ಹುಳಿಯಾರು:ಲಂಚ ಮುಕ್ತ ಚಿಕ್ಕನಾಯಕನಹಳ್ಳಿ ವೇದಿಕೆಯಿಂದ 3ನೇ ಹಂತದ ಅಭಿಯಾನದ ಅಂಗವಾಗಿ ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮಪಂಚಾಯ್ತಿಗೆ ಭೇಟಿ ನೀಡಲಾಯಿತು.
ದೊಡ್ಡಬಿದರೆ ಗ್ರಾಮ ಪಂಚಾಯ್ತಿಗೆ ಉತ್ತಮ ಕಟ್ಟಡವಿದ್ದರೂ ಸಹ ಅವ್ಯವಸ್ತೆಯಿಂದ ಕೂಡಿದ್ದು ಇಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರಿನ ಮಹಾಪೂರವೇ ಹರಿದುಬಂತು. ನೀರು ವಿತರಕರ ಕಾರ್ಯವೈಖರಿ ಸೇರಿದಂತೆ ಅನೇಕ ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂತು.
ಗ್ರಾಮಪಂಚಾಯ್ತಿಯಲ್ಲಿನ ಕಾರ್ಯವೈಖರಿ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ವೇದಿಕೆಯ ಜಿಲ್ಲಾ ಸಂಘಟಕ ಮಲ್ಲೀಕಾರ್ಜುನಯ್ಯ ಸಾರ್ವಜನಿಕರ ಗಮನಕ್ಕೆ ಯಾವುದೇ ಮಾಹಿತಿಗಳನ್ನು ನೀಡದೇ ಬಹಳ ಗೌಪ್ಯತೆಯನ್ನು ಕಾಪಾಡಿಕೊಂಡಿರುವುದು ಭ್ರಷ್ಟಾಚಾರಕ್ಕೆ ನಾಂದಿ ಹಾಡಿದಂತೆ ಎಂದರಲ್ಲದೆ ಸಾರ್ವಜನಿಕರಿಗೆ ಸಕಾಲದಲ್ಲಿ ಪಾರದರ್ಶಕ ಸೇವೆ ನೀಡುವಂತೆ ತಾಕೀತು ಮಾಡಿದರು.ಅಲ್ಲದೆ ಎಸ್ಸಿ ಎಸ್ಟಿ ಅನುದಾನವನ್ನು ಇನ್ನೂ ಬಳಕೆ ಮಾಡದಿರುವ ಬಗ್ಗೆ ಆಕ್ಷೇಪಿಸಿ ಅರ್ಹ ಪ್ರತಿಭಾವಂತರನ್ನು ಗುರುತಿಸಿ ಲ್ಯಾಪ್ ಟ್ಯಾಪ್ ಗಳನ್ನು ನೀಡಿ ಅವರೂ ಸಮಾಜದ ಮುಖ್ಯ ವಾಹಿನಿಗೆ ಬರಲು ಅವಕಾಶ ನೀಡಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವಂತೆ ಸೂಚಿಸಿದರು
ಈ ಸಂದರ್ಭದಲ್ಲಿ ಕಾಂತಪ್ಪ,ಬಸವರಾಜು,ಕೆಂಕೆರೆ ನಾಗಣ್ಣ,ಶ್ರೀಧರ್,ಮಹ್ಮದ್ ಸಜ್ಜಾದ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