ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ; ಶಾಂತಿಯುತ ಆಚರಣೆಗೆ ಸಿಪಿಐ ಜನಾರ್ಧನ್ ಕರೆ

ಹುಳಿಯಾರು: ಹನುಮ ಜಯಂತಿ ನಿಮಿತ್ತ ಸೌಹಾರ್ದ ಸಭೆ; ಶಾಂತಿಯುತ ಆಚರಣೆಗೆ ಸಿಪಿಐ ಜನಾರ್ಧನ್ ಕರೆ ಹುಳಿಯಾರು : ಹುಳಿಯಾರು ಪಟ್ಟಣದಲ್ಲಿ ಹನುಮ ಜಯಂತಿ ಉತ್ಸವವನ್ನು ಯಾವುದೇ ಅಹಿತಕರ ಘಟನೆ ಅಥವಾ ಸಮಸ್ಯೆಗೆ ಎಡೆಮಾಡಿಕೊಡದಂತೆ, ಸೌಹಾರ್ದಯುತವಾಗಿ ಮತ್ತು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಜನಾರ್ದನ್ ಅವರು ಸಾರ್ವಜನಿಕರಿಗೆ ಸೂಚನೆ ನೀಡಿದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಹನುಮ ಜಯಂತಿ ಹಬ್ಬದ ಪೂರ್ವಭಾವಿಯಾಗಿ, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಲಾಖೆಯಿಂದ ಆಯೋಜಿಸಲಾಗಿದ್ದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿದರು. ಸೌಹಾರ್ದಯುತ ಆಚರಣೆಗೆ ಒತ್ತು : ಪಟ್ಟಣದಲ್ಲಿ ಇದುವರೆಗೂ ಎಲ್ಲಾ ಸಮುದಾಯದವರು ಆಚರಿಸಿಕೊಂಡು ಬರುತ್ತಿರುವ ಉತ್ಸವಗಳಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಅದೇ ರೀತಿ ಹನುಮ ಜಯಂತಿ ಕಾರ್ಯಕ್ರಮವು ಕೂಡ ಎಲ್ಲಾ ಸಮುದಾಯದವರ ಸಹಕಾರದೊಂದಿಗೆ ಮತ್ತು ಎಲ್ಲರ ಪಾಲ್ಗೊಳ್ಳುವಿಕೆಯೊಂದಿಗೆ ಸೌಹಾರ್ದಯುತವಾಗಿ ನಡೆಯಬೇಕು ಎಂಬುದು ಇಲಾಖೆಯ ಆಶಯವಾಗಿದೆ ಎಂದು ಜನಾರ್ದನ್ ತಿಳಿಸಿದರು. ಸಾರ್ವಜನಿಕರ ಸಹಕಾರವೇ ಅಪರಾಧ ನಿಯಂತ್ರಣದಲ್ಲಿ ಶೇ. 90ರಷ್ಟು ಪಾತ್ರ ವಹಿಸುತ್ತದೆ. ಪೊಲೀಸರ ಪಾತ್ರ ಕೇವಲ ಶೇ. 10ರಷ್ಟು ಮಾತ್ರ ಇರುತ್ತದೆ. ಆದ್ದರಿಂದ ಸಾರ್ವಜನಿಕರ ಸಹಕಾರವೇ ನಮಗೆ ಅತ್ಯಂತ ಮುಖ್ಯ ಎಂದು ಅವರು ಹೇಳಿದರು. ಶಿಸ್ತು ಮತ್ತು ಕಾ...

ಹುಳಿಯಾರು ಪತ್ರಕರ್ತನಿಗೆ ಮಾನವೀಯ ನೆರವು: ಮಾಜಿ ತಹಸೀಲ್ದಾರ್ ಟಿ.ಸಿ. ಕಾಂತರಾಜು ಅವರ ಮಾದರಿ ನಡೆ

