ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೊಡ್ಡಬಿದರೆಯಲ್ಲಿ ಫೆ.29ರಿಂದ ಶ್ರೀ ಪಾತಲಿಂಗೇಶ್ವರ ಸ್ವಾಮಿ,ಗ್ರಾಮದೇವತೆ ಕರಿಯಮ್ಮ ದೇವಿಯವರ ದೊಡ್ಡ ಜಾತ್ರಾ ಮಹೋತ್ಸವ

ಹುಳಿಯಾರು ಹೋಬಳಿ ದೊಡ್ಡಬಿದರೆಯಲ್ಲಿ ಶ್ರೀ ಪಾತಲಿಂಗೇಶ್ವರಸ್ವಾಮಿ, ಲಕ್ಕಮ್ಮ ದೇವಿ ಹಾಗೂ ಗ್ರಾಮದೇವತೆ  ಶ್ರೀ ಕರಿಯಮ್ಮ ದೇವಿ, ಬೇವಿನಳಮ್ಮ ದೇವಿಯವರ ದೊಡ್ಡ ಜಾತ್ರಾ ಮಹೋತ್ಸವ ದಿನಾಂಕ: 29-02-2024 ಗುರುವಾರದಿಂದ 06-03-2024 ಬುಧವಾರದವರೆಗೆ ಒಟ್ಟು ಏಳು ದಿನಗಳ ಕಾಲ ನಡೆಯಲಿದೆ. 29-02-2024 ಗುರುವಾರ : ಸಂಜೆ 8 ಗಂಟೆಗೆ ಮಧುವಣಗಿತ್ತಿ ಕಾರ್ಯಕ್ರಮ, ಮಡಿಲಕ್ಕಿಸೇವೆ 01-03-2024 ಶುಕ್ರವಾರ : ಬಾನ, ರಾತ್ರಿ 8 ಗಂಟೆಗೆ ಮಧುವಣಗಿತ್ತಿ, ಮಡಿಲಕ್ಕಿಸೇವೆ, ಚಿಕ್ಕಬಿದರೆ ಕರಿಯಮ್ಮನವರು ಮತ್ತು ಕೋಡಿಹಳ್ಳಿ ಕೊಲ್ಲಾಪುರದಮ್ಮನವರ ಆಗಮನ. 02-03-2024 ಶನಿವಾರ : ಬೆಳಗ್ಗೆ 6-30ಕ್ಕೆ ಆರತಿ ಬಾನ, ಗಂಗಾಪೂಜೆ, ನಡೆಮುಡಿಯೊಂದಿಗೆ ಅಮ್ಮನವರು ಮೂಲಸ್ಥಾನಕ್ಕೆ ಆಗಮಿಸುವರು. ಬೆಳಿಗ್ಗೆ 9-30ಕ್ಕೆ ಅಗ್ನಿಕುಂಡ  ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ ಸಂಜೆ 6-30ಕ್ಕೆ ಸಿಡಿಮಹೋತ್ಸವ ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ರಾತ್ರಿ 10 ಗಂಟೆಗೆ ಹೆಸರಾಂತ ಲಹರಿ ಮೆಲೊಡೀಸ್ ರವರಿಂದ ಆರ್ಕೇಸ್ಟ್ರಾ ಕಾರ್ಯಕ್ರಮ 03-03-2024 ಭಾನುವಾರ :  ಬೆಳಗ್ಗೆ 8 ಗಂಟೆಗೆ ರುದ್ರಾಭಿಷೇಕ 10 ಗಂಟೆಗೆ ಧ್ವಜಾರೋಹಣ 11 ಗಂಟೆಗೆ ದೋಣಿಸೇವೆ ಮಧ್ಯಾಹ್ನ 2 ಗಂಟೆಗೆ ಲಕ್ಕಮ್ಮನವರ ಮಜ್ಜನಬಾವಿ ಹತ್ತಿರ ಶ್ರೀ ಸ್ವಾಮಿಯವರು ದಯಮಾಡಿಸಿ ಶ್ರೀ ಲಕ್ಕಮ್ಮನವರ ಕಳಸಸ್ಥಾಪನೆ, ಗಂಗಾಪೂಜೆ, ಪ್ರಸಾದ ವಿನಿಯೋಗ ನಂತರ ನಡೆಮುಡಿಯೊಂದಿಗೆ ಶ್ರೀ

