ಹುಳಿಯಾರು: ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುನ್ (೨೪) ಎಂಬ ಯುವಕನ ಕೊಲೆ ಪ್ರಕರಣವನ್ನು ಭೇದಿಸಿರುವ ಹುಳಿಯಾರು ಪೋಲಿಸರು ಈ ಸಂಬಂಧ ಕೊಲೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ಯಶಸ್ವೀಯಾಗಿದ್ದಾರೆ.
ದೊಡ್ಡಬಿದರೆ ಗ್ರಾಮದ ಮಲ್ಲಿಕಾರ್ಜುನ್ ಎಂಬಾತನು ಕಳೆದೊಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದು ನಂತರ ಈತ ಕೊಲೆಯಾಗಿರುವುದು ತನಿಖೆಯಿಂದ ತಿಳಿದುಬಂದ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯರವರ ಮಾರ್ಗದರ್ಶನದಲ್ಲಿ ಡಿ.ವೈ.ಎಸ್.ಪಿ. ವೇಣುಗೋಪಾಲ್ ನೇತೃತ್ವದಲ್ಲಿ ಸಿ.ಪಿ.ಐ.ಮಾರಪ್ಪ ಮತ್ತು ಪಿ.ಎಸ್.ಐ.ಪ್ರವೀಣ್‌ಕುಮಾರ್ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಕೊಲೆ ಜಾಡು ಹಿಡಿದ ಪೋಲಿಸರಿಗೆ ಕೊಲೆ ಮಾಡಿರುವವರು ಈತನ ಸ್ನೇಹಿತರುಗಳೆ ಎಂದು ತಿಳಿದುಬಂದಿದೆ.ಈ ಸಂಬಂಧ ರಂಗಾಪುರ ಗ್ರಾಮದ ರವಿ, ಗೂಬೇಹಳ್ಳಿ ಗ್ರಾಮದ ರಮೇಶ, ನಂದೀಹಳ್ಳಿ ಗ್ರಾಮದ ಬಸವರಾಜು ಎಂಬುವವರನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಮೃತ ಮಲ್ಲಿಕಾರ್ಜುನಯ್ಯ ತನ್ನ ದೊಡ್ಡಪ್ಪನ ಮಗಳ ಹಿಂದೆ ಬಿದ್ದಿದ್ದರಿಂದ ಆತನನ್ನು ಮುಗಿಸಲು ಸಂಚು ರೂಪಿಸಿದ ಪ್ರಮುಖ ಆರೋಪಿ ರಂಗಾಪುರ ಗ್ರಾಮದ ರವಿ ತನ್ನ ಸ್ನೇಹಿತರಾದ ಗೂಬೆಹಳ್ಳಿಯ ರಮೇಶ್ ಹಾಗು ನಂದಿಹಳ್ಳಿಯ ಬಸವರಾಜ್ ರವರ ಜೊತೆಗೂಡಿ ಮಲ್ಲಿಕಾರ್ಜುನಯ್ಯನನ್ನು ಹಣ ಕೊಡುವುದಾಗಿ ತಿಳಿಸಿ ಹುಳಿಯಾರಿಗೆ ಕರೆಸಿಕೊಂಡು ಮದ್ಯಪಾನಮಾಡಿಸಿ ಆತನನ್ನು ತಿಮ್ಲಾಪುರ ಕೆರೆಯ ಹಿಂಬಾಗಕ್ಕೆ ಕರೆದೊಯ್ದು ಅವನು ಧರಿಸಿದ್ದ ಲುಂಗಿಯಿಂದ ಕುತ್ತಿಗೆಗೆ ಬಿಗಿದು ಸಾಯಿಸಿ ಪೊದೆಯೊಳಗೆ ಎಸೆದು ಹೋಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿರುತ್ತಾರೆ.
ಆರೋಪಿಗಳನ್ನು ಚಿಕ್ಕನಾಯಕನಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತ್ವರಿತವಾಗಿ ಆರೋಪಿಗಳ ಪತ್ತೆ ಹಚ್ಚಲು ನೆರವಾದ ಎ.ಎಸ್.ಐ.ರಾಜಣ್ಣ, ಹೆಡ್ ಕಾನ್ಸ್ ಟೇಬಲ್‌ಗಳಾದ ರಂಗಧಾಮಯ್ಯ, ಎಂ.ಆರ್.ಶಂಕರ್, ಸೋಮಣ್ಣ, ಕೆ.ಜಿ.ಶಂಕರಪ್ಪ, ಮುಕ್ತಿಯಾರ್, ರಂಗಸ್ವಾಮಿ, ಶ್ರೀನಿವಾಸಯ್ಯ, ಜಾಫರ್ ಸಾಧಿಕ್, ಮಂಜಪ್ಪ, ಗೋಣಿಸ್ವಾಮಿ ಅವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