ಹುಳಿಯಾರು ಪತ್ರಕರ್ತನಿಗೆ ಮಾನವೀಯ ನೆರವು: ಮಾಜಿ ತಹಸೀಲ್ದಾರ್ ಟಿ.ಸಿ. ಕಾಂತರಾಜು ಅವರ ಮಾದರಿ ನಡೆ ಹುಳಿಯಾರು : ದೃಷ್ಟಿಹೀನತೆಯಿಂದ ಬಳಲುತ್ತಿರುವ  ಹುಳಿಯಾರಿನ ಪತ್ರಕರ್ತ ರಮೇಶ್ ಅವರಿಗೆ ಮಾಜಿ ತಹಸೀಲ್ದಾರ್ ಮತ್ತು ನಿವೃತ್ತ ಅಧಿಕಾರಿಯಾಗಿರುವ ಟಿ.ಸಿ. ಕಾಂತರಾಜು ಅವರು ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.  ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಬಂದಿದ್ದ ಗೌರವ ಸಂಭಾವನೆಗೆ ಇನ್ನಷ್ಟು ಮೊತ್ತವನ್ನು ಸೇರಿಸಿ, ರಮೇಶ್ ಅವರ ಚಿಕಿತ್ಸೆಗೆ ನೀಡಿದ್ದಾರೆ. ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಚೀನಿ ಪುರುಷೋತ್ತಮ್ ಅವರು ಈ ಕುರಿತು ಮಾತನಾಡಿ, ಟಿ.ಸಿ. ಕಾಂತರಾಜು ಅವರು ಇತ್ತೀಚೆಗೆ ನಡೆದ ಪತ್ರಕರ್ತರ ಸಂಘದ ಚುನಾವಣೆಗೆ ಚುನಾವಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಈ ಕಾರ್ಯಕ್ಕೆ ಅವರಿಗೆ ನೀಡಿದ ಗೌರವ ಧನವನ್ನು ಸ್ವೀಕರಿಸಲು ಮೊದಲು ನಿರಾಕರಿಸಿದ್ದ ಅವರು, ರಾಜ್ಯ ಚುನಾವಣಾಧಿಕಾರಿಗಳ ಸೂಚನೆಯ ಮೇರೆಗೆ ಸಂಭಾವನೆ ಪಡೆದಿದ್ದರು. ಆದರೆ, ಆ ಸಂಪೂರ್ಣ ಸಂಭಾವನೆಯ ಹಣಕ್ಕೆ ಮತ್ತಷ್ಟು ಮೊತ್ತವನ್ನು ಸೇರಿಸಿ, ಅದನ್ನು ರಮೇಶ್ ಅವರ ಚಿಕಿತ್ಸೆಗಾಗಿ ನೀಡಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಮಾಜಿ ತಹಸೀಲ್ದಾರರಾದ ಕಾಂತರಾಜು ಅವರು ಮೊದಲಿನಿಂದಲೂ ಪತ್ರಕರ್ತರ ಸ್ನೇಹಿತರಾಗಿದ್ದು, ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡುವ ಉದಾರ...

ಬಳ್ಳೇಕಟ್ಟೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಂದ ಅಂಗನವಾಡಿ ಕೇಂದ್ರ ಉದ್ಘಾಟನೆ

ಬಳ್ಳೇಕಟ್ಟೆಯಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ:  ಮಕ್ಕಳ ಭವಿಷ್ಯಕ್ಕೆ ಶ್ರಮಿಸಿ – ಶಾಸಕ ಸಿ.ಬಿ. ಸುರೇಶ್‌ ಬಾಬು ಹುಳಿಯಾರು : ಸಮೀಪದ ಬಳ್ಳೇಕಟ್ಟೆ ಗ್ರಾಮದಲ್ಲಿ 10.00 ಲಕ್ಷ ಅಂದಾಜು ಮೊತ್ತದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ  ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಾಣಗೊಂಡಿರುವ ಹೊಸ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಸಿ.ಬಿ. ಸುರೇಶ್‌ ಬಾಬು ಅವರು ಉದ್ಘಾಟಿಸಿದರು.  ಅಂಗನವಾಡಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಬಿ. ಸುರೇಶ್‌ ಬಾಬು ಅವರು, ಮಕ್ಕಳ ಭವಿಷ್ಯ ಮತ್ತು ಅವರ ಉತ್ತಮ ಶಿಕ್ಷಣಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು. ಮಕ್ಕಳ ಶಿಕ್ಷಣಕ್ಕೆ ಒತ್ತು: ಪ್ರತಿಯೊಬ್ಬ ಪೋಷಕರೂ ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಉತ್ತಮ ಶಾಲೆಗಳಲ್ಲಿ ಓದಿಸಬೇಕು ಎಂಬ ಆಲೋಚನೆ ಹೊಂದಿರುತ್ತಾರೆ. ಅವರ ಮುಂದಿನ ಭವಿಷ್ಯ ರೂಪಿಸಲು ನಾವೆಲ್ಲರೂ ದುಡಿಯುತ್ತಿದ್ದು ಈ ಗ್ರಾಮ ಸೇರಿದಂತೆ ಇಡೀ ತಾಲ್ಲೂಕಿನ ಶಾಲೆಗಳ ಅಭಿವೃದ್ಧಿಗಾಗಿ ಈಗಾಗಲೇ 45 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣವೇ ಇಲ್ಲಿ ಉತ್ತಮ ಶಾಲಾ ಕಟ್ಟಡ ನಿರ್ಮಾಣವಾಗಲಿದೆ ಎಂದರು. ಬಸ್ ನಿಲುಗಡೆಗೆ ಭರವಸೆ : ಗ್ರಾಮದ ಮುಖ್ಯಸ್ಥರು ಮನವಿ ಮಾಡಿದಂತೆ, ಬಸ್ ನಿಲುಗಡೆ  ವ್ಯವಸ್ಥೆ ಕಲ್ಪಿಸಲು ಕ...

