುಂಜಾಗ್ರತೆಯಾಗಿ ಬೋರನಕಣಿವೆ ಕಣಿವೆ ಜಲಾಶಯದ ನೀರು ಬಳಸಿ ಅಚ್ಚುಕಟ್ಟುದಾರರು ಮೇವು ಬೆಳದಲ್ಲಿ ಹೆಚ್ಚಿನ ಸಮಸ್ಯೆ ತಲೆದೋರದಂತೆ ಬರನಿರ್ವಹಣೆ ಮಾಡಬಹುದಾಗಿದ್ದು ರೈತರು ಸಹಕರಿಸುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ರೈತರಲ್ಲಿ ಮನವಿ ಮಾಡಿದರು.        ಬರ ನಿರ್ವಹಣೆಗೆ ಸಂಬಂಧಪಟ್ಟಂತೆ ಬೋರನಕಣಿವೆ ವ್ಯಾಪ್ತಿಯ ಗಾಣಧಾಳು,ಹೊಯ್ಸಳಕಟ್ಟೆ,ದಸೂಡಿ ಭಾಗದಲ್ಲಿ ಜಲಾಶಯದ ನೀರು ಹರಿಸಿ ಮೇವು ಬೆಳೆಯಲು ರೈತರ ಮನವೊಲಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಕಾರೇಹಳ್ಳಿ ದೇವಸ್ಥಾನದ ಆವರಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ತಾಲ್ಲೂಕ್ ಆಡಳಿತದಿಂದ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.        ತಾಲ್ಲೂಕಿನ ಗೋಶಾಲೆಗಳಲ್ಲಿ ಸಧ್ಯಕ್ಕೆ ಮೇವಿನ ಲಭ್ಯತೆಯಿದ್ದು ರಾಜ್ಯದೆಲ್ಲೆಡೆ ತೀವ್ರ ಬರ ಪರಿಸ್ಥಿತಿ ತಲೆದೋರಿರುವುದರಿಂದ ಎಲ್ಲೂ ಮೇವು ಸಿಗದ ಪರಿಸ್ಥಿತಿ ಇದೆ.ಹೊರರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದಲ್ಲೂ ಮೇವು ತರಲಿಕ್ಕೆ ನಿರ್ಬಂಧವಿದೆ.ಹೀಗಾಗಿ ನಮಗೆ ಮೇ ತಿಂಗಳ ಕಡೆಯವರೆಗೂ ಮೇವು ಸರಬರಾಜು ಮಾಡಲು ಟೆಂಡರ್ ಪಡೆದಿದ್ದ ವ್

