ಹುಳಿಯಾರು ಹೋಬಳಿ, ತಮ್ಮಡಿಹಳ್ಳಿ ಶ್ರೀ ಕ್ಷೇತ್ರದಲ್ಲಿ ದೇವಾಲಯ ಪ್ರವೇಶ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮ
ಸ್ಥಳ : ತಮ್ಮಡಿಹಳ್ಳಿ,
ಹುಳಿಯಾರು ಹೋ, ಚಿ.ನಾ.ಹಳ್ಳಿ ತಾ, ತುಮಕೂರು ಜಿಲ್ಲೆ.
*ಕಾರ್ಯಕ್ರಮದ ವಿವರ*
18-02-2024 ಭಾನುವಾರ ಸಂಜೆಯಿಂದ ನಡೆಯಲಿರುವ ಕಾರ್ಯಕ್ರಮ ಹೀಗಿದೆ.
ಸಾಯಂಕಾಲ 5-00 ಗಂಟೆಗೆ ಗಂಗಾಪೂಜೆಯೊಂದಿಗೆ ಧ್ವಜಾರೋಹಣ, ಶ್ರೀ ಮಲ್ಲಿಕಾರ್ಜುನಸ್ವಾಮಿಯವರ ಆಲಯ ಪ್ರವೇಶ ಮತ್ತು ಇದೇ ದಿನ ಗಣಪತಿಪೂಜೆ, ಪುಣ್ಯಾಹ, ಅಂಕುರಾರ್ಪಣೆ, ಪಂಚಬ್ರಹ್ಮ ಕಲಶ ಸ್ಥಾಪನೆ, ದಿಕ್ಷಾಲಕರ ಕಲಶ ಸ್ಥಾಪನೆ, ನವಗ್ರಹ ಕಲಶ ಸ್ಥಾಪನೆ, ಸಪ್ತಸಭಾದೇವತೆಗಳ ಕಲಶ ಸ್ಥಾಪನೆ, ಏಕದಶ ರುದ್ರ ಸಹಿತ ಉಮಾಮಹೇಶ್ವರ ಕಲಶ ಸ್ಥಾಪನೆ, ಲಕ್ಷ್ಮೀ ನಾರಾಯಣ ಕಲಶ ಸ್ಥಾಪನೆ, ಅಘೋರ ಕಲಶ ಹಾಗೂ ವಾಸ್ತು ಕಲಶ ಸ್ಥಾಪನೆ, ನಂದ್ಯಾದಿ ಮಹಾಗಣಾಧೀಶ್ವರರು ಇತ್ಯಾದಿ ಕಲಶ ಸ್ಥಾಪನೆ ಹಾಗೂ ಸ್ವಾಮಿಯವರಿಗೆ ಅಧಿವಾಸ ಪೂಜಾದಿಗಳು ನಡೆಯುವವು.
19-02-2024 ಸೋಮವಾರ ನಡೆಯಲಿರುವ ಕಾರ್ಯಕ್ರಮ
ಬೆಳಗಿನ ಜಾವ 4-00 ರಿಂದ 6-00 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿಯವರ ಶಿಲಾ ಪ್ರತಿಷ್ಠಾಪನಾ, ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ನೇತ್ರೋಲನ, ಮಹಾರುದ್ರಾಭಿಷೇಕ, ಅಷ್ಟೋತ್ತರ ಬಿಲ್ವಾರ್ಚನೆ, ಬೆಳಿಗ್ಗೆ 6-30 ರಿಂದ 7-30ಕ್ಕೆ ಶ್ರೀ ಶ್ರೀ ಶ್ರೀ ಗಳವರಿಂದ ಶಿಖರಕ್ಕೆ ಕಳಶಾರೋಹಣ ನಂತರ ದಿಗ್ಬಲಿ ,ಶ್ರೀ ಮಹಾರುದ್ರಹೋಮ, ಪೂರ್ಣಹುತಿ, ರಕ್ಷಾಧಾರಣೆ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ನಂತರ ಅನ್ನ ಸಂತರ್ಪಣೆ ನಡೆಯಲಿದೆ.
ದಿನಾಂಕ:19-02-2024ನೇ ಸೋಮವಾರ ವಟುಗಳಿಗೆ ದೀಕ್ಷಾ ಕಾರ್ಯಕ್ರಮವಿರುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