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ – ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ದಾರಿ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ – ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ದಾರಿ ಹುಳಿಯಾರು : ಜಾಗತೀಕರಣ ಮತ್ತು ಡಿಜಿಟಲೀಕರಣದ ಈ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣವು ಜೀವನದ ಅವಿಭಾಜ್ಯ ಭಾಗವಾಗಿದೆ. ಇಂದಿನ ಕಾಲದಲ್ಲಿ ಯಾರಿಗಾದರೂ ಕಂಪ್ಯೂಟರ್ ಆಪರೇಟ್ ಮಾಡಲು ಬಾರದಿದ್ದರೆ ಅವರು ಅನಕ್ಷರಸ್ಥರಂತೆ ಕಾಣುತ್ತಾರೆ. ಸರ್ಕಾರಿ ಕಚೇರಿಗಳಿಂದ ಹಿಡಿದು ಖಾಸಗಿ ವಲಯದವರೆಗೆ ಎಲ್ಲ ಕಾರ್ಯಪದ್ಧತಿಗಳು ಡಿಜಿಟಲ್ ಆಗಿವೆ. ವಿದ್ಯಾರ್ಥಿಗಳು ಕಂಪ್ಯೂಟರ್ ಕೌಶಲ್ಯ ಗಳಿಸಿದರೆ ಮಾತ್ರ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸ್ಥಾನವನ್ನು ಸ್ಥಿರಗೊಳಿಸಬಹುದು,” ಎಂದು ಪ್ರಾಂಶುಪಾಲ ಪ್ರೊ. ವೀರಣ್ಣ ಎಸ್.ಸಿ . ಹೇಳಿದರು.                                  ಹುಳಿಯಾರು-ಕೆಂಕೆರೆಯ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗಾವಕಾಶಗಳ ಕೋಶದ ವತಿಯಿಂದ ಉಚಿತ ಕಂಪ್ಯೂಟರ್ ಸಾಕ್ಷರತಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯಶಾಸ್ತ್ರ ಉಪನ್ಯಾಸಕ ಹಾಗೂ ತರಬೇತಿಕಾರ ತಿಪ್ಪೇಸ್ವಾಮಿ ಎಂ.ಕೆ. ಮಾತನಾಡಿ, ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ಕಂಪ್ಯೂಟರ್ ಶಿಕ್ಷಣ ಅತ್ಯವಶ್ಯಕ. ಪದವಿಯ ಜೊತೆಗೆ ಕಂಪ್ಯೂಟರ್ ಕೌಶಲ್ಯವೂ ಇಂದಿನ ಉದ್ಯೋಗ ಕ್ಷೇತ್ರದಲ್ಲಿ ...