"ಕಾರು ಓಡಿಸಿ-ಹಣ ಗಳಿಸಿ"ಎಂಬ ಸ್ಕೀಮ್ ನ ನಯವಂಚಕ ಪೋಲಿಸರ ವಶದಲ್ಲಿ

ಹುಳಿಯಾರು ಭಾಗದಲ್ಲಿ ಕೋಟಿ ರೂ ಗೂ ಅಧಿಕ ವಂಚನೆ ಹುಳಿಯಾರು: ಕಾರು,ಲಾರಿ ಮುಂತಾದ ವಾಹನಗಳ ಮೇಲೆ ಕಂಪನಿಗಳ ಪ್ರಚಾರದ ಸ್ಟಿಕ್ಕರ್ ಅಂಟಿಸಿದರೆ ಪ್ರತಿ ತಿಂಗಳು ಇಂತಿಷ್ಟು ಹಣ ಪಾವತಿ ಮಾಡುತ್ತೇವೆ ಹಾಗೂ ಇದಕ್ಕಾಗಿ ಜಿಪಿಎಸ್ ಅಳವಡಿಸಲು ವಾಹನ ಮಾಲಿಕರು ತಲಾ ೨೫ ಸಾವಿರ ಠೇವಣಿ ನೀಡಬೇಕು ಎಂದು ಮರುಳು ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದ ರಾಜಸ್ಥಾನ ಮೂಲದ ವೀರೇಂದ್ರ ಶರ್ಮನನ್ನು ಹುಳಿಯಾರು ಹೋಬಳಿ ಲಕ್ಕೇನಹಳ್ಳಿ ಗ್ರಾಮಸ್ಥರು ಪೋಲಿಸರ ವಶಕ್ಕೆ ನೀಡಿದ್ದಾರೆ. ಆರೋಪಿ ವೀರೇಂದ್ರ ಶರ್ಮ        ವಂಚಕ ವೀರೇಂದ್ರ ಶರ್ಮ ತುಮಕೂರಿನ ಶಿರಾ ರಸ್ತೆಯಲ್ಲಿ ನನಸು ಕ್ರಿಯೇಷನ್ ಎಂಬ ಹೈಟೆಕ್ ಕಛೇರಿ ತೆರೆದು ಕಾರು ಹೊಂದಿರುವ ಗ್ರಾಹಕರಿಗೆ "ಕಾರು ಓಡಿಸಿ-ಹಣ ಗಳಿಸಿ"ಎಂಬ ಸ್ಕೀಮ್ ಆರಂಭಿಸಿದ್ದ.ಕಾರುಗಳ ಮಾಲಿಕರುಗಳಿಗೆ ತಮ್ಮ ಕಾರುಗಳ ಮೇಲೆ ವಿವಿಧ ಕಂಪನಿಗಳ ಪ್ರಚಾರದ ಸ್ಟಿಕ್ಕರ್ ಅಂಟಿಸಿಕೊಂಡರೆ ಪ್ರತಿತಿಂಗಳು ನಿಗದಿಯಾದ ಹಣ ಪಾವತಿಸುವ ಆಮೀಷ ಒಡ್ಡಿ ಇದಕ್ಕಾಗಿ ಇಂತಿಷ್ಟು ಹಣ ಮುಂಗಡವಾಗಿ ಕಾರು ಮಾಲೀಕರು ನೀಡಬೇಕೆಂದು ತಿಳಿಸಿ ಪ್ರತಿ ಹಳ್ಳಿಹಳ್ಳಿಗಳಲ್ಲೂ ವ್ಯಾಪಕ ಪ್ರಚಾರ ನಡೆಸಿದ್ದ.        ಕಾರಿನ ಬೆಲೆ ೪.೫ ಲಕ್ಷವಿದ್ದರೆ ೨೫ ಸಾವಿರ ಠೇವಣಿ ವಾಹನ ಮಾಲೀಕರು ನೀಡಿದಲ್ಲಿ ಪ್ರತಿ ತಿಂಗಳು ಆರು ಸಾವಿರ ರೂಪಾಯಿ ಹಣ ಪಾವತಿ ಮಾಡುವುದಾಗಿಯೂ ಹಾಗೂ ಅದಕ್ಕೂ ಮೇಲ್ಪಟ್ಟ ವಾಹನದವರು ಐವತ್ತುಸಾವಿರ ಠೇವಣಿ ಇಟ್ಟಲ್ಲಿ ಪ್ರತಿತಿಂಗಳ

೮೬ ನೇ ದಿನಕ್ಕೆ ರೈತರ ಧರಣಿ

೮೬ ನೇ ದಿನಕ್ಕೆ ರೈತರ ಧರಣಿ ಮಾಚಿದೇವ ಸಂಸ್ಥಾನದ ಶ್ರೀಬಸವಮಾಚಿದೇವ ಸ್ವಾಮಿ ಬೆಂಬಲ ಹುಳಿಯಾರು: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಸ್ತುಸ್ಥಿತಿ ಅರಿತು ಈ ಕೂಡಲೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳುವಂತೆ ಚಿತ್ರದುರ್ಗ ಜಿಲ್ಲೆಯ ಮಾಚಿದೇವ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.          ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ೮೬ನೇ ದಿನದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.             ರೈತರು ನ್ಯಾಯಯುತವಾಗಿ ನಡೆಸುತ್ತರುವ ಹೋರಾಟಕ್ಕೆ ನಿಜವಾಗಿಯು ಜಯಸಿಗಲೇ ಬೇಕು. ಇವರ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವಂತೆ ತಿಳಿಸಿದರು.                      ನಮ್ಮದು ರೈತ ಪರ ಸರಕಾರವೆಂದು ರಾಜಕೀಯ ನಾಯಕರು ಕೇವಲ ಭಾಷಣದಲ್ಲಿ ಹೇಳಿದರೆ ಸಾಲದು ಕಾರ್ಯರೂಪಕ್ಕೆ ತರುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.ರೈತರು ಬೆಳೆದಂತ ಪ್ರತಿಯೊಂದು ಪದಾರ್ಥಗಳಿಗೂ ಸಹಾ ನ್ಯಾಯಯುತವಾದ ಬೆಲೆ ದೊರೆತಾಗ ಮಾತ್ರ ರೈತರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಲಿದ್ದು ಈಗಲಾದರು ಸರಕಾರಗಳು ಎಚ್ಚೆತ್ತುಕೊಂಡು ರೈತರು ಬೆಳೆದ ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಂತೆ ಒತ್ತಾಯಿಸಿದರು.             ಈ ವೇಳೆ ಮಡಿವ

