ಹುಳಿಯಾರಿನ ಶ್ರೀ ಆರ್ಯವೈಶ್ಯ ಕನ್ಯಕಾಪರಮೇಶ್ವರಿ ಸಹಕಾರ ಸಂಘದ ಆಡಳಿತ ಮಂಡಳಿಯ(2024ರಿಂದ 2029) ಐದು ವರ್ಷಗಳ ಅವಧಿಯ ನಿರ್ದೇಶಕರ ಸ್ಥಾನಕ್ಕೆ ಇಂದು ಫೆಬ್ರವರಿ 24ರ ಶನಿವಾರದಂದು ಹುಳಿಯಾರಿನ ಗಾಂಧಿಪೇಟೆಯಲ್ಲಿರುವ ವಾಸವಿ ಕಲ್ಯಾಣ ಮಂಟಪದಲ್ಲಿ ಚುನಾವಣೆ ಜರುಗಿದ್ದು ,ಕೆಳಕಂಡ 9 ಮಂದಿ ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಶೃತಿ ಬಿ.ಜಿ.
ಪೂಜಿತ ದರ್ಶನ್ ಹೆಚ್. ಯು.
ಲೋಕನಾಥ್.ಟಿ.ಎನ್
ಚೇತನ್ .ಎನ್
ಹೇಮಂತ ಕುಮಾರ್ .ಟಿ.ವಿ
ಕಾರ್ತಿಕ್ ಮಿನ್ನಾ .ಎನ್
ಅಜಯ್ ಟಿ.ಕೆ.
ಗುರುನಾಥ್ .ಟಿ.ಎನ್
ಅರವಿಂದ.ಎಂ.ಎ
ಒಟ್ಟು 13 ಸ್ಥಾನಗಳ ಪೈಕಿ 4 ಸ್ಥಾನಗಳು ಖಾಲಿ ಇದ್ದು 9 ಸ್ಥಾನಗಳಿಗೆ ಚುನಾವಣೆ ನಡೆದಿದೆ. 9 ನಿರ್ದೇಶಕರುಗಳ ಸ್ಥಾನಕ್ಕೆ 18 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 7 ಸಾಮಾನ್ಯ ಸ್ಥಾನಕ್ಕೆ ಒಟ್ಟು 15 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, 2 ಮಹಿಳಾ ಮೀಸಲು ಸ್ಥಾನಕ್ಕೆ ಒಟ್ಟು 3 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