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆ – ರವಿ ಎಚ್.ಕೆ

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆ – ರವಿ ಎಚ್.ಕೆ ಹುಳಿಯಾರು : ಮಹಿಳೆಯರ ಸಬಲೀಕರಣ ಮಾಡಲೇಬೇಕೆಂದು ಸರ್ಕಾರ ದೃಢನಿಶ್ಚಯದಿಂದ ಮುಂದೆ ಸಾಗುತ್ತಿದ್ದು, ಅದರ ಸಾಕ್ಷಿ ಸಂಜೀವಿನಿ ಒಕ್ಕೂಟಗಳಾಗಿವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ರವಿ ಎಚ್.ಕೆ ಹೇಳಿದರು.  ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ಲಕ್ಷ್ಮಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು ಮತ್ತು ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ದಾರಿ ಮಾಡಿಕೊಡುತ್ತಿವೆ ಎಂದರು. ಆರ್ಥಿಕ ಸಾಕ್ಷರತಾ ಸಲಹೆಗಾರ ಆರ್.ಎಂ. ಕುಮಾರಸ್ವಾಮಿ ಮಾತನಾಡಿ , ಇತ್ತೀಚೆಗೆ ಎಲ್‌ಇಡಿ ಬಲ್ಪು ಮಾರಾಟದ ನೆಪದಲ್ಲಿ ಆಧಾರ್‌ ಕಾರ್ಡ್ ಒಟಿಪಿ ಪಡೆದು ಹಣ ವಂಚನೆ ಮಾಡುತ್ತಿರುವ ಸೈಬರ್ ಅಪರಾಧಿಗಳು ಸಕ್ರಿಯರಾಗಿದ್ದಾರೆ. ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಎಚ್ಚರಿಕೆ ನೀಡಿದರು. ಜೊತೆಗೆ, ಸಾವುಗಳು ಹೆಚ್ಚಾಗಿ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮತ್ತು ಜೀವನ ಜ್ಯೋತಿ ವಿಮಾ ಯೋಜನೆಗಳಲ್ಲಿ ಬ್ಯಾಂಕಿನ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಮಹಿಳೆಯರಿಗೆ ಸಲಹೆ ನೀಡಿದರು. ...

ವರ್ಗಾವಣೆ ಬಳಿಕವೂ ಚೆಕ್ ಡ್ರಾ: ಹುಳಿಯಾರು ಪಪಂ ಹಿಂದಿನ ಮುಖ್ಯಾಧಿಕಾರಿ ವಿರುದ್ಧ ಅಧಿಕಾರ ದುರುಪಯೋಗದ ಗಂಭೀರ ಆರೋಪ

ವರ್ಗಾವಣೆ ಬಳಿಕವೂ ಚೆಕ್ ಡ್ರಾ: ಹುಳಿಯಾರು ಪಪಂ ಹಿಂದಿನ ಮುಖ್ಯಾಧಿಕಾರಿ ವಿರುದ್ಧ ಅಧಿಕಾರ ದುರುಪಯೋಗದ ಗಂಭೀರ ಆರೋಪ ​ ಹುಳಿಯಾರು : ​ಹುಳಿಯಾರು ಪಟ್ಟಣ ಪಂಚಾಯಿತಿಯ ಹಿಂದಿನ ಮುಖ್ಯಾಧಿಕಾರಿ ನಾಗಭೂಷಣ್ ಅವರು ವರ್ಗಾವಣೆಗೊಂಡು ಅಧಿಕಾರದಿಂದ ಬಿಡುಗಡೆಗೊಂಡ ನಂತರವೂ ಪಟ್ಟಣ ಪಂಚಾಯಿತಿಯ ಚೆಕ್‌ಗಳನ್ನು ಆನ್‌ಲೈನ್ ಮೂಲಕ ಡ್ರಾ ಮಾಡಿಸುವ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಹಾಲಿ ಪ.ಪಂ. ಕೌನ್ಸಿಲರ್ ಅಬೂಬಕರ್ ಸಿದ್ದೀಕ್ ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಈ ಸಂಬಂಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ​ ಆರೋಪ : ​ಮಾಧ್ಯಮದ ಮುಂದೆ ದಾಖಲೆಗಳನ್ನು ಪ್ರದರ್ಶಿಸಿದ ಅಬೂಬಕರ್ ಸಿದ್ದೀಕ್ ಅವರು, ನಾಗಭೂಷಣ್ ಅವರು ಆಗಸ್ಟ್ ತಿಂಗಳಲ್ಲಿ ಹುಳಿಯಾರಿನಿಂದ ವರ್ಗಾವಣೆಗೊಂಡ ಬಳಿಕದ ಚಟುವಟಿಕೆಗಳನ್ನು ವಿವರಿಸಿದರು. ​ ರಿಲೀವ್ ಮತ್ತು ಜಾಯಿನ್ : ಮುಖ್ಯಾಧಿಕಾರಿಯಾಗಿದ್ದ ನಾಗಭೂಷಣ್ ಅವರು ಆಗಸ್ಟ್ 12 ರಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರದಿಂದ ಬಿಡುಗಡೆಗೊಂಡಿದ್ದರು. ಅದಾದ ಬಳಿಕ ಆಗಸ್ಟ್ 14 ರಂದು ಗಂಗಾವತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ​ ಚೆಕ್ ಡ್ರಾ 1 (ವರ್ಗಾವಣೆ ಬಳಿಕ) : ಅವರು ಗಂಗಾವತಿಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನವೇ, ಅಂದರೆ ಆಗಸ್ಟ್ 14 ರಂದು ಸಂಜೆ 5 ಗಂಟೆ 35 ನಿಮಿಷಕ್ಕೆ ಹುಳಿಯಾರು ಪ.ಪಂ.ನ ಚೆಕ್ ಅನ್ನು ಡ್ರಾ ಮಾಡಲಾಗಿದೆ. ಈ ...