ಸ್ನೇಹಿತನನ್ನು ಕೊಲೆ ಮಾಡಿ ಪರಾರಿಯಾಗಿದ್ದ ೩ ಜನ ಆರೋಪಿಗಳ ಬಂಧನ

ಹುಳಿಯಾರು: ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುನ್ (೨೪) ಎಂಬ ಯುವಕನ ಕೊಲೆ ಪ್ರಕರಣವನ್ನು ಭೇದಿಸಿರುವ ಹುಳಿಯಾರು ಪೋಲಿಸರು ಈ ಸಂಬಂಧ ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ.        ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುನ್ ಎಂಬಾತನು ಕಳೆದೊಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು ನಂತರ ಈತ ಕೊಲೆಯಾಗಿರುವುದು ತನಿಖೆಯಿಂದ ತಿಳಿದುಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯರವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ವೇಣುಗೋಪಾಲ್ ನೇತೃತ್ವದಲ್ಲಿ ಸಿ.ಪಿ.ಐ.ಮಾರಪ್ಪ ಮತ್ತು ಪಿ.ಎಸ್.ಐ.ಪ್ರವೀಣ್‌ಕುಮಾರ್ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.            ಕೊಲೆ ಜಾಡು ಹಿಡಿದ ಪೋಲಿಸರಿಗೆ ಕೊಲೆ ಮಾಡಿರುವವರು ಈತನ ಸ್ನೇಹಿತರುಗಳೆ ಎಂದು ತಿಳಿದುಬಂದಿದೆ.ಈ ಸಂಬಂಧ ರಂಗಾಪುರ ಗ್ರಾಮದ ರವಿ, ಗೂಬೇಹಳ್ಳಿ ಗ್ರಾಮದ ರಮೇಶ, ನಂದೀಹಳ್ಳಿ ಗ್ರಾಮದ ಬಸವರಾಜು ಎಂಬುವವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.                   ಮೃತ ಮಲ್ಲಿಕಾರ್ಜುನಯ್ಯ ತನ್ನ ದೊಡ್ಡಪ್ಪನ ಮಗಳ ಹಿಂದೆ ಬಿದ್ದಿದ್ದರಿಂದ ಆತನನ್ನು ಮುಗಿಸಲು ಸಂಚು ರೂಪಿಸಿದ ಪ್ರಮುಖ ಆರೋಪಿ ರಂಗಾಪುರ ಗ್ರಾಮದ ರವಿ ತನ್ನ ಸ್ನೇಹಿತರಾದ ಗೂಬೆಹಳ್ಳಿಯ ರಮೇಶ್ ಹಾಗು ನಂದಿಹಳ್ಳಿಯ ಬಸವರಾಜ್ ರವರ ಜೊತೆಗೂಡಿ ಮಲ್ಲಿಕಾರ್ಜುನಯ್ಯನನ್ನು ಹಣ ಕೊಡುವುದಾಗಿ ತಿಳಿಸಿ ಹುಳಿಯಾರಿಗೆ ಕರೆಸಿಕೊಂಡು ಮದ್ಯ