೮೬ ನೇ ದಿನಕ್ಕೆ ರೈತರ ಧರಣಿ
ಮಾಚಿದೇವ ಸಂಸ್ಥಾನದ ಶ್ರೀಬಸವಮಾಚಿದೇವ ಸ್ವಾಮಿ ಬೆಂಬಲ
ಹುಳಿಯಾರು:ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಸ್ತುಸ್ಥಿತಿ ಅರಿತು ಈ ಕೂಡಲೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳುವಂತೆ ಚಿತ್ರದುರ್ಗ ಜಿಲ್ಲೆಯ ಮಾಚಿದೇವ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಬಸವ ಮಾಚಿದೇವ ಸ್ವಾಮೀಜಿ ಒತ್ತಾಯಿಸಿದರು.
ಹುಳಿಯಾರಿನ ಕೃಷಿ ಉತ್ಪನ್ನಮಾರುಕಟ್ಟೆಯ ಆವರಣದಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ೮೬ನೇ ದಿನದ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರು ನ್ಯಾಯಯುತವಾಗಿ ನಡೆಸುತ್ತರುವ ಹೋರಾಟಕ್ಕೆ ನಿಜವಾಗಿಯು ಜಯಸಿಗಲೇ ಬೇಕು. ಇವರ ಹೋರಾಟಕ್ಕೆ ಪ್ರತಿಯೊಬ್ಬರು ಕೈ ಜೋಡಿಸುವಂತೆ ತಿಳಿಸಿದರು.
ನಮ್ಮದು ರೈತ ಪರ ಸರಕಾರವೆಂದು ರಾಜಕೀಯ ನಾಯಕರು ಕೇವಲ ಭಾಷಣದಲ್ಲಿ ಹೇಳಿದರೆ ಸಾಲದು ಕಾರ್ಯರೂಪಕ್ಕೆ ತರುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ.ರೈತರು ಬೆಳೆದಂತ ಪ್ರತಿಯೊಂದು ಪದಾರ್ಥಗಳಿಗೂ ಸಹಾ ನ್ಯಾಯಯುತವಾದ ಬೆಲೆ ದೊರೆತಾಗ ಮಾತ್ರ ರೈತರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗಲಿದ್ದು ಈಗಲಾದರು ಸರಕಾರಗಳು ಎಚ್ಚೆತ್ತುಕೊಂಡು ರೈತರು ಬೆಳೆದ ಕೊಬ್ಬರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ಈ ವೇಳೆ ಮಡಿವಾಳ ಸಮಾಜದ ರಾಷ್ಟೀಯ ಅಧ್ಯಕ್ಷ ಬಾಲಾಜಿ ಸಿಂಧೇ, ಉಪಾಧ್ಯಕ್ಷ ಹೆಂಜಾರಪ್ಪ, ತಿಪಟೂರು ಶಂಕರಪ್ಪ, ಚಿ.ನಾ.ಹಳ್ಳಿ, ತಾಲ್ಲೂಕು ಅಧ್ಯಕ್ಷ ನಟರಾಜು, ಹೋಬಳಿ ಅಧ್ಯಕ್ಷ ಪರಮೇಶ್, ಪ್ರಸನ್ನಕುಮಾರ್, ರಂಗಸ್ವಾಮಿ, ರಮೇಶ್, ಭರತ್. ಕುಮಾರ್, ರಘುನಾಥ್, ಶ್ರೀನಿವಾಸ್ ಹಾಗೂ ರೈತಸಂಘದ ಕೆಂಕೆರೆ ಸತೀಶ್, ಮಲ್ಲಿಕಣ್ಣ, ಗಂಗಣ್ಣ, ಓಂಕಾರಪ್ಪ, ನಂದಿಹಳ್ಳಿ ಶಿವಣ್ಣ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