ಹುಳಿಯಾರು ರೈತ ಸಂಘದ ಧರಣಿ ಅಂತ್ಯಕ್ಕೆ ಮುಹೂರ್ತ: ಶಾಸಕ ಸಿ.ಬಿ. ಸುರೇಶ್ ಬಾಬು ಭೇಟಿ, ಮೂರು ಬೇಡಿಕೆ ಈಡೇರಿಸುವ ಭರವಸೆ

ಹುಳಿಯಾರು ರೈತ ಸಂಘದ ಧರಣಿ ಅಂತ್ಯಕ್ಕೆ ಮುಹೂರ್ತ: ಶಾಸಕ ಸಿ.ಬಿ. ಸುರೇಶ್ ಬಾಬು ಭೇಟಿ, ಮೂರು ಬೇಡಿಕೆ ಈಡೇರಿಸುವ ಭರವಸೆ ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಎದುರು ರೈತ ಸಂಘದ ಮುಖಂಡ ಚಂದ್ರಪ್ಪ ಅವರ ನೇತೃತ್ವದಲ್ಲಿ ಕಳೆದ 26 ದಿನಗಳಿಂದಲೂ ನಡೆಯುತ್ತಿದ್ದ ಅಹೋರಾತ್ರಿಯ ಧರಣಿ ಸೋಮವಾರ  ಸಂಜೆ ನಿರ್ಣಾಯಕ ಹಂತಕ್ಕೆ ತಲುಪಿತು. ​ಹುಳಿಯಾರು ಪಟ್ಟಣ ಪಂಚಾಯಿತಿ ಮುಂದೆ ರೈತ ಸಂಘದ ಚಂದ್ರಪ್ಪ ನೇತೃತ್ವದಲ್ಲಿ ಕಳೆದ 26 ದಿನಗಳಿಂದಲೂ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿಲ್ಲಿಸುವಂತೆ ಒತ್ತಾಯಿಸಿ, ಸೋಮವಾರ ಸಂಜೆ ಶಾಸಕ ಸಿಬಿ ಸುರೇಶ್ ಬಾಬು ಅವರು ತಹಸಿಲ್ದಾರ್ ಅವರೊಂದಿಗೆ ಸ್ಥಳಕ್ಕೆ ಆಗಮಿಸಿ ಚಂದ್ರಪ್ಪ ಅವರೊಂದಿಗೆ ಮಾತುಕತೆ ನಡೆಸಿದರು. ಧರಣಿ ನಿರತರ ಮೂರು ಬೇಡಿಕೆಗಳು ಮತ್ತು ಅವುಗಳ ಈಡೇರಿಕೆಗೆ ಶಾಸಕರು ನೀಡಿದ ಭರವಸೆಗಳು ಹೀಗಿದೆ: 1. ಶೌಚಾಲಯದ ಸಮಸ್ಯೆ : ಶಾಸಕರ ಭರವಸೆಯಂತೆ, ಶೌಚಾಲಯದ ನಿರ್ವಹಣೆ ಮಾಡಲು ಈಗಾಗಲೇ ಮುಂದಾಗಿದ್ದು, ನಾಳೆಯಿಂದಲೇ  ಅದು ಪ್ರಾರಂಭವಾಗಲಿದೆ ಎಂದರು. 2. ಸಂತೆ ಸ್ಥಳಾಂತರ: ವಾರಕ್ಕೊಮ್ಮೆ ನಡೆಯುವ ಸಂತೆಯನ್ನು ಎಪಿಎಂಸಿ ಮುಂಭಾಗದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಲು ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು ಗುರುತಿಸಲಾದ ಜಾಗವನ್ನು ವ್ಯಾಪಾರದಾರರಿಗೆ ಅನುವು ಮಾಡಿಕೊಡಲು ಮಣ್ಣು ಹೊಡೆಸಿ ಸಮತಟ್ಟು ಮಾಡಿಸಲಾಗುತ್ತಿದ್ದು, ಇದು ಮುಗಿಯಲು ಇನ್ನೂ ಎರಡು ದಿನಗಳು ಬೇಕಾಗುತ್ತದೆ ಎಂ...

