29-02-2024 ಗುರುವಾರ : ಸಂಜೆ 8 ಗಂಟೆಗೆ ಮಧುವಣಗಿತ್ತಿ ಕಾರ್ಯಕ್ರಮ, ಮಡಿಲಕ್ಕಿಸೇವೆ
01-03-2024 ಶುಕ್ರವಾರ : ಬಾನ, ರಾತ್ರಿ 8 ಗಂಟೆಗೆ ಮಧುವಣಗಿತ್ತಿ, ಮಡಿಲಕ್ಕಿಸೇವೆ, ಚಿಕ್ಕಬಿದರೆ ಕರಿಯಮ್ಮನವರು ಮತ್ತು ಕೋಡಿಹಳ್ಳಿ ಕೊಲ್ಲಾಪುರದಮ್ಮನವರ ಆಗಮನ.
02-03-2024 ಶನಿವಾರ : ಬೆಳಗ್ಗೆ 6-30ಕ್ಕೆ ಆರತಿ ಬಾನ, ಗಂಗಾಪೂಜೆ, ನಡೆಮುಡಿಯೊಂದಿಗೆ ಅಮ್ಮನವರು ಮೂಲಸ್ಥಾನಕ್ಕೆ ಆಗಮಿಸುವರು.
ಬೆಳಿಗ್ಗೆ 9-30ಕ್ಕೆ ಅಗ್ನಿಕುಂಡ
ಮಧ್ಯಾಹ್ನ 12 ಗಂಟೆಗೆ ಪ್ರಸಾದ ವಿನಿಯೋಗ
ಸಂಜೆ 6-30ಕ್ಕೆ ಸಿಡಿಮಹೋತ್ಸವ
ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ
ರಾತ್ರಿ 10 ಗಂಟೆಗೆ ಹೆಸರಾಂತ ಲಹರಿ ಮೆಲೊಡೀಸ್ ರವರಿಂದ ಆರ್ಕೇಸ್ಟ್ರಾ ಕಾರ್ಯಕ್ರಮ
03-03-2024 ಭಾನುವಾರ :
ಬೆಳಗ್ಗೆ 8 ಗಂಟೆಗೆ ರುದ್ರಾಭಿಷೇಕ
10 ಗಂಟೆಗೆ ಧ್ವಜಾರೋಹಣ
11 ಗಂಟೆಗೆ ದೋಣಿಸೇವೆ
ಮಧ್ಯಾಹ್ನ 2 ಗಂಟೆಗೆ ಲಕ್ಕಮ್ಮನವರ ಮಜ್ಜನಬಾವಿ ಹತ್ತಿರ ಶ್ರೀ ಸ್ವಾಮಿಯವರು ದಯಮಾಡಿಸಿ ಶ್ರೀ ಲಕ್ಕಮ್ಮನವರ ಕಳಸಸ್ಥಾಪನೆ, ಗಂಗಾಪೂಜೆ, ಪ್ರಸಾದ ವಿನಿಯೋಗ ನಂತರ ನಡೆಮುಡಿಯೊಂದಿಗೆ ಶ್ರೀ ಸ್ವಾಮಿಯವರು ಲಕ್ಕಮ್ಮನವರೊಂದಿಗೆ ಮೂಲಸ್ಥಾನಕ್ಕೆ ದಯಮಾಡಿಸುವುದು. ಸಂಜೆ ಸ್ವಾಮಿಯವರಿಗೂ ಲಕ್ಕಮ್ಮನವರಿಗೂ ಕಂಕಣ ಧಾರಣೆ, ನಂತರ 9 ಗಂಟೆಗೆ ಮಡಿಲಕ್ಕಿ ಸೇವೆ.ರಾತ್ರಿ 11 ಗಂಟೆಗೆ ಶ್ರೀ ಸ್ವಾಮಿಯವರು ಮತ್ತು ಅಮ್ಮನವರು ಮೂಲಸ್ಥಾನಕ್ಕೆ ದಯಮಾಡಿಸಿ ಪಂಚಾಭಿಷೇಕ ಮಹಾಮಂಗಳಾರತಿ ನಡೆಯುವುದು.
ಸಂಜೆ 7-30ಕ್ಕೆ ಅನ್ನಸಂತರ್ಪಣೆ
04-03-2024 ಸೋಮವಾರ : ಸಂಜೆ 7-30ಕ್ಕೆ ದೊಡ್ಡಪರುವು
05-03-2024 ಮಂಗಳವಾರ :
ಬೆಳಿಗ್ಗೆ 6 ಗಂಟೆಗೆ ರುದ್ರಾಭಿಷೇಕ ,
9 ರಿಂದ 12ರೊಳಗೆ ಕನ್ಯಾ ಲಗ್ನದಲ್ಲಿ ಪಟ್ಟಧಾರಣೆ
ಮಧ್ಯಾಹ್ನ 4-30ಕ್ಕೆ ಗಾವು,
ಸಂಜೆ 7-30ಕ್ಕೆ ಅನ್ನಸಂತರ್ಪಣೆ ನಂತರ ಶ್ರೀ ಅಮ್ಮನವರು ಮತ್ತು ಶ್ರೀ ಸ್ವಾಮಿಯವರು ಉತ್ಸವದೊಂದಿಗೆ ಊರೊಳಗಿನ ದೇವಸ್ಥಾನಕ್ಕೆ ದಯಮಾಡಿಸುವುದು.
ರಾತ್ರಿ 10 ಗಂಟೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ದೊಡ್ಡಬಿದರೆ ಕಲಾತಂಡದಿಂದ ವೀರಗಾಸೆ.
ವೀರಾಗಾಸೆಯೊಂದಿಗೆ ದೇವಸ್ಥಾನದಿಂದ ತೇರಿನ ಬೀದಿಗೆ ದಯಮಾಡಿಸುವುದು.
ದಿನಾಂಕ: 05-03-2023 ಮಂಗಳವಾರ :
ಮ.12 ಗಂಟೆಗೆ ಧಾರ್ಮಿಕ ಸಭೆ
ದಿವ್ಯ ಸಾನಿಧ್ಯ: ಶ್ರೀ ಶ್ರೀ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥ ಪೀಠ, ಹೊಸದುರ್ಗ ತಾ||
06-03-2024 ಬುಧವಾರ:
ಬೆಳಿಗ್ಗೆ 6 ಗಂಟೆಗೆ ದೊಡ್ಡರಥೋತ್ಸವ
8 ಗಂಟೆಗೆ ಓಕಳಿಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ,
10 ಗಂಟೆಗೆ ಮಣೇವು ಕಾರ್ಯಕ್ರಮ ನಂತರ ಶ್ರೀ ಸ್ವಾಮಿಯವರು ಮೂಲಸ್ಥಾನಕ್ಕೆ ಬಿಜಯಂಗೈಯುವುದು.
ಈ ಮೇಲ್ಕಂಡ ಕಾರ್ಯಕ್ರಮಗಳಿಗೆ ಸರ್ವಭಕ್ತಾದಿಗಳು ಆಗಮಿಸಿ ಶ್ರೀ ಸ್ವಾಮಿಯವರ ಮತ್ತು ಶ್ರೀ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