ದೊಡ್ಡಎಣ್ಣೆಗೆರೆಯ ಜ್ಞಾನ ಭಾರತಿ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಇದೇ ಫೆ. 28ರ ಬುಧವಾರದಂದು ತುಮಕೂರು ಜಿಲ್ಲಾ ವೈಜ್ಞಾನಿಕ ಸಮ್ಮೇಳನ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ತುಮಕೂರು ಮತ್ತು  ಜ್ಞಾನ ಭಾರತಿ ವಿದ್ಯಾಸಂಸ್ಥೆ, ದೊಡ್ಡಎಣ್ಣೆಗೆರೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ದೊಡ್ಡೆಣ್ಣೆಗೆರೆ ಜ್ಞಾನ ಭಾರತಿ ವಿದ್ಯಾಸಂಸ್ಥೆ ಶಾಲಾ ಆವರಣದಲ್ಲಿ ಇದೇ ಫೆಬ್ರವರಿ 28ರ ಬುಧವಾರದಂದು ತುಮಕೂರು ಜಿಲ್ಲಾ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ. ಬೆ.09-30 ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆ. 10-30ಕ್ಕೆ   ಉದ್ಘಾಟನಾ ಸಮಾರಂಭ  ಉದ್ಘಾಟನೆ ಪ್ರತಿಜ್ಞಾವಿಧಿ ಬೋಧನೆ ಹಾಗೂ ಉದ್ಘಾಟನಾ ನುಡಿ :  ಮಾನ್ಯಶ್ರೀ ಎನ್.ಎಸ್. ಬೋಸರಾಜು   ಸಚಿವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟನೆ : ಮಾನ್ಯಶ್ರೀ ಸತೀಶ ಲಕ್ಷ್ಮಣರಾವ್ ಜಾರಕಿಹೊಳಿ  ಸಚಿವರು, ಲೋಕೋಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ. ವಿಜ್ಞಾನ ಸಿರಿ 3 ಸಂಚಿಕೆ ಮಾಸಪತ್ರಿಕೆ  ಬಿಡುಗಡೆ : ಮಾನ್ಯಶ್ರೀ ಟಿ.ಬಿ. ಜಯಚಂದ್ರ  ದೆಹಲಿ ವಿಶೇಷ ಪ್ರತಿನಿಧಿ,  ಕರ್ನಾಟಕ ಸರ್ಕಾರ ಶಾಸಕರು, ಶಿರಾ ವಿಧಾನಸಭಾ ಕ್ಷೇತ್ರ *ಸಮ್ಮೇಳನಾದ್ಯಕ್ಷರಿಗೆ ನಾಗರೀಕ ಗೌರವ ಅಭಿನಂದನೆ* ಮಧ್ಯಾಹ್ನ 2:30ಕ್ಕೆ "ಸಾಮಾಜಿಕ ಜಾಲತಾಣಗಳ ತಲ್ಲಣಗಳು " ಎಂಬ ವಿಚಾರದ ಬಗ್ಗೆ ಬಿಳಿಗೆರೆ ಕೃಷ್ಣಮೂರ್ತಿ ಅವರಿಂದ ಉಪನ್ಯಾಸ ಮಧ್ಯಾಹ್ನ 3:30ಕ್ಕೆ "ಪ್ರಚಲಿತ ವೈಜ್ಞಾನಿಕ ಸಮಸ್ಯೆಗ

ಹುಳಿಯಾರಿನ ಆರ್ಯವೈಶ್ಯ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರ ಸಂಘಕ್ಕೆ 9 ಮಂದಿ ನೂತನ ನಿರ್ದೇಶಕರುಗಳ ಆಯ್ಕೆ