ಶಾಸಕ ಸಿ.ಬಿ. ಸುರೇಶ್‌ಬಾಬು ಅವರಿಂದ ಸಂತೆ ಸ್ಥಳ ವೀಕ್ಷಣೆ: ಎಪಿಎಂಸಿ ಮುಂಭಾಗದಲ್ಲಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ

​ ಶಾಸಕ ಸಿ.ಬಿ. ಸುರೇಶ್‌ಬಾಬು ಅವರಿಂದ ಸಂತೆ ಸ್ಥಳ ವೀಕ್ಷಣೆ: ಎಪಿಎಂಸಿ ಮುಂಭಾಗದಲ್ಲಿ ಶಾಶ್ವತ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಸಿದ್ಧತೆ ​ ಹುಳಿಯಾರು : ಸ್ಥಳಾಂತರಗೊಂಡಿರುವ ಸಂತೆ ಮಾರುಕಟ್ಟೆಯನ್ನು ಶಾಶ್ವತವಾಗಿ ಎಪಿಎಂಸಿ ಮುಂಭಾಗದ ವಿಶಾಲ ಜಾಗದಲ್ಲಿ ನಿರ್ಮಿಸಲು ಶಾಸಕ ಸಿ.ಬಿ. ಸುರೇಶ್‌ಬಾಬು ಅವರು ಒಪ್ಪಿಗೆ ಸೂಚಿಸಿದ್ದು, ಈ ನಿಟ್ಟಿನಲ್ಲಿ ಸ್ಥಳವನ್ನು ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದ್ದು ಸ್ಥಳಕ್ಕೆ  ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಕಾಮಗಾರಿಯ ಪ್ರಗತಿ ವೀಕ್ಷಿಸಿದರು. ​ ಕಾಯಂ ಸಂತೆ ನಿರ್ಮಾಣಕ್ಕೆ ಒತ್ತು:  ಎಪಿಎಂಸಿ ಮುಂಭಾಗದ ಜಾಗವನ್ನು ಕಾಯಂ ಸಂತೆ ಸ್ಥಳವನ್ನಾಗಿ ಅಭಿವೃದ್ಧಿಪಡಿಸುವಂತೆ ಈ ಹಿಂದೆ ಒತ್ತಾಯಿಸಲಾಗಿತ್ತು. ಶಾಸಕರು ಈ ಬೇಡಿಕೆಗೆ ಸಮ್ಮತಿಸಿದ್ದು, ಕಳೆದ ಎರಡು ದಿನಗಳಿಂದ ಟಿಪ್ಪರ್‌ಗಳ ಮೂಲಕ ಮಣ್ಣು ಸುರಿಸಿ ಸ್ಥಳವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಶಾಸಕರು, ಕಾಮಗಾರಿ ಗುಣಮಟ್ಟದಿಂದ ಹಾಗೂ ತ್ವರಿತವಾಗಿ ನಡೆಯುವಂತೆ ಇಂಜಿನಿಯರ್‌ಗಳಿಗೆ ಸೂಚಿಸಿದರು. ​ ಚರಂಡಿ ಬಗ್ಗೆ ಗಮನ :  ಸಂತೆ ಸ್ಥಳದ ಪಕ್ಕದಲ್ಲಿ ಹರಿಯುತ್ತಿರುವ ಚರಂಡಿಯ ಸಮಸ್ಯೆ ಬಗ್ಗೆಯೂ ಶಾಸಕರು ಗಮನಹರಿಸಿದರು. ಈ ಕುರಿತು ರಾಷ್ಟ್ರೀಯ ಹೆದ್ದಾರಿ (NH) ಇಂಜಿನಿಯರ್ ಅವರೊಂದಿಗೆ ತಕ್ಷಣ ಮಾತನಾಡಿ, ಚರಂಡಿ ಮುಚ್ಚುವುದು ಸೇರಿದಂತೆ ಅಗತ್ಯ ಕ್ರಮ...