ಹುಳಿಯಾರಿನ ಶ್ರೀ ಆರ್ಯವೈಶ್ಯ ಕನ್ಯಕಾಪರಮೇಶ್ವರಿ ಸಹಕಾರ ಸಂಘದ ಆಡಳಿತ ಮಂಡಳಿಯ(2024ರಿಂದ 2029) ಐದು ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಫೆಬ್ರವರಿ 24ರ ಶನಿವಾರದಂದು ಹುಳಿಯಾರಿನ ಗಾಂಧಿಪೇಟೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಚುನಾವಣೆ ಜರುಗಿದ್ದು ,ಕೆಳಕಂಡ 9 ಮಂದಿ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಶೃತಿ ಬಿ.ಜಿ. ಪೂಜಿತ ದರ್ಶನ್ ಹೆಚ್. ಯು. ಲೋಕನಾಥ್.ಟಿ.ಎನ್ ಚೇತನ್ .ಎನ್ ಹೇಮಂತ ಕುಮಾರ್ .ಟಿ.ವಿ ಕಾರ್ತಿಕ್ ಮಿನ್ನಾ .ಎನ್ ಅಜಯ್ ಟಿ.ಕೆ. ಗುರುನಾಥ್ .ಟಿ.ಎನ್ ಅರವಿಂದ.ಎಂ.ಎ ಒಟ್ಟು 13 ಸ್ಥಾನಗಳ ಪೈಕಿ 4 ಸ್ಥಾನಗಳು ಖಾಲಿ ಇದ್ದು 9 ಸ್ಥಾನಗಳಿಗೆ ಚುನಾವಣೆ ನಡೆದಿದೆ. 9 ನಿರ್ದೇಶಕರುಗಳ ಸ್ಥಾನಕ್ಕೆ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 7 ಸಾಮಾನ್ಯ ಸ್ಥಾನಕ್ಕೆ ಒಟ್ಟು 15 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2 ಮಹಿಳಾ ಮೀಸಲು ಸ್ಥಾನಕ್ಕೆ ಒಟ್ಟು 3 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಹುಳಿಯಾರು ಹೋಬಳಿ, ತಮ್ಮಡಿಹಳ್ಳಿ ಶ್ರೀ ಕ್ಷೇತ್ರದಲ್ಲಿ ದೇವಾಲಯ ಪ್ರವೇಶ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ

ಹುಳಿಯಾರು ಹೋಬಳಿ, ತಮ್ಮಡಿಹಳ್ಳಿ ಶ್ರೀ ಕ್ಷೇತ್ರ ಗಂಗಮ್ಮನಕೆರೆಯಲ್ಲಿ ನೆಲಸಿರುವ ಶ್ರೀ ಮಲ್ಲಿಕಾರ್ಜುನಸ್ವಾಮಿ, ಶ್ರೀ ಬಸವೇಶ್ವರ, ಗಣಪತಿ ನೂತನ ದೇವಾಲಯ ಪ್ರವೇಶ ಮಹೋತ್ಸವ ಮತ್ತು ನೂತನ ಶಿಲಾಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೇವಾಲಯ ಶಿಖರ ಕಳಸಾರೋಹಣ ಮತ್ತು ಶ್ರೀ ಗಂಗಮ್ಮನವರ ದೇವಾಲಯ, ಶ್ರೀ ನವಗ್ರಹ ದೇವಾಲಯ ಹಾಗೂ ನಂದಿಕಂಭದ ಪ್ರಾರಂಭೋತ್ಸವ ಮತ್ತು ಶಿಲಾಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ನೂತನ ನಿರ್ಮಿತ ಕಲ್ಯಾಣಿ ಲೋಕಾರ್ಪಣೆ ಕಾರ್ಯಕ್ರಮ ಇಂದು ಮತ್ತು ನಾಳೆ (18-02-2024ನೇ ಭಾನುವಾರ ಹಾಗೂ 19-02-2024 ನೇ ಸೋಮವಾರ)ಎರಡು ದಿನಗಳ ಕಾಲ ನಡೆಯಲಿದೆ. ಸ್ಥಳ : ತಮ್ಮಡಿಹಳ್ಳಿ,  ಹುಳಿಯಾರು ಹೋ, ಚಿ.ನಾ.ಹಳ್ಳಿ ತಾ, ತುಮಕೂರು ಜಿಲ್ಲೆ. *ಕಾರ್ಯಕ್ರಮದ ವಿವರ* 18-02-2024 ಭಾನುವಾರ ಸಂಜೆಯಿಂದ ನಡೆಯಲಿರುವ ಕಾರ್ಯಕ್ರಮ ಹೀಗಿದೆ. ಸಾಯಂಕಾಲ 5-00 ಗಂಟೆಗೆ ಗಂಗಾಪೂಜೆಯೊಂದಿಗೆ ಧ್ವಜಾರೋಹಣ, ಶ್ರೀ ಮಲ್ಲಿಕಾರ್ಜುನಸ್ವಾಮಿಯವರ ಆಲಯ ಪ್ರವೇಶ ಮತ್ತು ಇದೇ ದಿನ ಗಣಪತಿಪೂಜೆ, ಪುಣ್ಯಾಹ, ಅಂಕುರಾರ್ಪಣೆ, ಪಂಚಬ್ರಹ್ಮ ಕಲಶ ಸ್ಥಾಪನೆ, ದಿಕ್ಷಾಲಕರ ಕಲಶ ಸ್ಥಾಪನೆ, ನವಗ್ರಹ ಕಲಶ ಸ್ಥಾಪನೆ, ಸಪ್ತಸಭಾದೇವತೆಗಳ ಕಲಶ ಸ್ಥಾಪನೆ, ಏಕದಶ ರುದ್ರ ಸಹಿತ ಉಮಾಮಹೇಶ್ವರ ಕಲಶ ಸ್ಥಾಪನೆ, ಲಕ್ಷ್ಮೀ ನಾರಾಯಣ ಕಲಶ ಸ್ಥಾಪನೆ, ಅಘೋರ ಕಲಶ ಹಾಗೂ ವಾಸ್ತು ಕಲಶ ಸ್ಥಾಪನೆ, ನಂದ್ಯಾದಿ ಮಹಾಗಣಾಧೀಶ್ವರರು ಇತ್ಯಾದಿ ಕಲಶ ಸ್ಥಾಪನೆ ಹಾಗೂ ಸ್ವಾಮಿಯವರಿಗೆ

ಹೆಚ್.ಮೇಲನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಅಮೃತ ಮಹೋತ್ಸವದ ಅಂಗವಾಗಿ ಫೆ.11ರ ಭಾನುವಾರ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ

ಹುಳಿಯಾರು ಹೋಬಳಿಯ ಹೆಚ್.ಮೇಲನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ಅಮೃತ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಫೆ.11ರ ಭಾನುವಾರ ಮೇಲನಹಳ್ಳಿಯ ಶಾಲಾ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ ನಡೆಯಲಿದೆ. ಅಮೃತ ಮಹೋತ್ಸವದ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿ ಸಂಜೆಯವರೆಗೂ ನಡೆಯಲಿದ್ದು ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಗಣ್ಯರ ಪಟ್ಟಿ ಹೀಗಿದೆ. *ಗುರುವಂದನಾ ಕಾರ್ಯಕ್ರಮ* ಬೆ.10: 00ಗಂಟೆಗೆ ಗುರುವಂದನಾ ಕಾರ್ಯಕ್ರಮವನ್ನು ಸಾಹಿತಿಗಳಾದ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಲಿದ್ದಾರೆ. ಎಂ.ಕೆ. ಪ್ರಹ್ಲಾದ್- ಅಧ್ಯಕ್ಷರು- ಶಾಲಾಭಿವೃದ್ಧಿ ಸಮಿತಿ , ಸ.ಹಿ.ಪ್ರಾ ಶಾಲೆ, ಹೆಚ್.ಮೇಲನಹಳ್ಳಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗಾಣಧಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಟಿ.ಗಿರೀಶ್, ಮಾಜಿ ಗ್ರಾ.ಪಂ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಶ್ರೀಮತಿ ಭಾಗ್ಯಮ್ಮ,  ಎಂ.ಹೆಚ್.ವೀರಭದ್ರಯ್ಯ-ಗ್ರಾ.ಪಂ ಸದಸ್ಯರು- ಹೆಚ್.ಮೇಲನಹಳ್ಳಿ, ಎಂ.ಕೆ.ಮಂಜುಳ- ಗ್ರಾ.ಪಂ ಸದಸ್ಯರು-ಹೆಚ್.ಮೇಲನಹಳ್ಳಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಮತ್ತು ಎಲ್ಲಾ ಸದಸ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ . ----------------------------- ಬೆಳಗ್ಗೆ 12 ರಿಂದ 1.30 ಹಿರಿಯ ನಾಗರೀಕರಿಗೆ - ನಿವೃತ್ತ ಹಳ

ಚಿಕ್ಕನಾಯಕನಹಳ್ಳಿ ತಾಲೂಕು ಗೋರ್ ಬಂಜಾರ ವಿದ್ಯಾರ್ಥಿಗಳಿಗೆ ಶ್ರೀ ಸಂತ ಸೇವಾಲಾಲ್ ಜಯಂತೋತ್ಸವದಲ್ಲಿ ಪ್ರತಿಭಾ ಪುರಸ್ಕಾರ

ಚಿಕ್ಕನಾಯಕನಹಳ್ಳಿ ತಾಲೂಕು ಗೋರ್ ಬಂಜಾರ ವಿದ್ಯಾರ್ಥಿಗಳಿಗೆ ಮತ್ತು ಅವರ ತಂದೆ ತಾಯoದರಿಗೆ ದಿನಾಂಕ 3.3.2024ರಂದು  ಹುಳಿಯಾರಿನಲ್ಲಿ ನಡೆಯಲಿರುವ ಗೋರ್ ಬಂಜಾರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ್ ಜಯಂತೋತ್ಸವ ಕಾರ್ಯಕ್ರಮದಲ್ಲಿ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರಿಂದ ಪ್ರತಿಭಾ ಪುರಸ್ಕಾರ ನೀಡಲಾಗುವುದು .       ಪ್ರತಿಭಾ ಪುರಸ್ಕಾರದ ನಿಯಮಗಳು 👇🏾  1.ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಐಟಿಐ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ 2023ರಲ್ಲಿ   ತೇರ್ಗಡೆಯಾಗಿರಬೇಕು.  2.ವಿದ್ಯಾರ್ಥಿಗಳು ಶೇ. 90 ಪರ್ಸೆಂಟ್ ಗಿಂತ ಹೆಚ್ಚಿನ ಅಂಕ ಗಳಿಸಿರಬೇಕು.   3.ನಮ್ಮ ತಾಲೂಕಿನ ನಮ್ಮ ಜನಾಂಗದವರೇ ಆಗಿರಬೇಕು. -------------   ಅರ್ಹ ವಿದ್ಯಾರ್ಥಿಗಳು ತಮ್ಮ ಭಾವಚಿತ್ರ, ಮಾರ್ಕ್ಸ್ ಕಾರ್ಡ್ ಮತ್ತು ಒಂದು ಆಧಾರ್ ಕಾರ್ಡ್ ನೊಂದಿಗೆ ಈ  ಕೆಳಗಿನವರನ್ನು ಸಂಪರ್ಕಿಸಬಹುದು . 👇🏾👇🏾 ಹೋಬಳಿವಾರು ಪ್ರತಿಭಾ ಪುರಸ್ಕಾರಕ್ಕೆ ಮಾಹಿತಿ ಸಂಗ್ರಹಿಸುವ ಶಿಕ್ಷಕರ ಪಟ್ಟಿ   ಹುಳಿಯಾರು ಹೋಬಳಿ 1) ಲಕ್ಷ್ಮೀಬಾಯಿ 9972749513 2) ಅಶ್ವಿನಿ 9686042104 3) ರಾಜ ನಾಯ್ಕ್ 9731192343 4) ಲೋಕೇಶ್ ನಾಯ್ಕ್ 9538762109   ಹಂದನಕೆರೆ ಹೋಬಳಿ 1) ಹನುಮ ನಾಯ್ಕ್ 6363693272 2) ಗಂಗಾಧರ್ ನಾಯ್ಕ್ 7019783724   ಚಿಕ್ಕನಾಯಕನಹಳ್ಳಿ ಕಸಬಾ ಹೋಬಳಿ 1) ಮೂರ್ತಿನಾಯ್ಕ್ 7259478725 2) ಲಕ್ಷ್ಮೀಶ್ 8095641273. ಕಂದಿಕೆರೆ ಹೋಬಳಿ  ಲೋಕೇಶ್